ಮುಂಬೈ: ರತನ್ ಟಾಟಾ(Ratan Tata) ಅವರ ಆಪ್ತ ಸಹಾಯಕ ಮತ್ತು ಟಾಟಾ ಸನ್ಸ್ನ ಮಾಜಿ ನಿರ್ದೇಶಕ ಆರ್ ಕೆ ಕೃಷ್ಣ ಕುಮಾರ್(R K Krishna Kumar) ಭಾನುವಾರ ಸಂಜೆ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರ ನಿಕಟ ಸಹವರ್ತಿಯಾಗಿದ್ದ 84 ವರ್ಷದ ಕೃಷ್ಣ ಕುಮಾರ್ ಟಾಟಾದ ಸಲಹಾ ಸಂಸ್ಥೆ, ಆರ್ಎನ್ಟಿ ಅಸೋಸಿಯೇಟ್ಸ್ ಮತ್ತು ಟಾಟಾ ಸಮೂಹದ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್ನಲ್ಲಿ ಶೇಕಡಾ 66 ರಷ್ಟು ಪಾಲನ್ನು ಹೊಂದಿರುವ ಗುಂಪಿನ ಚಾರಿಟಬಲ್ ಟ್ರಸ್ಟ್ಗಳಲ್ಲಿ ತೊಡಗಿಸಿಕೊಂಡಿದ್ದರು.
ಕೃಷ್ಣಕುಮಾರ್ ನಿಧನದ ಕುರಿತು ಮಾತನಾಡಿದ ರತನ್ ಟಾಟಾ, “ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ಆರ್.ಕೆ. ಕೃಷ್ಣಕುಮಾರ್ ನಿಧನದಿಂದ ತುಂಬಾ ದುಃಖಿತನಾಗಿದ್ದೇನೆ. ಮತ್ತು ವೈಯಕ್ತಿಕವಾಗಿ ನಾವು ಹಂಚಿಕೊಂಡ ಸೌಹಾರ್ದತೆಯನ್ನು ನಾನು ಯಾವಾಗಲೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ” ಎಂದಿದ್ದಾರೆ.
ಕೃಷ್ಣಕುಮಾರ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 4.30ಕ್ಕೆ ಇಲ್ಲಿನ ಚಂದನವಾಡಿ ಚಿತಾಗಾರದಲ್ಲಿ ನಡೆಯಲಿದೆ.
BREAKING NEWS: ರಾಜಸ್ಥಾನದಲ್ಲಿ ಹಳಿ ತಪ್ಪಿದ ʻಸೂರ್ಯನಗರಿ ಎಕ್ಸ್ಪ್ರೆಸ್ʼನ 8 ಬೋಗಿಗಳು, ಪ್ರಯಾಣಿಕರು ಸೇಫ್
BREAKING NEWS: ರಾಜಸ್ಥಾನದಲ್ಲಿ ಹಳಿ ತಪ್ಪಿದ ʻಸೂರ್ಯನಗರಿ ಎಕ್ಸ್ಪ್ರೆಸ್ʼನ 8 ಬೋಗಿಗಳು, ಪ್ರಯಾಣಿಕರು ಸೇಫ್