ಮಂಡ್ಯ : ಕೇಂದ್ರ ಸಚಿವ ಹೆಚ್ಡಿಕೆ ಟ್ರಾಮಾ ಕೇರ್ ಸೆಂಟರ್ ಗೆ ಜಾಗ ಕೊಡಿ ಅಂತ ಡಿಸಿ ಗೆ ಪತ್ರ ಬರೆದಿದ್ದಾರೆ, ಸ್ವಾಗತ ಕೋರುತ್ತೇನೆ. ಇದು ಸುಮಲತಾ ಎಂಪಿ ಆಗಿದ್ದಾಗ ಬಂದಂತಹ ಕಾರ್ಯಕ್ರಮ. ಮಂಡ್ಯದ ಆಸ್ಪತ್ರೆಯ ಪಕ್ಕದಲ್ಲೇ ಜಾಗ ಕೊಡಲು ಸಿದ್ದ ಇದ್ದೇವೆ. ಕೇಂದ್ರ ಸರ್ಕಾರ ಕುಂಟುತ್ತಾ ಇದಕ್ಕೆ ಒಪ್ಪಲಿಲ್ಲ. ನೂರೆಂಟು ಸಬೂಬೂ ಹೇಳಿ ಸ್ಟಾಪ್ ಮಾಡಿದ್ರು. ನಮ್ಮ ಪ್ರಭಾವಿ ಕೇಂದ್ರ ಸಚಿವ ಹೆಚ್ಡಿಕೆ ಅವರು ಜಾಗ ಕೇಳಿದ್ದಾರೆ. ಯಾವ ಕಾರ್ಖಾನೆ ತರ್ತಿರ ಹೇಳಿ ಜಾಗ ನಾವು ಕೊಡ್ತೇವೆ ಎಂದು ಗಣಿಗ ರವಿಕುಮಾರ್ ತಿಳಿಸಿದರು.
ಕಳೆದ ಕೆಡಿಪಿ ಸಭೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಅನ್ನ ಮದ್ದೂರಿಗೆ ಶಾಸಕರು ಕೇಳಿದ್ರು. ಸಚಿವ ಚಲುವರಾಯಸ್ವಾಮಿ ಕೂಡ ಒಪ್ಪಿಗೆ ಸೂಚಿಸಿದ್ರು. ಆದ್ರೇ ಕೇಂದ್ರ ಸಚಿವರು ಮದ್ದೂರಿಗೆ ನಿರಾಕರಿಸಿದ್ರೆ ನಾವು ಜಾಗ ಕೊಡಲು ರೆಡಿ ಇದ್ದೇವೆ. ಟ್ರಾಮಾ ಕೇರ್ ಸೆಂಟರ್ ಗೆ ಡಿಎಚ್ಓ ಕಚೇರಿ ಜಾಗದಲ್ಲೇ ನಾವು ಜಾಗ ಕೊಡ್ತೇವೆ. ಕೇಂದ್ರ ಸಚಿವ ರಿಗೆ ಪತ್ರ ಬರೆದಿದ್ದೇನೆ. ಕೂಡಲೇ ಟ್ರಾಮಾ ಕೇರ್ ಸೆಂಟರ್ ಮಾಡಲಿ. ಕುಮಾರಸ್ವಾಮಿ ಅವರ ಎದುರೇ ಇಂಡಸ್ಟ್ರೀಸ್ ಗೆ ಜಾಗ ಗುರ್ತಿಸಿರುವ ಬಗ್ಗೆ ಹೇಳಿದ್ದೇನೆ. ಇದು ಹಿಟ್ ಅಂಡ್ ರನ್ ಆಗಬಾರದು. ಹೊಸ ಶುಗರ್ ಫ್ಯಾಕ್ಟರಿ ಮಾಡಲು ಜಾಗ ಗುರ್ತಿಸಲಾಗಿದೆ.
ಯಾವ ಕಾರ್ಖಾನೆ ತರ್ತಾರೆ ಅಂತ ಹೇಳಲಿ ನಾವು ಜಾಗ ಕೊಡ್ತೇವೆ ಸರ್ಕಾರಿ ಜಾಗ 100 ಎಕರೆ ಇದೆ 500 ಎಕರೆ ಜಾಗ ಅಕ್ವೆರ್ ಮಾಡಿಕೊಳ್ಳಬಹುದು. ಬಸರಾಳು ನಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿ. ಕುಮಾರಣ್ಣ ಅತ್ರ ಸುಪರ್ ಪವರ್ ಶಕ್ತಿ ಇದೆ. ಕುಮಾರಣ್ಣ ದೇಶದ ಬೃಹತ್ ಮತ್ತು ಉಕ್ಕು ಕೈಗಾರಿಕಾ ಸಚಿವರು. ಅವರು ಚಿಟಕಿ ಹೊಡೆದರೆ ಕಂಪನಿಗಳು ಪರೋದಕ್ಕೆ ರೆಡಿ ಇವೆ.
ನಾನು ಕುಮಾರಣ್ಣ ಬಗ್ಗೆ ವ್ಯಂಗ್ಯ ಮಾಡಲ್ಲ. ಮಂಡ್ಯದ ನಿರುದ್ಯೋಗ ಯುವಕರ ಕಾಳಜಿಯಿಂದ ಹೇಳ್ತಿದ್ದೇನೆ. ಟ್ರಾಮಾ ಕೇರ್ ಗೆ ನಾನೇ ಖುದ್ದು ಪತ್ರ ಬರೆದಿದ್ದೇನೆ.ಸುಮ್ಮನೆ ಕುಳಿತುಕೊಂಡು ಮಂಗ ಮಾಡೋದು ಬೇಡ. ನಾನು ಕಾನೂನು, ನೀವು ಕಾನೂನು ನಲ್ಲೇ ಕೆಲಸ ಮಾಡೋಣ. ಜಾಗ ಎಷ್ಟು ಬೇಕು ಕೇಳಿ ಅಷ್ಟೇ ಜಾಗ ಕೊಡ್ತೇವೆ. ಯಾರನ್ನು ಮಂಗ, ಬಕ್ರ ಮಾಡೋದು ಬೇಡ.
ಸುಮ್ಮನೆ ಬಂದಾಗೆಲ್ಲ ಜಾಗ ಕೊಡ್ತಿಲ್ಲ ಅಂತ ಹೇಳೋದಲ್ಲ. ಯಾವ ಕಂಪನಿ ತರ್ತಿರಾ? ಹೇಳಿ ಜಾಗ ಕೊಟ್ಟಿಲ್ಲ ಅಂದ್ರೆ ನನ್ನ ಮೇಲೆ ದೂರಿ. ಬರಿ ಭಾಷಣಕ್ಕೆ ಸೀಮಿತವಾಗಬೇಡಿ. ಜನಕ್ಕೆ ಒಳ್ಳೆಯದಾಗಬೇಕು ಅಷ್ಟೆ. ಕುಮಾರಣ್ಣ ದೇಶ, ರಾಜ್ಯ ಆಳಿದವರು ಅವರಿಗೆ ಗೊತ್ತಿಲ್ವಾ? ಟ್ರಾಮಾ ಸೆಂಟರ್ ಕೇರ್ ಬಗ್ಗೆ ಸಭೆ ಕರೆಯಲಿ.
ಮೈಶುಗರ್ ಸ್ಕೂಲ್ ಗೆ 25 ಕೋಟಿ ಕೊಡ್ತಿನಿ ಅಂತ ಸಂಬಳದಲ್ಲಿ 19 ಲಕ್ಷ ಕೊಟ್ಟು ನುಡಿದಂತೆ ನಡೆದಂಗಲ್ಲ 25 ಕೋಟಿ ಕೊಟ್ಟಾಗ ನುಡಿದಂತೆ ನಡೆದ. ಮಂಗ ಮಾಡ್ಕೊಂಡು ಹೋಗೋದು ಸರಿಯಲ್ಲ. ಜಾಗ ಕೊಡ್ತಿಲ್ಲ ಅಂತ ಸುಮ್ಮನೆ ಬಯೋದ್ದಲ್ಲ. ತಪ್ಪಿದ್ದರೆ ಸರಿಪಡಿಸಿ ನೀವು ಮಾಜಿ ಮುಖ್ಯಮಂತ್ರಿ. ಮೈಶುಗರ್ ಶಾಲೆಯಲ್ಲಿ ಶಿಕ್ಷಣ ನಡೆಸಲಾಗುತ್ತಿಲ್ಲ , ಟೆಂಡರ್ ಕರೆಯೋಣ , ಜಾಗ ಅಲ್ಲೆ ಇರುತ್ತೆ. ಅಂತ ಹೇಳಿದ್ದು.ನಾನೇ ಸಭೆ ಮಾಡಿ ಖಾಸಗೀಕರಣ ಮಾಡೋದನ್ನ ನಿಲ್ಲಿಸಿದ್ದೆ. ಯಾವ ಕಾರ್ಖಾನೆ ತರ್ತಿರ ಹೇಳಿ ಜಾಗ ರೆಡಿ ಇದೆ ಎಂದು ಸವಾಲು ಹಾಕಿದ್ದಾರೆ.








