ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನಗತ್ಯವಾಗಿ ದೇಹವನ್ನು ಆವರಿಸಿರುವ ಕೊಬ್ಬುಗಳನ್ನು ನಿವಾರಿಸಲು ಅಥವಾ ದೇಹದ ತೂಕವನ್ನು ಇಳಿಸುವ ಪ್ರಯತ್ನ ಮಾಡುತ್ತಿದ್ದರೆ ಅದಕ್ಕೆ ಉತ್ತಮ ಆಯ್ಕೆ ಎಂದರೆ ಅದು ಹುಣಸೆ ಹಣ್ಣಿನ ರಸ. ಇದು ಅದ್ಭುತ ಆರೋಗ್ಯ ಗುಣಗಳನ್ನು ಒಳಗೊಂಡಿದ್ದು, ದೇಹದಲ್ಲಿರುವ ಕೊಬ್ಬನ್ನು ಕರಗಿಸುವುದು.
BREAKING: ‘ಮೈಸೂರು ದಸರಾ ಜಂಬೂಸವಾರಿ ಸ್ತಬ್ಧಚಿತ್ರ’ ಮೆರವಣಿಗೆ: ಕೊಡಗು ಜಿಲ್ಲೆಗೆ ಪ್ರಥಮ, ಚಿತ್ರದುರ್ಗಕ್ಕೆ ತೃತೀಯ
ಹುಣಸೆ ಹಣ್ಣಿನ ಪೌಷ್ಟಿಕ ಮೌಲ್ಯಗಳು
ಅದ್ಭುತ ಪೌಷ್ಟಿಕಾಂಶವನ್ನು ಹೊಂದಿರುವ ಹುಣಸೆ ಹಣ್ಣಿನಲ್ಲಿ ಶಕ್ತ, ಕಾರ್ಬೋಹೈಡ್ರೇಟ್, ಸಕ್ಕರೆ, ನಾರಿನಂಶ, ಕೊಬ್ಬು, ಪ್ರೋಟೀನ್ಗಳು, ವಿಟಮಿನ್ ಬಿ6, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಮ್, ಜಿಂಕ್ ಸೇರಿದಂತೆ ವಿವಿಧ ಪೋಷಕಾಂಶಗಳಿರುವುದನ್ನು ಅರಿಯಬಹುದು.
ಜೀರ್ಣಕ್ರಿಯೆಗೆ ಸಹಾಯಕ
ಉತ್ತಮ ಜೀರ್ಣಕ್ರಿಯೆಗೆ ಹುಣಸೆ ಹಣ್ಣು ಅದ್ಭುತ ಸಹಕಾರ ನೀಡುವುದು. ಜೀರ್ಣಕ್ರಿಯೆಯು ಸದಾ ಉತ್ತಮವಾಗಿರುವಂತೆ ಪೋಷಿಸುವುದು.
ಅತಿಯಾದ ತಿನ್ನುವಿಕೆಯನ್ನು ತಡೆಯುವುದು
ಕೆಲವರು ನಿರಂತರವಾಗಿ ಏನಾದರೂ ತಿನ್ನುತ್ತಲೇ ಇರುತ್ತಾರೆ. ಇದರ ಪರಿಣಾಮವಾಗಿ ತೂಕ ಹೆಚ್ಚುವುದು, ಕೊಬ್ಬು ಶೇಖರಣೆಯಾಗುವುದು. ಅಂತಹ ಸಂದರ್ಭದಲ್ಲಿ ಹುಣಸೆ ಹಣ್ಣಿನ ಸೇವನೆಯು ಹಸಿವನ್ನು ಸರಿಹೊಂದಿಸುವುದರ ಮೂಲಕ ತೂಕ ನಷ್ಟಕ್ಕೆ ಸಹಕಾರ ನೀಡುವುದು.
ರಕ್ತದೊತ್ತಡ ಕಡಿಮೆ ಮಾಡಲು ಸಹಾಯಕ
ಹುಣಸೆ ಹಣ್ಣಿನಲ್ಲಿರುವ ನಾರಿನಂಶವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಜೊತೆಗೆ ಇದರಲ್ಲಿನ ಆಂಟಿ-ಆಕ್ಸಿಡೆಂಟ್ಗಳು ನಮ್ಮ ದೇಹದಲ್ಲಿರುವ ಫ್ರೀ ರ್ಯಾಡಿಕಲ್ಗಳನ್ನು ನಿಯಂತ್ರಣದಲ್ಲಿಡುತ್ತವೆ. ಇವೆಲ್ಲವು ಸೇರಿ ನಮ್ಮ ಹೃದಯವನ್ನು ಆರೋಗ್ಯವಾಗಿಡುತ್ತವೆ.
ಮಧುಮೇಹ ರೋಗಕ್ಕೂ ಒಳ್ಳೆಯದು
ಹುಣಸೆ ಹಣ್ಣು ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್ ಕರಗುವಿಕೆಯನ್ನು ತಡೆಯುತ್ತದೆ. ಆ ಮೂಲಕ ಕಾರ್ಬೋಹೈಡ್ರೇಟ್ ಕರಗಿ ಸಕ್ಕರೆಯಾಗಿ ಪರಿವರ್ತನೆಯಾಗದಂತೆ ತಡೆಯುವ ಇದು, ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವು ಹಿಡಿತದಲ್ಲಿರುವಂತೆ ಮಾಡುತ್ತದೆ. ದಿನ ಅರ್ಧ ಸ್ಪೂನ್ ಹುಣಸೆಹಣ್ಣನ್ನು ಸೇವಿಸುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿಡುವ ಜೊತೆಗೆ ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ.
ಹುಣಸೆ ಹಣ್ಣಿನ ಇತರೆ ಅನುಕೂಲಗಳು
- ಹುಣಸೆ ಹಣ್ಣು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತಗೆ ದೇಹಕ್ಕೆ ಅಗತ್ಯವಾದ ಜೀವಸತ್ವ , ಖನಿಜಗಳು, ಫೈಬರ್ಗಳನ್ನು ಒದಗಿಸುತ್ತದೆ.
- ಹುಣಸೆ ಹಣ್ಣು ಗಂಟಲು ನೋವು ಅಥವಾ ಗಂಟಲು ಹುಣ್ಣನ್ನು ನಿವಾರಿಸುವುದು.
- ಇದು ಉತ್ಕರ್ಷಣ ನಿರೋಧಕ ಶಕ್ತಿ ಇರುವುದರಿಂದ ಕ್ಯಾನ್ಸರ್ ಅನ್ನು ತಡೆಯುವುದು.
- ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಅದ್ಭುತ ಚಿಕಿತ್ಸೆಯ ರೂಪದಲ್ಲಿ ನಿವಾರಿಸುತ್ತದೆ.
- ಹುಣಸೆ ಹಣ್ಣಿನ ರಸವು ಸಂಧುನೋವು, ಮೊಣಕಾಲು ನೋವು ಸೇರಿದಂತೆ ಇನ್ನಿತರ ಜಂಟಿ ನೋವುಗಳನ್ನು ನಿಯಂತ್ರಿಸುವುದು.
- ತ್ವಚೆಯ ಮೇಲೆ ಉಂಟಾಗುವ ಸುಟ್ಟ ಗಾಯಕ್ಕೆ ಹುಣಸೆ ಹಣ್ಣಿನ ಲೇಪನ ಹೊಂದುವುದರಿಂದ ಬಹುಬೇಗ ಗುಣಮುಖವಾಗುವುದು.
Good News ; ಈಗ ನೀವು ‘WhatsApp’ನಲ್ಲೇ Aadhaar, PAN ಸೇರಿ ಈ ಎಲ್ಲ ದಾಖಲೆ ಡೌನ್ಲೋಡ್ ಮಾಡ್ಬೋದು