ಬೆಂಗಳೂರು : 2012-13. 2014-15 ರ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ 38 ಮಂದಿ ಶಿಕ್ಷಕರನ್ನು ಬಂಧಿಸಿದ್ದಾರೆ. ರಾಜ್ಯದ 51 ಕಡೆ ದಾಳಿ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ 38 ಮಂದಿ ಶಿಕ್ಷಕರನ್ನು ಬಂಧಿಸಿದೆ.
ಈ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ, ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, 6 ಶಿಕ್ಷಕರಿಗೆ ಎರಡು ದಿನಗಳು ಇನ್ನುಳಿದ 32 ಶಿಕ್ಷಕರಿಗೆ ಅ.25 ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಇನ್ನೂ. ಸಿಐಡಿ ಪೊಲೀಸರ ನಿರೀಕ್ಷೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದ್ದು, ನಮಗೆ ಗೊತ್ತಿತ್ತು ಸರ್, ನೀವು ಬಂದೇ ಬರುತ್ತೀರಾ ಅಂತ. ಹಾಗಾಗಿ ಅಷ್ಟರಲ್ಲಿ ಸಿಲೆಬಸ್ ಮುಗಿಸಿ ಬಿಡೋಣ ಅಂತ ಪಾಠ ಮಾಡುತ್ತಿದ್ದೇವು ಎಂದು ಸಿಐಡಿ ತಂಡಕ್ಕೆ ಶಿಕ್ಷಕರು ಹೇಳಿದ್ದಾರೆ ಎನ್ನಲಾಗಿದೆ.
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಂಧಿತರಾಗಿದ್ದ 38 ಶಿಕ್ಷಕರನ್ನು ಹೆಚ್ಚಿನ ತನಿಖೆ ಸಲುವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಿಐಡಿ ಗುರುವಾರ ವಶಕ್ಕೆ ಪಡೆದಿದೆ ಕೋಲಾರದಲ್ಲಿ 24, ಬೆಂಗಳೂರು ದಕ್ಷಿಣದಲ್ಲಿ 6, ಚಿಕ್ಕಬಳ್ಳಾಪುರದಲ್ಲಿ 3 , ಚಿತ್ರದುರ್ಗದಲ್ಲಿ 5 ಮಂದಿ ಸೇರಿ ಒಟ್ಟು 38 ಮಂದಿ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ .
ಸಾರ್ವಜನಿಕ ಶಿಕ್ಷಣ ಇಲಾಖೆಯು ನೀಡಿದ ವರದಿ ಆಧರಿಸಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಕೆ.ವಿ.ಶರತ್ಚಂದ್ರ ಮಾರ್ಗದರ್ಶನದಲ್ಲಿ ಎಸ್ಪಿ ರಮೇಶ್ ಬಾನೋತ್ ನೇತೃತ್ವದಲ್ಲಿ 18 ಡಿವೈಎಸ್ಪಿಗಳು ಹಾಗೂ 14 ಇನ್ಸ್ಪೆಕ್ಟರ್ಗಳು ಏಕಕಾಲಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಶಿಕ್ಷಕರನ್ನು ಗುರುವಾರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಿಕ್ಷಕರ ನೇಮಕಾತಿ((Recruitment of teachers) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ(ಅIಆ)ಅಧಿಕಾರಿಗಳು ವಿವಿಧ ಜಿಲ್ಲೆಯ ಹಲವು ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾದವರನ್ನು ಬಲೆಗೆ ಬೀಳಿಸುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಪ್ರಕರಣ : ಶ್ರೀಮಂತರ ಮನೆಗೆ ಕನ್ನ ಹಾಕಿ ದಾನ ದರ್ಮ ಮಾಡ್ತಿದ್ದ ‘ಕಳ್ಳ’ ಅರೆಸ್ಟ್