ತಿರುಚ್ಚಿ(ತಮಿಳುನಾಡು): ಸೋಮವಾರ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಆತನ ಮಗನ ಸ್ಥಿತಿ ಗಂಭೀರವಾಗಿರುವ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ತಥೈಂಗಾರ್ಪೆಟ್ಟೈ ಬಳಿಯ ಕರಿಕಾಲಿ ಎಂಬಲ್ಲಿ ನಡೆದಿದೆ.
ದಾಳಿಕೋರ ಆರೋಪಿ ಟಿ ಚೆಲ್ಲದೊರೈ (52) ಎಂಬಾತ ಈ ದಾಳಿ ನಡೆಸಿದ್ದಾನೆ. ಇನ್ನೂ, ಚೆಲ್ಲದೊರೈ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.
ಘಟನೆ ನಡೆದಾಗ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಕೂಡ ಸ್ಥಳದಲ್ಲಿದ್ದರು. ಈ ಮೂವರು ಕೃಷಿ ಕೆಲಸ ಮುಗಿಸಿ ಹೊಲದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿ ಟಿ ಚೆಲ್ಲದೊರೈ ದಾಳಿ ನಡೆಸಿದ್ದಾನೆ.
ಮಚ್ಚಿನಿಂದ ಹಲ್ಲೆ ನಡೆಸಿದ ಚೆಲ್ಲದುರೈ ಪೋಷಕರ ಎದುರೇ 34 ವರ್ಷದ ಮಣಿಕಂದನ್ ಮೇಲೆ ದಾಳಿ ನಡೆಸಿದ್ದಾನೆ. ನಂತ್ರ ಮಣಿಕಂದನ್ ತಂದೆ ದುರೌರಾಜ್ (66) ಮೇಲೆ ತೀವ್ರವಾಗಿ ದಾಳಿ ನಡೆಸಿದ್ದು, ದುರೌರಾಜ್ನ ಲೆಯನ್ನು ಕತ್ತರಿಸಿದ್ದಾನೆ. ಇದರಿಂದ ದುರೌರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉತ್ತಂದಂಪಟ್ಟಿಯ ಗೌಂಡರ್ ಸ್ಟ್ರೀಟ್ನಲ್ಲಿ ಸಂತ್ರಸ್ತನ ತುಂಡರಿಸಿದ ತಲೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದುರೈರಾಜ್ ತಿರುಚ್ಚಿಯ ಮುಸಿರಿ ತಾಲೂಕಿನ ಕರಿಕಾಳಿಯ ಉತ್ತಂದಂಪಟ್ಟಿಯ ಕುಡಿ ಸ್ಟ್ರೀಟ್ನವರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಥಾಇಂಗಾರಪೇಟೆ ಪೊಲೀಸರೊಂದಿಗೆ ಮುಸಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ (ಡಿಎಸ್ಪಿ) ಎಂಎ ಯಾಸ್ಮಿನ್ ಅವರು, ಪ್ರಾಥಮಿಕ ತನಿಖೆಯಲ್ಲಿ ಇದು ಪೂರ್ವ ಯೋಜಿತವಲ್ಲ ಎಂದು ಸಾಬೀತಾಗಿದೆ. ಏಕೆಂದ್ರೆ, ದಾಳಿ ನಡೆಸಿದ ಚೆಲ್ಲದೊರೈ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ ಎಂದಿದ್ದಾರೆ.
ಇನ್ನೂ, ಚೆಲ್ಲದೊರೈ ಕೈಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
BIG NEWS: ‘ಪೋಷಕರು ವರ್ಗಾಯಿಸಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ’: ಮದ್ರಾಸ್ ಹೈಕೋರ್ಟ್
BIG NEWS: ‘ಪೋಷಕರು ವರ್ಗಾಯಿಸಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ’: ಮದ್ರಾಸ್ ಹೈಕೋರ್ಟ್