ಕೊಡಗು : ಕೊಡಗಿನ ಶಿಕ್ಷಕಿಯೊಬ್ಬರು ಸಾವಿನಲ್ಲೂ ಸಾರ್ಥಕರೆ ಮೆರೆದಿದ್ದು, 8 ಜನರಿಗೆ ಮರು ಜೀವ ನೀಡಿದ್ದಾರೆ. ಹೌದು ಕೊಡಗಿನ ಶಿಕ್ಷಕಿ ಪಂದ್ಯಂಡ ಆಶಾ (53) ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಶಿಕ್ಷಕಿ ಆಶಾ ಅವರು ಬೆಂಗಳೂರು ಮೂಲದ ಮನೆಗೆ ಹೋಗಿದ್ದಾಗ ಪಾಶ್ವ್ರವಾಯುವಿಗೆ ಒಳಗಾಗಿದ್ದರು. ಕೂಡಲೇಅವರನ್ನು ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯಗೊಂಡ ಕಾರಣ ಶಿಕ್ಷಕಿ ಕುಟುಂಬದವರು ಅಂಗಾಂಗ ದಾನ ಮಾಡಿದ್ದಾರೆ. ಕಣ್ಣು, ಕಿಡ್ನಿ, ಹೃದಯ, ಲಿವರ್ ನ್ನು ದಾನ ಮಾಡಿ ಸಾರ್ಥಕರೆ ಮೆರೆದಿದ್ದಾರೆ. ಅಂದಹಾಗೆ ಆಶಾ ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿಯಾಗಿದ್ದು, 15 ವರ್ಷದಿಂದ ಬೇಬಿ ಸಿಟಿಂಗ್ ನಡೆಸುತ್ತಿದ್ದರು.
ಸುದ್ದಿ ಓದುವಂತ ನೀವುಗಳು ದಯವಿಟ್ಟು ಅಂಗಾಂಗ ದಾನಕ್ಕೆ ಸಹಿ ಮಾಡೋದು ಮರೆಯಬೇಡಿ. ನಿಮ್ಮ ನಂತ್ರವೂ ಹಲವು ಜೀವಗಳಿಗೆ, ಜೀವದಾನಕ್ಕೆ ನೀವು ಕಾರಣವಾಗುವಂತ ನಿರ್ಧಾರವನ್ನು ಕೈಗೊಳ್ಳಿ ಎಂಬುದು ಕೆಎನ್ಎನ್ ಸಂಸ್ಥೆಯ ಕೋರಿಕೆ, ಮನವಿಯಾಗಿದೆ.