ಹೈದರಾಬಾದ್: ವಾಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ರೀಲ್ಸ್ ಮಾಡುವಾಗ ಗಾಯಗೊಂಡಿದ್ದ ಹನಮಕೊಂಡ ಜಿಲ್ಲೆಯ ವಡ್ಡೆಪಲ್ಲಿ ನಿವಾಸಿ ಅಕ್ಷಯ್ ರಾಜ್ (17) ಸಾವನ್ನಪ್ಪಿದ್ದಾನೆ.
ಹನಮಕೊಂಡದ ಕಾಜಿಪೇಟ್ ರೈಲ್ವೆ ನಿಲ್ದಾಣದ ಬಳಿಯ ವಡ್ಡೆಪಲ್ಲಿ ಬಳಿ ರೈಲ್ವೆ ಹಳಿಗಳ ಮೇಲೆ ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಭಾನುವಾರ ವೀಡಿಯೊ ಚಿತ್ರೀಕರಣ ನಡೆಸುತ್ತಿದ್ದಾಗ ಅಕ್ಷಯ್ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇದೀಗ ಚಿಕಿತಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಅಕ್ಷಯ್ ವಡ್ಡೆಪಲ್ಲಿಯ ಇಂಟರ್ ಮೀಡಿಯೇಟ್ ಪ್ರಥಮ ವರ್ಷದ ವಿದ್ಯಾರ್ಥಿ. ಅಕ್ಷಯ್ ರೀಲ್ಸ್ ಮಾಡಲು ಕೈಗಳನ್ನು ಪ್ಯಾಂಟ್ ಜೇಬಿನೊಳಗೆ ಇರಿಸಿ ಚಲಿಸುತ್ತಿದ್ದ ರೈಲಿನ ಮುಂದೆ ನಡೆದುಕೊಂಡು ಬರುತ್ತಿದ್ದನು. ಈ ವೇಳೆ ಆತನ ಸ್ನೇಹಿತ ಅಕ್ಷರ್ಗೆ ಸೈಡಿಗೆ ಬರುವಂತೆ ಎಚ್ಚರಿಕೆ ನೀಡಿದ. ಆದ್ರೆ, ಅಷ್ಟರಲ್ಲೇ ರೈಲು ಅಕ್ಷಯ್ಗೆ ಡಿಕ್ಕಿ ಹೊಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
#Why pic.twitter.com/xFuG0UN2h4
— Vishal Dharm (@VishalDharm1) September 4, 2022
BIGG NEWS: ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಕ್ಕೆ ರಸ್ತೆಗಳು ಮುಳುಗಡೆ; ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ
ಚಲಿಸುತ್ತಿದ್ದ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಿ ಹತ್ತಿದ ವೃದ್ಧ!… ಇಲ್ಲಿದೆ Viral Video