ಪಶ್ಚಿಮ ಬಂಗಾಳ: ಅಕ್ರಮ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಂಭೀವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಪಂಸ್ಕುರಾದಲ್ಲಿ ನಡೆದಿದೆ.
ಪಂಸ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಧುಪೋಟ ಗ್ರಾಮದ ಶ್ರೀಕಾಂತ ಭಕ್ತ ಎಂಬುವವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಇದು ಪಂಶ್ಕುರಾದಲ್ಲಿ ಅಕ್ರಮ ಪಟಾಕಿ ಘಟಕವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರನ್ನು 16 ವರ್ಷದ ಪ್ರದೀಪ್ ಸಮಂತ ಎಂದು ಗುರುತಿಸಲಾಗಿದ್ದು, ಗಾಯಗೊಂಡ 50 ವರ್ಷದ ವ್ಯಕ್ತಿಯನ್ನು ಸ್ವರ್ಣಲತಾ ಭಕ್ತ ಎಂದು ಗುರುತಿಸಲಾಗಿದೆ.
ಶ್ರೀಕಾಂತ ಭಕ್ತ ಅವರು ಎರಡು ವರ್ಷಗಳ ಕಾಲ ಘಟಕ ನಡೆಸಲು ಪರವಾನಗಿ ಹೊಂದಿದ್ದರು.ಆದರೆ ಪಟಾಕಿ ತಯಾರಿಕೆಗೆ ಪರವಾನಗಿ ನವೀಕರಿಸದೆ ಕಾರ್ಖಾನೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಪಟಾಕಿ ಘಟಕ ನಡೆಸುವ ಪರವಾನಗಿ ಅವಧಿ ಮುಗಿದಿದೆ ಎಂದು ಪೊಲೀಸರು ತಿಳಿಸಿದ್ದರಂತೆ.
Job Alert: ‘ಸಹಾಯಕ ಪ್ರಾಧ್ಯಾಪಕರ ಹುದ್ದೆ’ಗಳ ನೇಮಕಾತಿಗೆ ಸಂದರ್ಶನ: ’57 ಸಾವಿರ’ ವೇತನ