ದೆಹಲಿ : ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಶನಿವಾರ ಮುಂಜಾನೆ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರಿಗೆ ವೈದ್ಯರಾಗಿ ಚಿಕಿತ್ಸೆ ನೀಡಲು ಮುಂದಾದರು.
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಡಾ.ಸೌಂದರರಾಜನ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸ್ತ್ರೀರೋಗ ತಜ್ಞರಾಗಿದ್ದರು. ಅವರು ನವದೆಹಲಿಯಿಂದ ಹೈದರಾಬಾದ್ಗೆ ಹಿಂದಿರುಗುತ್ತಿದ್ದಾಗ, ಇಂಡಿಗೋ ವಿಮಾನದ ಸಿಬ್ಬಂದಿಯಿಂದ ಎಸ್ಒಎಸ್ ಘೋಷಣೆಯಾಗಿತ್ತು. ರಾಜ್ಯಪಾಲರು ತಕ್ಷಣವೇ ಕರೆಗೆ ಸ್ಪಂದಿಸಿದರು ಮತ್ತು ರೋಗಿಗೆ ಚಿಕಿತ್ಸೆ ನೀಡಲು ಕಾರ್ಯಪ್ರವೃತ್ತರಾದರು
Today I have onboarded with @DrTamilisaiGuv and she treated a patient who fell ill on Air on Delhi-Hyd bound flight. @IndiGo6E @TelanganaCMO @bandisanjay_bjp @BJP4India @TV9Telugu @V6News pic.twitter.com/WY6Q31Eptn
— Ravi Chander Naik Mudavath 🇮🇳 (@iammrcn) July 22, 2022
ಇಂಡಿಗೋ ಆನ್-ಏರ್ ಸಿಬ್ಬಂದಿ, ಪ್ರಯಾಣಿಕರೊಬ್ಬರು ಎದೆನೋವು ದೂರು ನೀಡಿದಾಗ ತಕ್ಷಣ ವಿಮಾನದಲ್ಲಿ ಎಚ್ಚರಿಕೆ ನೀಡಲಾಯಿತು. ಈ ಕರೆಗೆ ಪ್ರತಿಕ್ರಿಯಿಸಿದ ಡಾ. ಸೌಂದರರಾಜನ್, “ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿ ಚಪ್ಪಟೆಯಾಗಿ ಮಲಗುವಂತೆ ತಿಳಿಸಿದರು ಬಳಿಕ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೋಗಿ ಜೀವವನ್ನು ರಕ್ಷಿಸಿದರು. ಗಾಲಿಕುರ್ಚಿಯಲ್ಲಿ ವಿಮಾನ ನಿಲ್ದಾಣದ ವೈದ್ಯಕೀಯ ಬೂತ್ಗೆ ಸಾಗಿಸಲಾಯಿತು” ಎಂದು ಅವರ ಅಧಿಕೃತ ಖಾತೆಯ ಟ್ವೀಟ್ನಲ್ಲಿ ತಿಳಿಸಲಾಗಿದೆ.