ಕೇರಳ : ಎರಡು ಅಂತಸ್ತಿನ ಮನೆ ಕುಸಿದು 13 ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ಅಜ್ಜ ಗಾಯಗೊಂಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರಿನಲ್ಲಿ ನಡೆದಿದೆ.
BIGG NEWS : ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಕರೆದ ಅಧೀರ್ ಚೌಧರಿ, ಕ್ಷಮೆಯಾಚಿಸಲು ಬಿಜೆಪಿ ಆಗ್ರಹ
ಪೆರುಂಬವೂರಿನಲ್ಲಿ ಮುಂಜಾನೆ ಘಟನೆ ನಡೆದಿದ್ದು, ಏಕಾಏಕಿ ಮನೆ ಕುಸಿದಾಗ ಬಾಲಕ ಮತ್ತು ಅವನ ಅಜ್ಜ ಮೇಲಿನ ಮಹಡಿಯಲ್ಲಿದ್ದರು. ಪರಿಣಾಮ ಇಬ್ಬರಿಗೂ ತೀವ್ರ ಗಾಯಗೊಂಡಿದ್ದರು. ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುರುಪ್ಪಂಪಾಡಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ವೇಳೆ ಮನೆಯಲ್ಲಿ 6-7 ಜನರಿದ್ದರು, ಆದರೆ ಯಾರಿಗೂ ಗಾಯಗಳಾಗಿಲ್ಲ. ಮನೆ ಕುಸಿತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.