ಮಂಡ್ಯ: ಜಿಲ್ಲೆಯಲ್ಲಿ ರೈತರೊಬ್ಬರಿಂದ 10,000 ಲಂಚವನ್ನು ಪಡೆಯುತ್ತಿದ್ದಾಗ ತಹಶೀಲ್ದಾರ್ ಕಚೇರಿಯ ಎಫ್ ಡಿಎ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಡ್ಯ ತಹಶೀಲ್ದಾರ್ ಕಚೇರಿಯ ಲಂಚಾವತಾರ ಬಯಲಾಗಿದೆ. ಮರಕಾಡುದೊಡ್ಡಿ ಗ್ರಾಮದ ರೈತ ಮೋಹನ್ ಎಂಬುವರು ಭೂಮಿ ಶಾಖೆಯ ಎಫ್ ಡಿಎ ತಿಪ್ಪೇಸ್ವಾಮಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಮಂಡ್ಯ ತಹಶೀಲ್ದಾರ್ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಭೂಮಿ ಶಾಖೆಯ ಎಫ್ ಡಿಎ ತಿಪ್ಪೇಸ್ವಾಮಿಯನ್ನು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿಯೇ ಬಲೆಗೆ ಕೆಡವಿದ್ದಾರೆ.
ಲೋಕಾಯುಕ್ತ ಸಿಪಿಐ ಬ್ಯಾಟರಾಯನಗೌಡ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮಂಡ್ಯ ತಹಶೀಲ್ದಾರ್ ಕಚೇರಿಯ ಭೂಮಿ ಶಾಖೆಯ ಎಫ್ ಡಿಎ ತಿಪ್ಪೇಸ್ವಾಮಿ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಉತ್ತರ ಕನ್ನಡದಲ್ಲಿ ಮನಕಲಕುವ ಘಟನೆ: 1 ದಿನದ ನವಜಾತ ಶಿಶುವನ್ನು ಪೊದೆಯಲ್ಲಿ ಬಿಸಾಡಿದ ದುಷ್ಕರ್ಮಿಗಳು
ಸೆಪ್ಟೆಂಬರ್ ತಿಂಗಳಲ್ಲಿ ‘ಅರಿವು ಕೇಂದ್ರ’ಗಳಲ್ಲಿ ವಿಶೇಷ ಕಾರ್ಯಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
BREAKING : ಕುಸ್ತಿಪಟು ವಿನೇಶ್ ಪೋಗಾಟ್, ಭಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ | Joining Congress