ಚೆನ್ನೈ: ತಮಿಳುನಾಡಿನಲ್ಲಿನಲ್ಲಿ ಸಚಿವ ಸಂಪುಟ ಪುನಾರಚನೆಯಾಗಿದೆ. ಸಚಿವ ಸ್ಥಾನಕ್ಕೆ ಸೆಂಥಿಲ್ ಬಾಲಾಜಿ ಹಾಗೂ ಪೊನ್ನುಡಿ ರಾಜೀನಾಮೆ ನೀಡಿದ್ದಾರೆ. ಅವರಿಗೆ ನೀಡಿದ್ದಂತ ಸಚಿವ ಸ್ಥಾನದ ಹೊಣೆಗಾರಿಕೆಯನ್ನು ಸಚಿವ ಸಂಪುಟದ ಮತ್ತಿಬ್ಬರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ವಹಿಸಲಾಗಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದ ನಂತರ ತಮಿಳುನಾಡು ಸಚಿವ ಮತ್ತು ಡಿಎಂಕೆ ಮುಖಂಡ ವಿ ಸೆಂಥಿಲ್ ಬಾಲಾಜಿ ಭಾನುವಾರ ಎಂ.ಕೆ.ಸ್ಟಾಲಿನ್ ಕ್ಯಾಬಿನೆಟ್ಗೆ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನದಿಂದ ಕೆಳಗಿಳಿಯದಿದ್ದರೆ ಜಾಮೀನು ರದ್ದುಗೊಳಿಸಬಹುದು ಎಂದು ಎಚ್ಚರಿಸಿದ್ದ ಸುಪ್ರೀಂ ಕೋರ್ಟ್, ಬಾಲಾಜಿ ಅವರಿಗೆ ತಮ್ಮ ಹುದ್ದೆ ಮತ್ತು ಸ್ವಾತಂತ್ರ್ಯದ ನಡುವೆ ಆಯ್ಕೆ ಮಾಡುವಂತೆ ಸೂಚಿಸಿತ್ತು.
ಮತ್ತೊಬ್ಬ ಸಚಿವ ಕೆ.ಪೊನ್ಮುಡಿ ಕೂಡ ಶೈವ ಮತ್ತು ವೈಷ್ಣವ ಧರ್ಮವನ್ನು ಲೈಂಗಿಕ ಕಾರ್ಯಕರ್ತೆಯೊಂದಿಗೆ ಸಂಪರ್ಕಿಸುವ ವಿವಾದಾತ್ಮಕ ಹೇಳಿಕೆಗಳಿಗಾಗಿ ಟೀಕೆಗಳನ್ನು ಎದುರಿಸಿದ ನಂತರ ರಾಜೀನಾಮೆ ನೀಡಿದರು. ಮದ್ರಾಸ್ ಹೈಕೋರ್ಟ್ ಈ ವಿಷಯದಲ್ಲಿ ಸ್ವಯಂಪ್ರೇರಿತ ವಿಚಾರಣೆಯನ್ನು ಪ್ರಾರಂಭಿಸಿದ ಕೆಲವು ದಿನಗಳ ನಂತರ ಅವರ ರಾಜೀನಾಮೆ ಬಂದಿದೆ.
The Chief Minister of Tamil Nadu has recommended, and the Governor has approved, major changes in the state cabinet following the resignations of V. Senthilbalaji, Minister for Electricity, Prohibition and Excise, and Dr. K. Ponmudy, Minister for Forests and Khadi.
— ANI (@ANI) April 27, 2025
ಸಾರಿಗೆ ಸಚಿವ ಎಸ್.ಎಸ್.ಶಿವಶಂಕರ್ ಅವರು ಸೆಂಥಿಲ್ ಬಾಲಾಜಿ ಅವರ ಬಳಿ ಇರುವ ವಿದ್ಯುತ್ ಖಾತೆಯನ್ನು ನಿರ್ವಹಿಸಲಿದ್ದಾರೆ. ಇದಲ್ಲದೆ, ವಸತಿ ಸಚಿವ ಎಸ್ ಮುತ್ತುಸಾಮಿ ಅವರಿಗೆ ಸೆಂಥಿಲ್ ಬಾಲಾಜಿ ಅವರ ಅಬಕಾರಿ ಮತ್ತು ನಿಷೇಧ ಖಾತೆಯನ್ನು ನೀಡಲಾಗಿದೆ.
ರಾಜಕಣ್ಣಪ್ಪನ್ ಅವರಿಗೆ ಹಾಲಿ ಇರುವ ಹಾಲು ಮತ್ತು ಹೈನುಗಾರಿಕೆ ಅಭಿವೃದ್ಧಿ ಖಾತೆಯ ಜೊತೆಗೆ ಪೊನ್ಮುಡಿ ಅರಣ್ಯ ಮತ್ತು ಖಾದಿ ಖಾತೆಯನ್ನು ನೀಡಲಾಗಿದೆ.
SS Sivasankar has been additionally assigned the Electricity portfolio. S Muthusamy will also handle Prohibition and Excise. RS Rajakannappan will now oversee Forests and Khadi and has been appointed as the Minister for Forests and Khadi. Additionally, the Chief Minister has… https://t.co/f2rVrBNZ9O
— ANI (@ANI) April 27, 2025
ಇದಲ್ಲದೆ, ಪದ್ಮನಾಭಪುರಂ ಶಾಸಕ ಟಿ ಮನೋ ತಂಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಿಎಂ ಶಿಫಾರಸನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಹಿಂದೆ ಸಂಪುಟ ಪುನಾರಚನೆಯಲ್ಲಿ ಅವರನ್ನು ಕೈಬಿಡಲಾಗಿತ್ತು. ನಿಯೋಜಿತ ಸಚಿವರ ಪ್ರಮಾಣ ವಚನ ಸ್ವೀಕಾರ ಸೋಮವಾರ ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಅದು ಹೇಳಿದೆ.
ಮನ್ ಕಿ ಬಾತ್: ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯವರ ಬಲವಾದ ಸಂದೇಶ, ಏಕತೆಗೆ ಒತ್ತು | Mann ki baat