ಜಮ್ಶೆಡ್ಪುರ(ಜಾರ್ಖಾಂಡ್): 15 ವರ್ಷದ ಯುವತಿಯೊಬ್ಬಳು ತನ್ನ 37 ವರ್ಷದ ಗೆಳೆಯನೊಂದಿಗೆ ಓಡಿ ಹೋಗಿ ಮದುವೆಯಾಗಲು ಯತ್ನಿಸಿದ್ದಾಳೆ. ಈ ವೇಳೆ ಅವರನ್ನು ತಡೆಯಲು ಬಂದ ಪೋಷಕರನ್ನು ಸುತ್ತಿಗೆ ಮತ್ತು ಪ್ರೆಶರ್ ಕುಕ್ಕರ್ನಿಂದ ಕೊಂದ ಘಟನೆ ಜಮ್ಶೆಡ್ಪುರದಲ್ಲಿ ನಡೆದಿದೆ.
ಸೋಮವಾರ ಟೆಲ್ಕೋ ಪೊಲೀಸ್ ಠಾಣೆ ವ್ಯಾಪ್ತಿಯ ಮ್ಯಾನಿಫಿಟ್ನಲ್ಲಿರುವ ಅವರ ಮನೆಯಲ್ಲಿ ದಂಪತಿಗಳು ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಅವರ 15 ವರ್ಷದ ಮಗಳು ಕಾಣೆಯಾಗಿದ್ದಾಳೆ ಎನ್ನಲಾಗಿದೆ.
24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸುವುದಾಗಿ ಹೇಳಿರುವ ಪೊಲೀಸ್ ಅಧೀಕ್ಷಕ (ನಗರ) ಕೆ ವಿಜಯ್ ಶಂಕರ್, ಮಂಗಳವಾರ ಬೆಳಿಗ್ಗೆ ಬಿರ್ಸಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಓಂನಗರದಲ್ಲಿರುವ ತನ್ನ ಬಾಡಿಗೆ ಮನೆಯಿಂದ ಹುಡುಗಿ ಮತ್ತು ಅವಳ ಗೆಳೆಯನನ್ನು ಬಂಧಸಲಾಗಿದೆ ಎಂದು ಹೇಳಿದ್ದಾರೆ.
ಬಾಲಕಿ ಭಾನುವಾರ ರಾತ್ರಿ ತನ್ನ ಗೆಳೆಯನೊಂದಿಗೆ ತನ್ನ ಮನೆಯಿಂದ ಓಡಿಹೋಗಿ ಮದುವೆಯಾಗಲು ಹೊರಟಿದ್ದಳು. ಆದರೆ, ಆಕೆಯ ಪೋಷಕರು ಆಕೆಯನ್ನು ತಡೆಯಲು ಯತ್ನಿಸಿದಾಗ ಅವರನ್ನು ಸುತ್ತಿಗೆ ಮತ್ತು ಪ್ರೆಶರ್ ಕುಕ್ಕರ್ನಿಂದ ಹೊಡೆದು ಕೊಂದಿದ್ದಾರೆ. ಬಳಿಕ ಗೆಳೆಯನೊಂದಿಗೆ ಆತನ ಸ್ಕೂಟರ್ನಲ್ಲಿ ತಪ್ಪಿಸಿಕೊಂಡು ಆತನ ಮನೆಗೆ ಹೋಗಿದ್ದಳು.
302 (ಕೊಲೆ) ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎಫ್ಬಿಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಾಲಿ ನಟ, ಆಸ್ಪತ್ರೆಗೆ ದಾಖಲು