ಬೆಳಗಾವಿ: ಜಿಲ್ಲೆಯ ಚಿಕ್ಕೋಡಿಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಕೀಚಕ ನಡೆಯನ್ನು ತೋರಿದ್ದನು. ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟಿ, ದೌರ್ಜನ್ಯ ಎಸಗಿದ್ದಲ್ಲದೇ, ಆ ಎಲ್ಲವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿಟ್ಟುಕೊಂಡಿದ್ದನು. ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಳಿಕ ತನನ್ನು ಇಲಾಖೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯ ಶಿಕ್ಷಕ ಮೊಹಮ್ಮದ್ ಸಾದಿಕ್, ಕಳೆದ ಐದು ವರ್ಷಗಳಿಂದ ಚಿಕ್ಕೋಡಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಮೊಹಮ್ಮದ್ ಸಾದಿಕ್ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಮುಟ್ಟಿ, ವಿಕೃತಿ ಮೆರೆಯುತ್ತಿದ್ದನು. ಜೊತೆಗೆ ಶೌಚಕ್ಕೆ ಹೋಗುತ್ತಿದ್ದಾಗ ಖಾಸಗಿ ಅಂಗಾಂಗದ ಪೋಟೋ ತೆಗೆದುಕೊಂಡು ಬರುವಂತೆಯೂ ವಿದ್ಯಾರ್ಥಿನಿಯರಿಗೆ ಹೇಳುತ್ತಿದ್ದನು. ಇವೆಲ್ಲವನ್ನು ತನ್ನ ಮೊಬೈಲ್ ನಲ್ಲಿ ಸೇವ್ ಮಾಡಿಟ್ಟುಕೊಂಡಿದ್ದನು.
ಶಿಕ್ಷಕ ಮೊಹಮ್ಮದ್ ಸಾದಿಕ್ ಕಳೆದ ಒಂದು ವರ್ಷದಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗಿರೋದಾಗಿ ತಿಳಿದು ಬಂದಿತ್ತು. ಓರ್ವ ವಿದ್ಯಾರ್ಥಿನಿ ತಾಯಿ ಮುಂದೆ ಶಿಕ್ಷಕನ ಲೈಂಗಿಕ ಕೃತ್ಯವನ್ನು ಹೇಳಿದಾಗ, ಕೀಚಕ ಕೃತ್ಯ ಹೊರ ಬಂದಿತ್ತು.
ಇದೀಗ ಚಿಕ್ಕೋಡಿಯ ಪೊಲೀಸರು ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ, ಬಂಧಿಸಿದ್ದಾರೆ. ಶಿಕ್ಷಕ ಮೊಹಮ್ಮದ್ ಸಾದಿಕ್ ಬಂಧನದ ಬೆನ್ನಲ್ಲೇ, ಚಿಕ್ಕೋಡಿ ಡಿಡಿಪಿಐ ಬಿಎ ಮೇಕನಮರಡಿ ಅವರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
BREAKING: ನಾಳೆ ನಾಗಮಂಗಲಕ್ಕೆ ಬಿಜೆಪಿ ಸತ್ಯ ಶೋಧನಾ ಸಮಿತಿ ಭೇಟಿ | Karnataka BJP
BREAKING : ಎರಡು ದಿನಗಳಲ್ಲಿ `CM’ ಸ್ಥಾನಕ್ಕೆ ರಾಜೀನಾಮೆ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ