ಮೈಸೂರು : ಗೋಪುರದ ರೀತಿ ಕಾಣುವುದೆಲ್ಲಾ ಸಾಬ್ರುದು ಅನ್ನೊದಾದ್ರೆ ನಾವೇನ್ ಮಾಡೋದು, ಸಂಸದ ಪ್ರತಾಪ್ ಸಿಂಹನಿಗೆ ಬಸ್ ನಿಲ್ದಾಣದ ಗುಂಬಜ್ ಗಳು ಮುಸ್ಲಿಮರ ಮಸೀದಿಯಂತೆ ಕಾಣ್ತಿದೆ’ ಎಂದು ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ .
ಸುದ್ದಿಗಾರರ ಜೊತೆ ಮಾತನಾಡಿದ ಅವರು ಗುಂಬಜ್ ಮಾದರಿಯ ಬಸ್ ನಿಲ್ದಾಣ ಹೊಡೆದು ಹಾಕೋದಾದ್ರೆ. ಅದೆಷ್ಟು ಹೊಡೆದು ಹಾಕ್ತಾರೆ ಹಾಕಲಿ, ಗೋಪುರಗಳು ಮಸೀದಿ ಮಾದರಿಯಲ್ಲಿ ಇದೆ ಎಂದು ಹೇಳುವಂತಹ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿ ಇದೆ ಎಂಬುದನ್ನ ತಿಳಿದುಕೊಳ್ಳಬೇಕು. ಇದು ಸರ್ಕಾರದ ಆಸ್ತಿ, ಏನೆಲ್ಲಾ ಒಡೆಯುತ್ತಾರೆ ನೋಡೋಣ ಎಂದು ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ .
ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ರೆ ಒಡೆದು ಹಾಕ್ತೀವಿ : ಪ್ರತಾಪ್ ಸಿಂಹ
ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ. ನಿರ್ಮಿಸಿದರೆ ಅದನ್ನು ಒಡೆಸಿ ಹಾಕೊದು ಗ್ಯಾರೆಂಟಿ ಎಂದು ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದ್ದರು.
ಮೈಸೂರಿನ ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ನಾಟಕದ ವೇಳೆ ಸಂಸದ ಪ್ರತಾಪ್ ಸಿಂಹ ಮಾಡಿದ್ದ ಭಾಷಣ ವೈರಲ್ ಆಗಿದೆ. ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಿಸಿದರೆ ಒಡೆದು ಹಾಕುವುದು ನಿಶ್ಚಿತ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ಇಲಾಖೆಯಲ್ಲಿ ರೈಲಿನ ಹೆಸರು ಬದಲಾಯಿಸಿದ್ದೇನೆ. ನಾಲ್ಕು ವರ್ಷ ಸತತ ಪ್ರಯತ್ನ ಮಾಡಿ ಹೆಸರು ಬದಲಾವಣೆ ಮಾಡಿದ್ದೇನೆ. ಮೈಸೂರಿನ ಪ್ರತಿಯೊಂದು ಸಂಕೇತವೂ ಮಹಾರಾಜರ ಕೊಡುಗೆ. ರೈಲ್ವೆ ಸ್ಟೇಷನ್ ಗೆ ಚಾಮರಾಜ ಒಡೆಯರ್ ಹೆಸರು ಇಡುತ್ತೇವೆ ಹೊರತು ಟಿಪ್ಪುವಿನ ಯಾವ ಗುರುತುಗಳು ಸಿಗದ ಹಾಗೇ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.
ವಯಸ್ಸಿಗೂ ಮೊದಲೇ ಕೂದಲು ಬಿಳಿಯಾಗಿದ್ಯಾ? ಈ ಗಂಭೀರ ಕಾರಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ | White Hair