ಚೆನ್ನೈ: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ನವವಿವಾಹಿತ ದಂಪತಿಯನ್ನು ಯುವತಿಯ ತಂದೆ ಕಡಿದು ಅಮಲಿನಲ್ಲಿ ಕೊಲೆಗೈದಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತೂತುಕುಡಿ ಜಿಲ್ಲೆಯ ಬಂದರು ನಗರವಾದ ಟುಟಿಕೋರಿನ್ ನಿವಾಸಿಯಾಗಿದ್ದ ಯುವತಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಳು. ಇದರಿಂದ ಕೋಪಗೊಂಡಿದ್ದ ವ್ಯಕ್ತಿ ನವಜೋಡಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
BREAKING NEWS : ʻ ಕಬಡ್ಡಿ ಆಟ ʼ ಆಡುವ ಮುನ್ನಎಚ್ಚರ..! ಕಬಡ್ಡಿಪಂದ್ಯದ ವೇಳೆಯೇ, ಹೃದಯಘಾತದಿಂದ ʻ ಆಟಗಾರ ಸಾವು ʼ
ಕೊಲೆಯಾದ ಯುವಕ-ಯುವತಿ ಒಂದೇ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಸಂಬಂಧಿಗಳಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಓಡಿಹೋಗಿ ಮದುವೆಯಾಗಿದ್ದರು. ಇದರ ಬೆನ್ನಲ್ಲೆ ಯುವತಿ ಕುಟುಂಬ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಇದಾದ ಬಳಿಕ ಯುವಕ-ಯುವತಿ ಮಧುರೈನಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದರು. ಇಬ್ಬರೂ ವಯಸ್ಕರು, ಸ್ವಂತ ಇಚ್ಚೆಯಿಂದ ಇಬ್ಬರು ಮದುವೆಯಾಗಿದ್ದೇವೆ ಹೇಳಿಕೊಂಡಿದ್ದರು.
ಇದೇ ವೇಳೆ ಪೊಲೀಸ್ ಠಾಣೆಯಿಂದಲೇ ನವಜೋಡಿ ವಿಡಿಯೋ ಕರೆ ಯುವತಿಯ ಪೋಷಕರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಯುವಕ-ಯುವತಿ ಪೊಲೀಸ್ ರಕ್ಷಣೆಯನ್ನು ಕೇಳಿರಲಿಲ್ಲ ಎಂದು ಟುಟಿಕೋರಿನ್ ಹಿರಿಯ ಪೊಲೀಸ್ ಬಾಲಾಜಿ ಸರವಣನ್ ಎನ್ಡಿಟಿವಿಗೆ ತಿಳಿಸಿದ್ದಾರೆ.
New Rule From 1 August 2022 : ಆಗಸ್ಟ್ 1 ರಿಂದ ಬದಲಾಗಲಿವೆ ಬ್ಯಾಂಕ್ ನ ಈ ನಿಯಮಗಳು!
ನಂತರ ಗ್ರಾಮದ ಹಿರಿಯರೂ ಮಧ್ಯಪ್ರವೇಶಿಸಿ ಮನೆಯವರಿಗೆ ತೊಂದರೆಯಾಗದಂತೆ ಮನವಿ ಮಾಡಿದ್ದರು. ಆದರೆ ಕುಟುಂಬದ ಇಚ್ಚೆಗೆ ವಿರುದ್ಧವಾಗಿ ಮದುವೆಯಾಗಿದ್ದ ಕೋಪದಲ್ಲಿದ್ದ ಯುವತಿ ತಂದೆ, ಕುಡಿದು ದಂಪತಿಯನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ
ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS: ಸೋನಿಯಾ ಗಾಂಧಿ ಇಡಿ ಅಧಿಕಾರಿಗಳ ವಿಚಾರಣೆ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ