ನವದೆಹಲಿ: ಟಾಟಾ ಗ್ರೂಪ್ ತನ್ನ ಏರ್ಲೈನ್ ಬ್ರಾಂಡ್ಗಳನ್ನು ಏರ್ ಇಂಡಿಯಾ ಲಿಮಿಟೆಡ್ ಅಡಿಯಲ್ಲಿ ಸಂಯೋಜಿಸುವ ಯೋಜನೆ ನಡೆಸುತ್ತಿದೆ.
ಇತ್ತೀಚೆಗೆ ಸರ್ಕಾರಿ ಏರ್ಲೈನ್ ಕಂಪನಿ ಏರ್ ಇಂಡಿಯಾ (Air India)ವನ್ನು ಖರೀದಿಸಿತು. ಇದರ ಬೆನ್ನಲ್ಲೇ, ಟಾಟಾ ಸನ್ಸ್ ಈಗ ತನ್ನ ಉಳಿದ ಮೂರು ಏರ್ಲೈನ್ಗಳಾದ ವಿಸ್ತಾರಾ (Vistara), ಏರ್ ಏಷ್ಯಾ (Air Asia) ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ (Air India Express) ಅನ್ನು ಏರ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಮುಂದಾಗಿದೆ.
ಈಗಾಗಲೇ, ಕಂಪನಿಯು ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸಿಂಗಾಪುರ್ ಏರ್ಲೈನ್ಸ್ ವಿಸ್ತಾರಾದಲ್ಲಿ ಟಾಟಾ ಗ್ರೂಪ್ನ ಪಾಲುದಾರ ಎನ್ನಲಾಗಿದೆ.
ಸಿಂಗಾಪುರ್ ಏರ್ಲೈನ್ಸ್ ಹೇಳಿಕೆಯಲ್ಲಿ “ಎಸ್ಐಎ ಮತ್ತು ಟಾಟಾ ನಡುವೆ ಚರ್ಚೆಗಳು ನಡೆಯುತ್ತಿವೆ. ಎಸ್ಐಎ ಮತ್ತು ಟಾಟಾ ನಡುವಿನ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ಗಾಢವಾಗಿಸಲು ಪ್ರಯತ್ನಿಸುತ್ತವೆ ಎಂದಿದೆ.
ಏರ್ ಇಂಡಿಯಾ ತನ್ನ ಹೊಸ ಮಾಲೀಕ ಟಾಟಾ ಅಡಿಯಲ್ಲಿ ನವೀಕರಣಕ್ಕೆ ಸಜ್ಜಾಗಿದೆ. ಪೂರ್ಣ-ಸೇವಾ ವಾಹಕವು 300 ಚಿಕ್ಕದಾದ ಜೆಟ್ಗಳನ್ನು ಆರ್ಡರ್ ಮಾಡಲು ಪರಿಗಣಿಸುತ್ತಿದೆ. ಇದು ವಾಣಿಜ್ಯ ವಾಯುಯಾನ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಆರ್ಡರ್ಗಳಲ್ಲಿ ಒಂದಾಗಿದೆ.
Shraddha murder case: ಗಂಡ ಹೆಂಡ್ತಿ ಅಂತ ಹೇಳಿಕೊಂಡು ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ಅಫ್ತಾಬ್-ಶ್ರದ್ಧಾ
BREAKING NEWS: ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ವರುಣ ಅಡ್ಡಿ: ಮ್ಯಾಚ್ ತಡವಾಗಿ ಆರಂಭ
Shraddha murder case: ಗಂಡ ಹೆಂಡ್ತಿ ಅಂತ ಹೇಳಿಕೊಂಡು ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ಅಫ್ತಾಬ್-ಶ್ರದ್ಧಾ