ಚೆನ್ನೈ/ತಿರುವನಂತಪುರಂ:ದಕ್ಷಿಣ ಭಾರತದ ಮೂರು ಪ್ರಮುಖ ಕಣಗಳ ಮತ ಎಣಿಕೆ ಇಂದು (ಮೇ 4) ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಆರಂಭಿಕ ಒಲವುಗಳು ಈಗಿನ ರಾಜಕೀಯ ಲೆಕ್ಕಾಚಾರಗಳನ್ನು ಉಲ್ಟಾ ಮಾಡುತ್ತಿವೆ.
ತಮಿಳುನಾಡು: ವಿಜಯ್ ಅವರ ಟಿವಿ ಕೆ (TVK) ಭರ್ಜರಿ ಎಂಟ್ರಿ!
ನಟ ವಿಜಯ್ ಹವಾ: ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಆರಂಭಿಕ ಟ್ರೆಂಡ್‌ಗಳಲ್ಲಿ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ.
ಸ್ಟಾಲಿನ್‌ಗೆ ಹಿನ್ನಡೆ?: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಭದ್ರಕೋಟೆಯಾದ ಕೊಳತ್ತೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಹಿನ್ನಡೆ ಅನುಭವಿಸುತ್ತಿರುವುದು ಡಿಎಂಕೆ ಪಾಳಯದಲ್ಲಿ ಆತಂಕ ಮೂಡಿಸಿದೆ. ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕೂಡ ಆರಂಭಿಕ ಸುತ್ತಿನಲ್ಲಿ ಹಿನ್ನಡೆ ಕಂಡಿದ್ದಾರೆ.
ಪ್ರಸ್ತುತ ಸ್ಥಿತಿ (ಬೆಳಿಗ್ಗೆ 9:25): ಟಿವಿ ಕೆ 63, ಡಿಎಂಕೆ 46 ಮತ್ತು ಎಐಎಡಿಎಂಕೆ 30 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
Subscribe to Updates
Get the latest creative news from FooBar about art, design and business.








