ಮಂಗಳೂರು: ನಗರದಲ್ಲಿ ನಿನ್ನೆ ನಡೆದಿದ್ದಂತ ಸುಹಾಸ್ ಶೆಟ್ಟಿ ಕೊಲೆಯ ನಂತ್ರ ಸ್ತಬ್ಧಗೊಂಡಿದೆ. ಹಿಂದೂ ಕಾರ್ಯಕರ್ತನನ್ನು ಕೊಚ್ಚಿ ಕೊಲೆ ಮಾಡಿದ್ದರ ನಂತ್ರ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆ ಮಂಗಳೂರಲ್ಲಿ ಮತ್ತೆ ಯುವಕನ ಮೇಲೆ ದಾಳಿಗೆ ಯತ್ನ ಮಾಡಲಾಗಿದೆ.
ಮಂಗಳೂರಿನ ಪಂಜಿಮೊಗೆರು ಬಳಿಯಲ್ಲಿ ತಲ್ವಾರ್ ನಿಂದ ಯುವಕನ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ. ತಲ್ವಾರ್ ದಾಳಿಯಿಂದ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.
ಅಂದಹಾಗೇ ನಿನ್ನೆ ಸುಹಾಸ್ ಶೆಟ್ಟಿ ಎಂಬಾತನನ್ನು ಕೊಚ್ಚಿ ಕೊಲೆಗೈಯ್ಯಲಾಗಿತ್ತು. ಆ ಬಳಿಕ ಮೂವರ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿತ್ತು. ಇದೀಗ ಮತ್ತೆ ಯುವಕನೊಬ್ಬನ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿ ಹಲ್ಲೆಗೆ ಯತ್ನಿಸಲಾಗಿದೆ.
ಬೈಕ್ ನಲ್ಲಿ ಬಂದಿದ್ದಂತ ಇಬ್ಬರು ದುಷ್ಕರ್ಮಿಗಳು ತಲ್ವಾರ್ ಬೀಸಿ ಯುವಕನನ್ನು ಅಟ್ಟಾಡಿಸಿದ್ದಾರೆ. ಆ ಬಳಿಕ ಹಲ್ಲೆಗೆ ಯತ್ನಿಸಿ ಸ್ಥಳದಿಂದ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಮಂಡ್ಯದಲ್ಲಿ ಸುರಕ್ಷಿತ ಸಾಮಗ್ರಿ ವಿತರಣೆ
SSLC ಪರೀಕ್ಷೆ ಫಲಿತಾಂಶ: ಬಿಬಿಎಂಪಿ ಶಾಲೆಯ ಮೂವರು ವಿದ್ಯಾರ್ಥಿನಿಯರು ಶೇ.95ಕ್ಕೂ ಹೆಚ್ಚು ಅಂಕ