ಹೈದರಾಬಾದ್: ಹೊಸದಾಗಿ ನಿರ್ಮಿಸಲಾದ ತೆಲಂಗಾಣ ರಾಜ್ಯ ಸಚಿವಾಲಯಕ್ಕೆ ಭಾರತದ ಸಂವಿಧಾನದ ಸಂಸ್ಥಾಪಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಇಂದು ಘೋಷಿಸಿದರು.
ಈ ನಿರ್ಧಾರವನ್ನು ಅನುಷ್ಠಾನಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.