ತೆಲಂಗಾಣ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ತೆಲಂಗಾಣ ಇಂಧನ ಸಚಿವ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕ ಗುಂಟಕಂಡ್ಲಾ ಜಗದೀಶ್ ರೆಡ್ಡಿ ಅವರಿಗೆ 48 ಗಂಟೆಗಳ ಕಾಲ ಮುನುಗೋಡು ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
ಗುಂಟಕಂಡ್ಲಾ ಜಗದೀಶ್ ರೆಡ್ಡಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಅಕ್ಟೋಬರ್ 25ರಂದು ಮುನುಗೋಡು ಉಪಚುನಾವಣೆ ಸಲುವಾಗಿ ನಡೆಸಿದ ಪ್ರಚಾರದಲ್ಲಿ ಸಾರ್ವಜನಿಕ ಭಾಷಣದಲ್ಲಿ ಜಗದೀಶ್ ರೆಡ್ಡಿ ಅವರು ಕಾರ್ ಚಿಹ್ನೆಗೆ (ಬಿಆರ್ಎಸ್ ಚುನಾವಣಾ ಚಿಹ್ನೆ) ಮತ ನೀಡದಿದ್ದರೆ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲಾಗುವುದು.
ಈ ಚುನಾವಣೆ ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಮತ್ತು ರಾಜಗೋಪಾಲ್ ರೆಡ್ಡಿ ನಡುವಿನ ಚುನಾವಣೆಯಲ್ಲ. ಇದು ₹ 2,000 ಪಿಂಚಣಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಚುನಾವಣೆಯಾಗಿದೆ. ರೈತ ಬಂಧು ಮುಂದುವರಿಸಬೇಕೋ ಬೇಡವೋ, ಉಚಿತ 24 ಗಂಟೆ ವಿದ್ಯುತ್ ಮುಂದುವರಿಸಬೇಕೋ ಬೇಡವೋ” ಯಾರಿಗಾದರೂ ಪಿಂಚಣಿ ಬಗ್ಗೆ ಆಸಕ್ತಿಯಿಲ್ಲದಿದ್ದರೆ, ಅವರು (ಪ್ರಧಾನಿ ನರೇಂದ್ರ ಮೋದಿ) ಅವರಿಗೆ ಮತ ಹಾಕಬಹುದು. ಯಾರಿಗಾದರೂ ಯೋಜನೆಗಳು ಬೇಕಾದರೆ, ಕೆಸಿಆರ್ (ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್) ಗೆ ಮತ ನೀಡಿ” ಎಂದು ಅವರು ಹೇಳಿದ್ದರು.
ಇದನ್ನು ಆರೋಪಿಸಿ ಜಗದೀಶ್ ರೆಡ್ಡಿ ವಿರುದ್ಧ ಬಿಜೆಪಿಯ ಕಪಿಲವಾಯಿ ದಿಲೀಪ್ ಕುಮಾರ್ ಅವರು ಅಕ್ಟೋಬರ್ 26 ರಂದು ದೂರು ದಾಖಲಿಸಿದ್ದಾರೆ. ಆದ್ರೆ, ಇದಕ್ಕೆ ಉತ್ತರಿಸಿದ ಸಚಿವರು, ಜನರು ಸ್ಪರ್ಧಿಸುವ ಅಭ್ಯರ್ಥಿಗೆ ಮತ ನೀಡದಿದ್ದರೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಾಗಿ ಯಾವುದೇ ಭಾಷಣ ಮಾಡಿಲ್ಲ. ರಾಜ್ಯ ಸರ್ಕಾರದಿಂದ ನೀಡುತ್ತಿರುವ ಕಲ್ಯಾಣ ಯೋಜನೆಗಳನ್ನು ವಿವರಿಸುವ ಪ್ರಯತ್ನ ಇದಾಗಿದೆ. ಬಿಜೆಪಿ ನಾಯಕರ ಆರೋಪಗಳು ಅಸ್ಪಷ್ಟ, ಸುಳ್ಳು ಎಂಬ ಹೇಳಿಕೆ ನೀಡಿದ್ದಾರೆ.
ಆದರೆ ರೆಡ್ಡಿ ಅವರು ಮಾಡಿದ ಭಾಷಣದ ಧ್ವನಿಯು “ಮತದಾರರನ್ನು ಬೆದರಿಸುವ ಸ್ವರೂಪದಲ್ಲಿದೆ” ಮತ್ತು ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಮನವರಿಕೆಯಾಗಿದೆ ಎಂದು ಇಸಿ ಹೇಳಿದೆ.