ನವದೆಹಲಿ : ಭಾರತ ಮತ್ತು ಶ್ರೀಲಂಕಾ ನಡುವಿನ ಟಿ-20 ಸರಣಿಯು ಜನವರಿ 3 ರಿಂದ (ಮಂಗಳವಾರ) ಆರಂಭವಾಗಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಸರಣಿ ಆಡಲಿದೆ. ಈ ಸರಣಿಗೂ ಮುನ್ನ ಟೀಂ ಇಂಡಿಯಾ ಜೆರ್ಸಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.
ಸರಣಿಯ ಆರಂಭದ ಮೊದಲು, ಆಟಗಾರರ ಫೋಟೋಶೂಟ್ ನಡೆದಿದ್ದು, ಯುಜ್ವೇಂದ್ರ ಚಹಾಲ್ ಚಿತ್ರವನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ ಶ್ರೀಲಂಕಾ ಸರಣಿಯಲ್ಲಿ ಭಾಗವಹಿಸುವ ಬೌಲಿಂಗ್ ಘಟಕವೂ ಸೇರಿದೆ. ಚಿತ್ರದಲ್ಲಿ ಯುಜ್ವೇಂದ್ರ ಚಹಾಲ್ ಹೊರತುಪಡಿಸಿ, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್ ಹಾಗೂ ರಿತುರಾಜ್ ಗಾಯಕ್ವಾಡ್ ಇದ್ದಾರೆ.
ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಈ ಸರಣಿಗೆ ಪ್ರವೇಶಿಸುತ್ತಿದೆ, ಇದೀಗ ಹೊಸ ಕಿಟ್ ಪ್ರಾಯೋಜಕರ ಹೆಸರು ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹಿಂದೆ, ಬಿಸಿಸಿಐ ಲಾಂಛನದ ಹೊರತಾಗಿ, ಎಂಪಿಎಲ್ ಸ್ಪೋರ್ಟ್ಸ್ ಹೆಸರು ಕಾಣಿಸುತ್ತಿತ್ತು. ಆದ್ರೆ, ಈಗ ಇಲ್ಲಿ ‘ಕಿಲ್ಲರ್’ ಎಂದು ಬರೆಯಲಾಗಿದೆ.
ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರು ಈ ಹಿಂದೆ MPL ಸ್ಪೋರ್ಟ್ಸ್ನೊಂದಿಗೆ ಇದ್ದರು, ಅದು ಡಿಸೆಂಬರ್ 2023ರವರೆಗೆ ಉಳಿಯಬೇಕಿತ್ತು. ಆದಾಗ್ಯೂ, ಕಂಪನಿಯು ತನ್ನ ಕಳೆದ ವರ್ಷದ ಗುತ್ತಿಗೆಯನ್ನ ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟ್ಗೆ ನೀಡಿದೆ, ಅದಕ್ಕಾಗಿಯೇ ಅವ್ರು ಈಗ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ತಮ್ಮ ಲೋಗೋವನ್ನ ಹೊಂದಿದ್ದಾರೆ.
ಟಿ20 ಸರಣಿಗೆ ಟೀಂ ಇಂಡಿಯಾ ಇಂತಿದೆ.!
ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್ ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.
ಶ್ರೀಲಂಕಾದ ಭಾರತ ಪ್ರವಾಸ .!
* 1 ನೇ T20: 3 ಜನವರಿ, ಮುಂಬೈ
* 2 ನೇ T20: 5 ಜನವರಿ, ಪುಣೆ
* 3 ನೇ T20: 7 ಜನವರಿ, ರಾಜ್ಕೋಟ್
ಸಣ್ಣ ತಪ್ಪು ನಿಮ್ಮ ಸ್ಮಾರ್ಟ್ ಫೋನ್ & ವಾಟ್ಸಾಪ್ ಹ್ಯಾಕ್ ಮಾಡ್ಬೋದು ; ತಕ್ಷಣವೇ ಈ ಸೆಟ್ಟಿಂಗ್ ಬದಲಿಸಿ
SHOCKING : ಮಹಿಳೆಯ ಕಿವಿಯಿಂದ ಹೊರಬಂದ ಜೇಡ : ಬೆಚ್ಚಿಬೀಳಿಸುವ ವಿಡಿಯೋ ವೈರಲ್