ಬೆಂಗಳೂರು : ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕೇಂದ್ರ ಸರ್ಕಾರ ನೀಡುವಲ್ಲಿ ತಾರತಮ್ಯ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಾರೆ. ಈ ಕುರಿತಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮೋದಿ ಬಗ್ಗೆ ಮಾತನಾಡುವ ನೀವು ಹಣಕಾಸು ಮಂತ್ರಿಯಾಗಿದ್ದಾಗ ಏನು ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ.
ಮಹಾ ಶಿವರಾತ್ರಿಯ ದಿನಾಂಕ, ಪೂಜಾ ಸಮಯ, ಇತಿಹಾಸ, ಮಹತ್ವ ಮತ್ತು ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ!
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆಯಿಂದ ನೀವು ಬರೀ ಮೋದಿ ಮೋದಿ ಅಂತೀರಾ. ಪ್ರಧಾನಿ ಮೋದಿಯವರನ್ನ ಇಡಿ ವಿಶ್ವವೇ ಒಪ್ಪಿದೆ. ನೀವು ಮಾತ್ರ ಬರೀ ಮೋದಿ ಕುರಿತು ಮಾತನಾಡುತ್ತೀರಿ.ಸಿದ್ದರಾಮಯ್ಯ ಏಕೆ ಪ್ರಧಾನಿ ಮೋದಿ ಬಗ್ಗೆ ಮಾತಾಡುತ್ತಾರೆ? ನೀವು ಹಣಕಾಸು ಮಂತ್ರಿ ಆಗಿದ್ದಾಗ ಏನ್ಮಾಡಿದ್ರಿ ಹೇಳಿ ಎಂದು ಪ್ರಶ್ನಿಸಿದರು.
ಬೆಳಿಗ್ಗೆಯಿಂದ ನೀವು ಬರೀ ಮೋದಿ ಮೋದಿ ಅಂತೀರಾ. ಪ್ರಧಾನಿ ಮೋದಿಯವರನ್ನ ಇಡಿ ವಿಶ್ವವೇ ಒಪ್ಪಿದೆ. ನೀವು ಮಾತ್ರ ಬರೀ ಮೋದಿ ಕುರಿತು ಮಾತನಾಡುತ್ತೀರಿ. ಸಿದ್ದರಾಮಯ್ಯ ಯಾಕೆ ಪ್ರಧಾನಿ ಮೋದಿ ಬಗ್ಗೆ ಮತನಾಡುತ್ತಿರಾ? ಫೈನಾನ್ಸ್ ಕಮೀಟಿ ಸೂಚಿಸಿದ ಹಣ ಬಿಟ್ಟು ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಬೇರೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
‘ಲೋಕಸಭಾ ಚುನಾವಣೆ’ಗೆ ಕರ್ನಾಟಕದ ಕ್ಷೇತ್ರಗಳಿಗೆ ‘ಕಾಂಗ್ರೆಸ್ ಅಭ್ಯರ್ಥಿ’ಗಳ ಪಟ್ಟಿ ಬಿಡುಗಡೆ ಮುಹೂರ್ತ ಫಿಕ್ಸ್
ಬೆಂಗಳೂರಿನಲ್ಲಿ ಜನರು ನೀರಿಗಾಗಿ ಅಹಂಕಾರ ನಡೆಸುತ್ತಿದ್ದಾರೆ. ಇಷ್ಟು ದಿನ ಬಿಟ್ಟು ಈಗ ಉಪಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ನೀರಿನ ಬಗ್ಗೆ ಎಷ್ಟೆಲ್ಲ ಸಮಸ್ಯೆ ಇದೆ. ಇದರ ಬಗ್ಗೆ ಕೇಳಲು ನಾನು ನೀರಾವರಿ ಇಲಾಖೆಯ ಕಾರ್ಯದರ್ಶಿಗೆ ಕರೆ ಮಾಡಿದ್ದೆ. ಆದರೆ ನನ್ನ ಕರೆ ಸ್ವೀಕರಿಸಲಿಲ್ಲ. ನಾನೇನು ನನ್ನ ಸ್ವಂತ ಕೆಲಸಕ್ಕೆ ಕರೆ ಮಾಡಿದ್ನಾ.? ಆತ ಯಾರು ಅಂತ ವಿಚಾರಿಸಿದೆ. ಸಿದ್ದರಾಮಯ್ಯ ನವರ ದೂರದ ಸಂಬಂಧಿ ಇರಬೇಕು. ಆಡಳಿತ ಹೇಗೆ ನಡಿತಿದೆ ಎಂಬುವುದಕ್ಕೆ ಇದು ಉದಾಹರಣೆ ಎಂದರು.