ತೆಲಂಗಾಣ : ವಿಷಪೂರಿತ ಆಹಾರ ಸೇವನೆ ಮಾಡಿ ಸುಮಾರು 31 ವಿದ್ಯಾರ್ಥಿಗಳು ಅಸ್ವತ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತೆಲಂಗಾಣದ ಕುಮಾರಭೀಮ್ ಆಸಿಫಾಬಾದ್ ಜಿಲ್ಲೆಯ ಕಗಜ್ನಗರ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಮುರುಘಶ್ರೀಗೆ ಜೈಲುವಾಸ : ಸಂಕಷ್ಟದಲ್ಲಿ ಮುರುಘಾ ಮಠದ ವಿದ್ಯಾಸಂಸ್ಥೆಯ 3 ಸಾವಿರ ಸಿಬ್ಬಂದಿ..!
ನಿನ್ನೆ ಸೋಮವಾರ ರಾತ್ರಿ ಊಟ ಮಾಡಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಕಾಗಜನಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದ ಪೊಲೀಸರು ಶಾಲೆಗೆ ತೆರಳಿ ಘಟನೆ ಸಂಬಂಧ ಮಾಹಿತಿ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರಿ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಆಹಾರ ವಿಷ ಮತ್ತು ನೀರಿನ ಮಾಲಿನ್ಯವು ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಗ್ಯಾಸ್ಟ್ರೋಎಂಟರಿಕ್ ಈ ಋತುವಿನಲ್ಲಿ ಜನರು ಪಡೆಯುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ನೀರು ಕಲುಷಿತಗೊಳ್ಳುವ ಸಾಧ್ಯತೆಗಳು ಹೆಚ್ಚಿರುವುದರಿಂದ ಕಾಮಾಲೆ, ವಾಂತಿ ಮತ್ತು ಭೇದಿ ಸಹ ಸಾಮಾನ್ಯವಾಗಿದೆ. ಎಂದು ಅಪೋಲೋ ಆಸ್ಪತ್ರೆಗಳ ಹಿರಿಯ ಸಲಹೆಗಾರ ಡಾ ಸುರಂಜಿತ್ ಚಟರ್ಜಿ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಮಳೆಗಾಲದಲ್ಲಿ ಆಹಾರ ವಿಷಪೂರಿತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು ಹಲವು ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಬಗ್ಗೆ IMD ಮುನ್ಸೂಚನೆ ನೀಡಿದೆ.
ಹೀಗೆ ಹೊಲಿ ಅಂದ್ರೆ ..ಹೆಂಗ್ ಹೆಂಗೋ ಹೊಲಿದ ಟೈಲರ್ : ಬ್ರ್ಯಾಂಡೆಡ್ ಬಟ್ಟೆ ಅಂದ ಕೆಡಿಸಿದ್ದಕ್ಕೆ ಬಿತ್ತು 10 ಸಾವಿರ ದಂಡ