ಮಂಗಳೂರು: ಮಕ್ಕಳ ಕೈಯಲ್ಲಿದ್ದ ರಾಖಿಯನ್ನು ಶಿಕ್ಷಕಿ ತೆಗೆಸಿರುವ ಘಟನೆ, ನಗರದ ಹೊರವಲಯದ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ನಡೆದಿದೆ. ಇದೇ ವೇಳೆ ಘಟನೆ ತಮ್ಮ ಗಮಕ್ಕೆ ಬರುತ್ತಿದ್ದ ಹಾಗೇ ಶಾಲೆಗೆ ಪೋಷಕರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಆಗಮಿಸಿ ಸಂಬಂಧಪಟ್ಟವರ ವಿರುದ್ದ ಧರಣಿ ನಡೆಸಿದರು.
ಕೂಡಲೇ ಮಧ್ಯೆಪ್ರವೇಶಿಸಿದ ಶಾಲೆಯ ಸಂಚಾಲಕ ಫಾ.ಸಂತೋಷ್ ಲೋಬೋ ಸಂಬಂಧಪಟ್ಟವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಿದ್ದು, ನಾವು ಎಲ್ಲ ಪೋಷಕರು ಮತ್ತು ಶಿಕ್ಷಕರ ಜೊತೆ ಸಭೆ ಮಾಡಿದ್ದೇವೆ ಅಂತ ತಿಳಿಸಿದರು.