ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಢ್ಲಘಟ್ಟದ ಕಾರ್ಯ ನಿರ್ವಾಹಣಾಧಿಕಾರಿಯೊಬ್ಬರು 1.50 ಲಕ್ಷ ಲಂಚ ಪಡೆಯುತ್ತಿದ್ದಾಗಲೇ, ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಪಂಚಾಯ್ತಿ ಜಿ.ಮುನಿರಾಜು ಅವರು, ಖಾತೆ ಬದಲಾವಣೆ ಮಾಡಿಕೊಡೋದಕ್ಕಾಗಿ ಜಿ.ಬಿ ನಂಜೇಗೌಡ ಎಂಬುವರಿಗೆ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇಓ ಜಿ.ಮುನಿರಾಜು ಲಂಚಕ್ಕೆ ಬೇಡಿಕೆ ಇಟ್ಟಿರೋ ವಿಷಯವನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಂದು ಇಓ ಜಿ.ಮುನಿರಾಜು ಅವರು 1.50 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಗ ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಲೋಕಾಯುಕ್ತ ಅಧಿಕಾರಿಗಳು ಶಿಡ್ಲಘಟ್ಟ ಇಒ ಜಿ.ಮುನಿರಾಜು ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಮೂಲಕ 1.50 ಲಕ್ಷ ಲಂಚ ಸ್ವೀಕರಿಸುತ್ತಿದ್ದಂತ ಜಿ.ಮುನಿರಾಜುಗೆ ಕಾನೂನು ಕ್ರಮದ ಬಾಣ ಬೀಸಿದ್ದಾರೆ.
ನಾನು ಜೇಬಲ್ಲಿ ‘ಪೆನ್ ಡ್ರೈವ್, CD’ ಇದೆ ಎಂದು ಹೆದರಿಸೋನಲ್ಲ, ನೇರವಾಗಿ ‘ಚುನಾವಣೆ’ ಎದುರಿಸೋನು: ಡಿಕೆಶಿ