ಭಾರತದ ಯುವ ಕ್ರಿಕೆಟಿಗ ಹಾಗೂ ಸ್ಫೋಟಕ ಓಪನರ್ ಪೃಥ್ವಿ ಶಾ ತಮ್ಮ ವೈಯಕ್ತಿಕ ಜೀವನದ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ನಟಿ ಆಕೃತಿ ಅಗರ್ವಾಲ್ ಅವರೊಂದಿಗೆ ಪೃಥ್ವಿ ಶಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮಾರ್ಚ್ 8, 2026 ರಂದು ಈ ಸಂತಸದ ಸುದ್ದಿಯನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ.
“ಆಕೆ ನನ್ನ ಪರ್ಫೆಕ್ಟ್ ಇನ್ನಿಂಗ್ಸ್” – ಪೃಥ್ವಿ ಶಾ
ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಪೃಥ್ವಿ ಶಾ ಬರೆದುಕೊಂಡಿರುವ ಸಾಲುಗಳು ಎಲ್ಲರ ಗಮನ ಸೆಳೆಯುತ್ತಿವೆ. “ಮೈದಾನದಲ್ಲಿ ಸಿಕ್ಸರ್‌ಗಳನ್ನು ಬಾರಿಸುವುದರಿಂದ ಹಿಡಿದು.. ಮೈದಾನದ ಹೊರಗೂ ಜೀವನದುದ್ದಕ್ಕೂ ಅದೇ ಜೋಶ್ ಮುಂದುವರಿಸುವಂತೆ.. ಆಕೆ ನನ್ನ ಪರ್ಫೆಕ್ಟ್ ಇನ್ನಿಂಗ್ಸ್” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶೇರ್ ಮಾಡಲಾದ ಫೋಟೋಗಳಲ್ಲಿ ಪೃಥ್ವಿ ಮೊಣಕಾಲು ಊರಿ ಆಕೃತಿಗೆ ಉಂಗುರ ತೊಡಿಸುತ್ತಿರುವುದು ಮತ್ತು ಇಬ್ಬರೂ ಉಂಗುರವನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು.
ಯಾರೀ ಆಕೃತಿ ಅಗರ್ವಾಲ್?
ಪೃಥ್ವಿ ಶಾ ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್ ಒಬ್ಬ ಬಹುಮುಖ ಪ್ರತಿಭೆ. ಮೂಲತಃ ಲಕ್ನೋ ಮೂಲದವರಾದ ಇವರು, ಉನ್ನತ ವ್ಯಾಸಂಗಕ್ಕಾಗಿ ಮುಂಬೈಗೆ ಬಂದು ಅಲ್ಲಿ ಮಾಡೆಲಿಂಗ್ ಮತ್ತು ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇನ್ಫ್ಲುಯೆನ್ಸರ್: ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ನಟಿ: ಇವರು ‘ತ್ರಿಮುಖ’ ಎಂಬ ತೆಲುಗು ಸಿನಿಮಾದ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದ್ದು, ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಕ್ರಿಕೆಟ್ ಲೋಕದ ಗಣ್ಯರು ಮತ್ತು ಅಭಿಮಾನಿಗಳು ಈ ಹೊಸ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.








