Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ನವದೆಹಲಿ : ಇಂದಿನಿಂದ ಕೊರೋನಾ ಲಸಿಕೆ ಅಭಿಯಾನದ ಮುಂದಿನ ಭಾಗವಾಗಿ ಹಿರಿಯ ನಾಗರಿಕರಿಗೆ ಸರ್ಕಾರ ಲಸಿಕೆ ನೀಡಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮೊದಲು ಕಿರಿಯರಿಗೆ ಈ ಲಸಿಕೆ ನ್ನು ನೀಡಬೇಕು ಎಂದು ಹೇಳಿದರು.
ನೀವು ಲಸಿಕೆ ಯನ್ನು ಪಡೆಯುತ್ತೀರಾ ಎಂದು ಕೇಳಿದಾಗ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ”ನಾನು 70 ವರ್ಷ ಮೇಲ್ಪಟ್ಟವಯಸ್ಸಿನವನಾಗಿದ್ದೇನೆ. ನನ್ನ ಬದಲಾಗಿ, ಇನ್ನು ಹಲವು ಕಾಲ ಬಾಳಿ ಬದುಕಬೇಕಾದ ಕಿರಿಯರಿಗೆ ನೀವು ಅದನ್ನು (Covid-19 ಲಸಿಕೆ) ನೀಡಬೇಕು. ನನಗೆ ಇನ್ನೂ 10-15 ವರ್ಷ ಬದುಕಿದೆ ಅಷ್ಟೇ’ ಎಂದು ಹೇಳಿದರು.
ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ರಾಜಕಾರಣಿಗಳು ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದರು.
ಏಮ್ಸ್ ನಲ್ಲಿ ಭಾರತ್ ಬಯೋಟೆಕ್ ನಿಂದ ಸ್ವದೇಶಿ ನಿರ್ಮಿತ ಕೊವಾಕ್ಸಿನ್ ಅನ್ನು ಪಿಎಂ ಮೋದಿ ಅವರು ಸ್ವಾಗತಿಸಿದ್ದು, ಇನ್ನೋಕ್ಯುಲೇಟೆಡ್ ಗೆ ಅರ್ಹರಾದ ಎಲ್ಲರಿಗೂ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.
ಧಾರವಾಡ: ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ತಗುಲುವ ಕೀಟಬಾಧೆ ಸಮಸ್ಯೆಯನ್ನ ಪರಿಹರಿಸಲು ಮುಂದಾಗಿದ್ದು, 108 ಆ್ಯಂಬುಲೆನ್ಸ್ ಮಾದರಿಯಲ್ಲಿ ‘ಕೃಷಿ ಸಂಜೀವಿನಿ’ ಎಂಬ ಹೆಸರಿನಲ್ಲಿ ವಾಹನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ನಲವಗುಂದ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾತನಾಡಿದ ಸಚಿವರು, “108 ಆ್ಯಂಬುಲೆನ್ಸ್ ಮಾದರಿಯಲ್ಲಿ ‘ಕೃಷಿ ಸಂಜೀವಿನಿ’ ಎಂಬ ಹೆಸರಿನಲ್ಲಿ ವಾಹನಕ್ಕೆ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ 155313 ಸಂಖ್ಯೆಗೆ ರೈತರು ಕರೆ ಮಾಡಿದರೆ ಸಾಕು. ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ತಜ್ಞರು ರೈತರ ಹೊಲಗಳಿಗೆ ತೆರಳಿ ಬೆಳೆಗೆ ಆಗಿರುವ ಸಮಸ್ಯೆ, ಕೀಟಬಾಧೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮ, ಮಣ್ಣಿನ ಪರೀಕ್ಷೆಯನ್ನು ಎದುರಿನಲ್ಲೇ ಮಾಡಿಕೊಡಲಿದ್ದಾರೆ” ಎಂದು ವಿವರಿಸಿದರು.
ಇನ್ನು 20 ರೈತರ ಗುಂಪನ್ನ ಮಾಡಿಕೊಂಡು ಕೃಷಿ ಸಹಕಾರ ಸೊಸೈಟಿ ತೆರೆಯಲಾಗುತ್ತಿದೆ. ಸರ್ಕಾರದಿಂದ ಈ ಸೊಸೈಟಿಗೆ ಟ್ರ್ಯಾಕ್ಟರ್ ಖರೀದಿಸಲು 8 ಲಕ್ಷ ನೀಡಲಾಗುತ್ತಿದ್ದು 2 ಲಕ್ಷ ಸೊಸೈಟಿ ವತಿಯಿಂದ ಭರಿಸಬೇಕು. ಆ ಟ್ರ್ಯಾಕ್ಟರ್ʼನ್ನ ಗುಂಪಿನ 20 ರೈತರು ಬಳಸಬಹುದಾಗಿದೆ. ಈಗಾಗಲೇ 100 ಇಂಥ ಸೊಸೈಟಿಗಳನ್ನು ತೆರೆಯಲಾಗಿದ್ದು ಪ್ರತಿ ಗ್ರಾಮದಲ್ಲೂ ಪ್ರಾರಂಭಿಸಲಾಗುವುದು ಎಂದರು.
ನವದೆಹಲಿ: ವಾಟ್ಸ್ಆ್ಯಪ್ನ ಹೊಸ ಗೌಪ್ಯತೆ ನೀತಿಯ ವಿರುದ್ಧ ಅರ್ಜಿಯನ್ನು ಇಂದು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ. ವಾಟ್ಸ್ಆಪ್ ಸಂಸ್ಥೆ ಕೇಂದ್ರ ಸರ್ಕಾರದ ಪ್ರಶ್ನೆಗಳಿಗೆ ಸ್ಪಂದಿಸುವಂತೆ ಕೇಳಿಕೊಳ್ಳಲಾಗಿದೆ.
ಕಳೆದ ವಿಚಾರಣೆಯಲ್ಲಿ, ಕೇಂದ್ರ ಸರ್ಕಾರವು ವಾಟ್ಸ್ಆಪ್ನ ಹೊಸ ಗೌಪ್ಯತೆ ನೀತಿಯನ್ನು ಪರಿಗಣಿಸುತ್ತಿದೆ ಎಂದು ಹೇಳಿದೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯ ವಿರುದ್ಧ ಸಂಬಂಧಿತ ಪ್ರಶ್ನೆಯನ್ನು ಎತ್ತಿದೆ.
ಕಳೆದ ವಿಚಾರಣೆಯ ಸಮಯದಲ್ಲಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು “ಭಾರತೀಯ ಮತ್ತು ಯುರೋಪಿಯನ್ ಬಳಕೆದಾರರಲ್ಲಿ ವಾಟ್ಸ್ಆ್ಯಪ್ ಗೌಪ್ಯತೆ ನೀತಿ ಬದಲಾಗುತ್ತದೆ. ಭಾರತೀಯ ಬಳಕೆದಾರರು ಗೌಪ್ಯತೆ ನೀತಿಯಿಂದ ವಂಚಿತರಾಗಿದ್ದಾರೆ. ಆದರೆ, ಯುರೋಪಿಯನ್ ಬಳಕೆದಾರರಿಗೆ ಆ ನೀತಿ ಲಭ್ಯವಿದೆ” ಎಂದು ಹೇಳಿದ್ದರು.
ಧಾರವಾಡ: ನಮ್ಮ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಎಂಬ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ನಲವಗುಂದ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾತನಾಡಿದ ಸಚಿವರು, “ನಮ್ಮ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಅನ್ನೋ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ. ಇದರಲ್ಲಿ ರೈತನ ಫೋಟೋ, ಆಧಾರ ಸಂಖ್ಯೆ, ಊರು, ವಿಳಾಸ ದಾಖಲಾಗಿರುತ್ತದೆ. ಕ್ಯೂ ಆರ್ ಕೋಡ್ ಇರುತ್ತೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 1.5 ಲಕ್ಷ ರೈತರಿಗೆ ಈ ಕಾರ್ಡ್ವಿತರಿಸಲಾಗುತ್ತಿದ್ದು ಮುಂದೆ ರಾಜ್ಯದ 68 ಲಕ್ಷ ರೈತರಿಗೆ ವಿಸ್ತರಿಸಲಾಗುವುದು” ಎಂದರು.
ನ್ಯೂಸ್ ಡೆಸ್ಕ್ : ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಒಳಾಂಗಣ ಕಾರ್ಯಕ್ರಮಗಳಲ್ಲಿ ಜನರು ಭಾಗಿಯಾಗುವುದರಿಂದ ಮುಂಬರುವ ತಿಂಗಳುಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ ಎಚ್ಚರದಿಂದಿರಿ ಎಂದು ಕೆನಡಾ ಮೂಲದ ಹಿರಿಯ ಸಾಂಕ್ರಾಮಿಕ ರೋಗ ತಜ್ಞರೊಬ್ಬರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಟೊರಾಂಟೋ ಮೂಲದ ಪ್ರಭಾತ್ ಝಾ ಅವರು ಟೊರಾಂಟಟೋ ವಿಶ್ವವಿದ್ಯಾಲಯದ ಯುನಿಟಿ ಹೆಲ್ತ್ ಸೇಂಟ್ ಮೈಕಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ ಮತ್ತು ಸೆಂಟರ್ ಫಾರ್ ಗ್ಲೋಬಲ್ ಹೆಲ್ತ್ ರಿಸರ್ಚ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪ್ರಭಾತ್ ಝಾ ಈ ಎಚ್ಚರಿಕೆ ನೀಡಿದರು.
ಝಾ ಅವರು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಸಹಯೋಗದಲ್ಲಿ ಭಾರತದಲ್ಲಿ ನಡೆದ ಮಿಲಿಯನ್ ಡೆತ್ ಸ್ಟಡಿಯಲ್ಲಿ ಮುಖ್ಯ ತನಿಖಾಧಿಕಾರಿಯೂ ಹೌದು.
ಕೆನಡಾದಂತಹ ದೇಶಗಳಲ್ಲಿ ತಾಪಮಾನವು ಕುಸಿಯುತ್ತಿರುವ ಕಾರಣ, ಜನರು ಒಳಗಡೆ ಇರಲು ಬಯಸುತ್ತಾರೆ. ಹಾಗೇಯೆ ಬೇಸಿಗೆಯ ಬಿಸಿಯ ಸಂದರ್ಭದಲ್ಲಿ ಭಾರತಕ್ಕೆ ಇದೇ ರೀತಿಯ ಅನುಭವ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಮೇ ಮತ್ತು ಜೂನ್ ತಿಂಗಳುಗಳಲ್ಲಿ ತಾಪಮಾನ ಏರಿಕೆಯಾಗುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದ ಅವರು, “ಇಂದು ಅನೇಕ ರಾಜ್ಯಗಳಲ್ಲಿ ಕೊರೋನಾ ಹೆಚ್ಚುತ್ತಿರಲು ಕಾರಣ ಮಾಸ್ಕ್ ಹಾಕದೇ ಇರುವುದು ಮತ್ತು ಒಳಾಂಗಣ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಸೇರುತ್ತಿರುವುದು ಎಂದ ಅವರು. ಇನ್ನು ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟೂ ಏರಿಕೆಯಾಗಲಿದೆ ಎಂದು ಹೇಳಿದರು.
ಮಂಗಳೂರು: ಇಂದಿನಿಂದ ದೇಶಾದ್ಯಂತ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವೈರಸ್ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಅದ್ರಂತೆ, ರಾಜ್ಯದಲ್ಲೂ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತೆ.
ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆಗಳನ್ನ ನೀಡಲಾಗುದ್ರೆ, ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಡೋಸ್ ಒಂದಕ್ಕೆ 250 ರೂ. ನೀಡಬೇಕಾಗುತ್ತೆ.ರಾಜ್ಯದ ಜನರು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದ್ರು ಕೋ-ವಿನ್ 2.0 ಪೋರ್ಟಲ್ ಮತ್ತು ಆರೋಗ್ಯ ಸೇತುದಂತಹ ಇತರ ಐಟಿ ಅಪ್ಲಿಕೇಶನ್ʼಗಳ ಮೂಲಕ ಲಸಿಕೆಯನ್ನ ನೋಂದಾಯಿಸಬಹುದು ಮತ್ತು ಬುಕ್ ಮಾಡಬಹುದು.
ಮಂಗಳೂರು ಭಾಗದಲ್ಲಿ ಯಾವ್ಯಾವ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತೆ. ಇಲ್ಲಿದೆ ಪೂರ್ಣ ಪಟ್ಟಿ..!
1) ಫಾದರ್ ಮುಲ್ಲರ್ ಆಸ್ಪತ್ರೆ
2) ಶ್ರೀನಿವಾಸ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಆರ್.ಸಿ.
3) ಚೇತನಾ ಆಸ್ಪತ್ರೆ
4) ಆದರ್ಶ ಆಸ್ಪತ್ರೆ ಪುತ್ತೂರು
5) ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ
6)ಅಭಯ ಆಸ್ಪತ್ರೆ
7) ಜ್ಯೋತಿ ಆಸ್ಪತ್ರೆ ಲೈಲಾ ಬೆಲ್ತಂಗಡಿ
8) ಎಲ್.ಎಂ.ಪಿಂಟೋ ಆರೋಗ್ಯ ಕೇಂದ್ರ ಚಾರಿಟಬಲ್ ಟ್ರಸ್ಟ್
9) ಸೋಮಯಾಜಿ ಆಸ್ಪತ್ರೆ
10) ಆಳ್ವಾಸ್ ಆರೋಗ್ಯ ಕೇಂದ್ರ .
11) ಶ್ರೀ ಕೃಷ್ಣ ಆಸ್ಪತ್ರೆ
12) ಬೆನಕಾ ಆರೋಗ್ಯ ಕೇಂದ್ರ
13) ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಎಸ್ ಡಿಎಂ ಆಸ್ಪತ್ರೆ .
14) ಮಹಾವೀರ್ ಮೆಡಿಕಲ್ ಸೆಂಟರ್
15) ಧನ್ವಂತರಿ ಆಸ್ಪತ್ರೆ
16) ಕೆವಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆ
17) ತಾರಾ ಆಸ್ಪತ್ರೆ
18) ಕೆಎಂಸಿ ಆಸ್ಪತ್ರೆ ಹೊಸ
19) ಕೆಎಂಸಿ ಆಸ್ಪತ್ರೆ ಅಟವರ್
20) ಮಂಗಳೂರು ಇನ್ ಸ್ಟಿಟ್ಯೂಟ್ ಆಂಕಾಲಜಿ
21) ಪ್ರಸಾದ್ ನೇತ್ರಾಲಯ
22) ಇಂಡಿಯಾನಾ ಆಸ್ಪತ್ರೆ ಹಾರ್ಟ್ ಇನ್ಸ್ಟಿಟ್ಯೂಟ್ ಲಿ.
23) ಒಮೆಗಾ ಆಸ್ಪತ್ರೆ ಪ್ರೈವೇಟ್ ಲಿಮಿಟೆಡ್ ಮಂಗಳೂರು
24) ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಖಾಸಗಿ
25) ಯುನಿಟಿ ಆಸ್ಪತ್ರೆ ಯು.ಸಿ.ಎಚ್.ಎಸ್.
26) ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ
27) ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ
28) ಕಣಚೂರ್ ಆಸ್ಪತ್ರೆ ಸಂಶೋಧನಾ ಕೇಂದ್ರ
29) ನ್ಯಾಯಮೂರ್ತಿ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ
30) ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ
ಉಡುಪಿ ಖಾಸಗಿ ಲಸಿಕೆ ಕೇಂದ್ರಗಳ ಪಟ್ಟಿ
1) ಸ್ಪಂದನ ಆಸ್ಪತ್ರೆ ಕಾರ್ಕಳ
2) ನಿಟ್ಟೆ ಗಜ್ರಿಯಾ ವಿಶೇಷತೆ .
3) ಪ್ರಸಾದ್ ನೇತ್ರಾಲಯ
4) ನ್ಯೂ ಸಿಟಿ ಆಸ್ಪತ್ರೆ
5) ಮಿತ್ರಾ ಆಸ್ಪತ್ರೆ
6) ಆದರ್ಶ ಆಸ್ಪತ್ರೆ
7) ಮಂಜುನಾಥ ಕಣ್ಣಿನ ಆಸ್ಪತ್ರೆ
8) ಡಾ.ಟಿ.ಎಂ.ಎ.ಪೈ ಆಸ್ಪತ್ರೆ
9) ಸುನಾಗ್ ಆರ್ಥೋ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಸೆಂಟರ್
10) ಹೈಟೆಕ್ ಮೆಡಿಕೇಡ್ ಆಸ್ಪತ್ರೆ
11) ಕಸ್ತೂರಬಾ ಆಸ್ಪತ್ರೆ
12) ಆದರ್ಶ ಆಸ್ಪತ್ರೆ ಕುಂದಾಪುರ .
13) ಶ್ರೀ ದೇವಿ ಆಸ್ಪತ್ರೆ
13) ಚಿನ್ಮಯಿ ಆಸ್ಪತ್ರೆ
14) ಶ್ರೀ ಮಂಜುನಾಥ ಆಸ್ಪತ್ರೆ
15) ಶ್ರೀ ಮಠ ಆಸ್ಪತ್ರೆ
16) ವಿವೇಕ್ ಆಸ್ಪತ್ರೆ
17) ಪ್ರಣವ್ ಆಸ್ಪತ್ರೆ .
18) ಮಹೇಶ್ ಆಸ್ಪತ್ರೆ
19) ಡಾ.ಎನ್.ಆರ್.ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್
20) ಸರ್ಜನ್ಸ್ ಆಸ್ಪತ್ರೆ
ಕನ್ಯಾಕುಮಾರಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ. ಅದನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ .
ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಸಂಸ್ಕೃತಿಯ ರಕ್ಷಣೆ ಮಾಡಬೇಕಿದ್ದ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ, ಪ್ರಧಾನಿ ಮೋದಿ ಬಯಸಿದ್ದನ್ನೇ ಮಾಡುತ್ತಾ ತಮಿಳು ಸಹೋದರರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪಳನಿಸ್ವಾಮಿ ಆರ್ಎಸ್ಎಸ್ಗೆ ತಮಿಳು ಸಂಸ್ಕೃತಿಯನ್ಜು ಅವಮಾನಿಸಲು ಯಾವುದೇ ಕಾರಣಕ್ಕೂ ಬಿಡಬಾರದು. ಆರ್ಎಸ್ಎಸ್ ಮೊದಲಿನಿಂದಲೂ ದ್ರಾವಿಡ ಸಂಸ್ಕೃತಿಯನ್ನು ತಿರಸ್ಕರಿಸುತ್ತಲೇ ಬಂದಿದ್ದು, ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಕೂಟದಿಂದ ತಮಿಳು ಸಂಸ್ಕೃತಿಗೆ ಮತ್ತಷ್ಟು ಹಾನಿಯಾಗಲಿರುವುದುಯ ಖಚಿತ ಎಂದು ರಾಹುಲ್ ಎಚ್ಚರಿಸಿದರು.
ಬೆಂಗಳೂರು: ಬೆಲೆ ಏರಿಕೆ ನಡುವೆ ಮತ್ತೊಂದು ಜನ ಸಾಮಾನ್ಯರಿಗೆ ಬಿಗ್ ಶಾಕ್ ಎದುರಾಗಿದ್ದು, ಆಟೋ ಪ್ರಯಾಣ ದರ ಏರಿಕೆಗೆ ಮನವಿ ಮಾಡಲಾಗಿದೆ.
ಹೌದು, ತೈಲ ಹಾಗೂ ಗ್ಯಾಸ್ ದರ ಏರಿಕೆಯಿಂದ ಆಟೋ ಚಾಲಕರು ತತ್ತರಿಸಿದ್ದು, ಆಟೋಗಳ ದರ ಪರಿಷ್ಕರಣೆಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಪ್ರಯಾಣ ದರ 25 ರು. ಇದ್ದು ಇದನ್ನ 36 ರು.ಗಳಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ಅಂದ್ಹಾಗೆ, 2013ರಲ್ಲಿ 1.9 ಕಿಲೋ ಮೀಟರ್ʼಗೆ ಕನಿಷ್ಟ ಪ್ರಯಾಣ ದರ 20 ರಿಂದ 25 ರೂಪಾಯಿ ಹೆಚ್ಚಳವಾಗಿತ್ತು. ನಂತ್ರ 2019 ರಲ್ಲಿ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾತ್ತಾದ್ರು, ಸರ್ಕಾರ ಅನುಮತಿ ನೀಡಿರಲಿಲ್ಲ. ಆದ್ರೆ ಸಧ್ಯ ತೈಲ ಹಾಗೂ ಗ್ಯಾಸ್ ದರ ಹೆಚ್ಚಳವಾಗಿರೋದ್ರಿಂದ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.
ತಿರುಪತಿ : ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ತಿರುಪತಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ತೂರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹಾಜರಾಗಲು ಚಂದ್ರಬಾಬು ನಾಯ್ಡು ತೆರಳುತ್ತಿದ್ದ ವೇಳೆ ಏರ್ಪೋರ್ಟ್ನಲ್ಲೇ ರೇನಿಗುಂಟಾ ಪೊಲೀಸರು ತಡೆದಿದ್ದಾರೆ. ಇದನ್ನು ಖಂಡಿಸಿದ ನಾಯ್ಡು, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಲು ಕುಳಿತಿದ್ದಾರೆ. ಈ ವೇಳೆ ರೇನಿಗುಂಟಾ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಬೇಕಾದರೆ ನನ್ನನ್ನು ಬಂಧಿಸಿ. ಆದರೆ ನಿರ್ಭಂಧಿಸಬೇಡಿ. ಇಲ್ಲಿ ಏನು ನಡೆಯುತ್ತಿದೆ? ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತಿದ್ದೇನಾ? ಎಂದು ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಪ್ಲೇ ಸ್ಟೋರ್ʼನಲ್ಲಿ ಲಭ್ಯವಿರುವ CoWIN ಆ್ಯಪ್ʼನಿಂದ ಲಸಿಕೆ ನೋಂದಾಯಿಸಿಕೊಳ್ಳಲು ಅಥ್ವಾ ಬುಕ್ ಮಾಡಲು ಸಾಧ್ಯವಿಲ್ಲ. ಕೋವಿಡ್-19 ಲಸಿಕೆ ನೋಂದಾಣಿಯನ್ನ ಪೋರ್ಟಲ್ ಮೂಲಕ ಮಾತ್ರ ಮಾಡಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಆ್ಯಪ್ ಕೇವಲ ನಿರ್ವಾಹಕರ ಬಳಕೆಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿರುವ ಕೇಂದ್ರ, ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್ ವರ್ಕ್ (CoWIN) ಎಂಬುದು ಸರ್ಕಾರ ಅಭಿವೃದ್ಧಿಪಡಿಸಿದ ವೇದಿಕೆಯಾಗಿದೆ. ಇದನ್ನು ನಂತರದಲ್ಲಿ ಇನಾಕ್ಯುಲೇಶನ್ ಡ್ರೈವ್ ನಿರ್ವಹಿಸಲು ಬಳಸಲಾಗುತ್ತದೆ ಎಂದಿದೆ.
ಭಾರತದ ಬೃಹತ್ ಕೋವಿಡ್-19 ಲಸಿಕೆ ಅಭಿಯಾನವು 2ನೇ ಹಂತವನ್ನ ಪ್ರವೇಶಿಸಿದ್ದು, 60 ವರ್ಷ ಮೇಲ್ಪಟ್ಟ ಅಥವಾ 45 ವರ್ಷ ಮೇಲ್ಪಟ್ಟವರನ್ನ ಸೋಂಕಿನಿಂದ ದೂರ ಇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಹಂತದಲ್ಲಿ ಸುಮಾರು 27 ಕೋಟಿ ಜನರು ಒಳಗೊಳ್ಳುವ ನಿರೀಕ್ಷೆಯಿದೆ. ಈ ಪೈಕಿ ಸುಮಾರು 10 ಕೋಟಿ ಜನರು 60 ಕ್ಕಿಂತ ಮೇಲ್ಪಟ್ಟವರು ಎಂದು ಸರ್ಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನವದೆಹಲಿಗೆ ಭೇಟಿ ನೀಡಿ, ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನವದೆಹಲಿ : ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮುಂದುವರಿಸುತ್ತಿದ್ದಂತೆ, 2021-22ನೇ ಸಾಲಿನ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ತೆಗೆದುಕೊಳ್ಳಲಾದ ನಿಬಂಧನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅನುಮೋದಿಸಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪುನರುಚ್ಚರಿಸಿದರು. ಸಣ್ಣ ಮತ್ತು ಮಧ್ಯಮ ಮಟ್ಟದ ರೈತರಿಲ್ಲದೆ ಭಾರತ ಬೆಳೆಯಲು ಸಾಧ್ಯವಿಲ್ಲ ಎಂದು ಪಿಎಂ ಮೋದಿ ಹೇಳಿದ್ದಾರೆ.
“ಅವರು (ಸಣ್ಣ ಮತ್ತು ಮಧ್ಯಮ ಮಟ್ಟದ ರೈತರು) ಇಲ್ಲದೆ ನಾವು ಬೆಳೆಯುವುದಿಲ್ಲ ಎಂದು ಪಿಎಂ ನರೇಂದ್ರ ಮೋದಿ ಹೇಳಿದರು, ಇನ್ನೂ 1,000 ಮ೦ದಿಯನ್ನು ಇ-ನಾಮ್ ಗೆ ಸಂಪರ್ಕಿಸಲು ಯೋಜನೆ ಇದೆ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿರುವ ಪಿಎಂ ನರೇಂದ್ರ ಮೋದಿ, ಸರ್ಕಾರ ಕೃಷಿ ಸಾಲ ನೀಡುವ ಗುರಿಯನ್ನು 16.50 ಲಕ್ಷ ಕೋಟಿ ರೂ.ಗೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಮೂಲಸೌಕರ್ಯ ನಿಧಿ ಯನ್ನು 40 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಸೂಕ್ಷ್ಮ ನೀರಾವರಿ ನಿಧಿ ದ್ವಿಗುಣಗೊಂಡಿದೆ’ ಎಂದು ಪಿಎಂ ನರೇಂದ್ರ ಮೋದಿ ಹೇಳಿದರು.
ಪಿಎಂ ನರೇಂದ್ರ ಮೋದಿ ಕೂಡ ಹಿಂದಿನ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಆಹಾರ ಸಂಸ್ಕರಣಾ ಕ್ರಾಂತಿಯನ್ನು ಎರಡು-ಮೂರು ದಶಕಗಳ ಹಿಂದೆಯೇ ಮಾಡಬೇಕಿತ್ತು ಎಂದು ಹೇಳಿದರು.
’21ನೇ ಶತಮಾನದ ಭಾರತದಲ್ಲಿ ಕೃಷಿ ಉತ್ಪಾದನೆ ಹೆಚ್ಚುತ್ತಿರುವ ನಡುವೆಯೇ ಸುಗ್ಗಿಯ ನಂತರದ ಅಥವಾ ಆಹಾರ ಸಂಸ್ಕರಣೆ ಕ್ರಾಂತಿ ಮತ್ತು ಮೌಲ್ಯವರ್ಧನೆಯ ಅಗತ್ಯವಿದೆ. 2-3 ದಶಕಗಳ ಹಿಂದೆ ಈ ರೀತಿ ಮಾಡಿದ್ದರೆ ದೇಶಕ್ಕೆ ಒಳ್ಳೆಯದಾಗುತ್ತಿತ್ತು’ ಎಂದು ಪಿಎಂ ನರೇಂದ್ರ ಮೋದಿ ಹೇಳಿದರು.
ನವದೆಹಲಿ: ದೇಶಾದ್ಯಂತ 2ನೇ ಹಂತದ ಲಸಿಕೆಯ ಅಭಿಯಾನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವ್ರು ಲಸಿಕೆ ತೆಗೆದುಕೊಂಡು, 60 ವರ್ಷದ ಮೊದಲ ಫಲಾನುಭವಿಯಾಗಿ ಎನ್ನಿಸಿಕೊಂಡಿದ್ದಾರೆ. ಅರ್ಹರು ಲಸಿಕೆ ಸ್ವೀಕರಿಸಿ ಎಂದು ಪ್ರಧಾನಿ ಮೋದಿಯವ್ರು ಟ್ವೀಟ್ ಮಾಡಿದ ಬೆನ್ನೆಲ್ಲೇ ಹರಿಯಾಣಾ ಆರೋಗ್ಯ ಸಚಿವ ಅನಿಲ್ ವಿಜ್ ಅವ್ರು ಈ ʼಲಸಿಕೆಯ ಅವಶ್ಯಕತೆ ನನಗಿಲ್ಲʼ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಏಮ್ಸ್ʼನಲ್ಲಿ ಭಾರತ್ ಬಯೋಟೆಕ್ʼನ ಕೊವಾಕ್ಸಿನ್ ಲಸಿಕೆ ಸ್ವೀಕರಿಸಿದ ಪ್ರಧಾನಿ ಮೋದಿ, ” ಅರ್ಹರು ಲಸಿಕೆ ತೆಗೆದುಕೊಂಡು ಭಾರತವನ್ನ ಕೋವಿಡ್ ಮುಕ್ತವನ್ನಾಗಿ ಮಾಡಲು ಸಹಾಯ ಮಾಡುವಂತೆ” ಮನವಿ ಮಾಡಿದರು. ಇದೇ ವೇಳೆ ಹರಿಯಾಣದ ಆರೋಗ್ಯ ಸಚಿವರು ತಾವು ಲಸಿಕೆ ಸ್ವೀಕರಿಸೋದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಆದ್ರೆ, ಇದಕ್ಕೂ ಒಂದು ಕಾರಣವಿದೆ.
ಹೌದು, ಈ ಕುರಿತು ಟ್ವೀಟ್ ಮಾಡಿದ ಆರೋಗ್ಯ ಸಚಿವ, “ಇಂದಿನಿಂದ ಸಾರ್ವಜನಿಕರಿಗೆ ಕರೋನಾ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ಎಲ್ಲರೂ ನೈರ್ಮಲ್ಯದಿಂದ ಕೂಡಿರಬೇಕು. ನಾನು ಅದನ್ನ ಪಡೆಯಲು ಸಾಧ್ಯವಿಲ್ಲ. ಯಾಕಂದ್ರೆ, ಕೋವಿಡ್ ನಂತರ, ನನ್ನ ರೋಗ ನಿರೋಧಕ ಬಹಳಷ್ಟು ಹೆಚ್ಚಿದ್ದು ಶಕ್ತಿ 300 ಆಗಿದೆ. ಬಹುಶಃ ನಾನು ಈ ಹಿಂದೆ ತೆಗೆದುಕೊಂಡ ಪ್ರಯೋಗ ಲಸಿಕೆಯೂ ಇದಕ್ಕೆ ಕಾರಣವಾಗಿರಬಹುದು. ಹಾಗಾಗಿ ಈಗ ನನಗೆ ಲಸಿಕೆಯ ಅವಶ್ಯಕತೆ ಇಲ್ಲ”. ಎಂದಿದ್ದಾರೆ.
आज आम जनता के लिए कोरोना वैक्सीन शुरू होने जा रही है । सब को निस्संकोच लगवानी चाहिए । मैं तो नही लगवा पाऊंगा क्योंकि कोविड होने के बाद मेरी एंटीबाडी 300 बनी है जोकि बहुत ज्यादा है । शायद मैंने जो ट्रायल वैक्सीन लगवाई थी इसमे उसका भी योगदान हो । मुझे अभी वैक्सीन की जरूरत नही है ।
— ANIL VIJ MINISTER HARYANA (@anilvijminister) March 1, 2021
ಅಂದ್ಹಾಗೆ, ನವೆಂಬರ್ʼನಲ್ಲಿ ವಿಜ್ ಅವರಿಗೆ ಕೊವಾಕ್ಸಿನ್ ಡೋಸ್ ಸ್ವೀಕರಿಸಿದ್ರು. ಆದ್ರೆ, ನಂತ್ರ ಅವ್ರು ಸೋಂಕಿಗೆ ತುತ್ತಾದರು ಅನ್ನೋದು ಚರ್ಚೆಗೆ ಕಾರಣವಾಯಿತು. ಆದ್ರೆ, ವಿಷ್ಯ ಏನಪ್ಪಾ ಅಂದ್ರೆ ಅವರು ಕೇವಲ ಒಂದು ಡೋಸ್ ತೆಗೆದುಕೊಂಡಿದ್ದರು. ಇನ್ನು 2ನೇ ಡೋಸ್ ಬಾಕಿ ಇತ್ತು.
ಬೆಂಗಳೂರು: ಚಿನ್ನಾಭರಣಪ್ರಿಯರಿಗೆ ಶುಭ ಸುದ್ದಿ ಇಲ್ಲಿದೆ…. ಮಾರ್ಚ್ ತಿಂಗಳು ಮೊದಲ ದಿನ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ ₹4,592 ರೂಪಾಯಿ ದಾಖಲಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹43,050 ರೂ ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹46,970 ರೂಪಾಯಿಗೆ ತಲುಪಿದೆ.
ಬೆಳ್ಳಿ ದರ ಒಂದು ಕೆಜಿಗೆ ₹67,510 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹68,200 ಇದೆ.
ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹43,050 (22 ಕ್ಯಾರಟ್) ₹46,970 (24 ಕ್ಯಾರಟ್), ಚೆನ್ನೈ: ₹43,310 (22 ಕ್ಯಾರಟ್) ₹47,250 (24 ಕ್ಯಾರಟ್) ಮತ್ತು ದೆಹಲಿಯಲ್ಲಿ : ₹44,810 (22 ಕ್ಯಾರಟ್), ₹48,910 (24 ಕ್ಯಾರಟ್) ದಾಖಲಾಗಿದೆ.
ರಾಮಸಂದ್ರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಪಕ್ಷ ಸಂಘಟನೆ ನಿಟ್ಟಿನಲ್ಲಿ ಇಂದು ಕುರುಡುಮಲೆಗೆ ಭೇಟಿ ನೀಡಿದ್ದು, ಕುರುಡುಮಲೆಯ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವ್ರು ದೇವಾಲಯಕ್ಕೆ ಭೇಟಿ ನೀಡಿ, ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತ್ರ ಮಾತನಾಡಿದ ಅವ್ರು,”1999ರಲ್ಲಿ ಎಸ್.ಎಂ ಕೃಷ್ಣ ಕುರುಡುಮಲೆಯಿಂದ ಯಾತ್ರೆ ಶುರು ಮಾಡಿದ್ದರು. ಪಾಂಚಜನ್ಯ ಯಾತ್ರೆ ಆರಂಭಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದರು. ಅದ್ರಂತೆ, ನಾನು ಕೂಡ ಈಗ ಅದೇ ರೀತಿ ನಾನು ಪಾಂಚಜನ್ಯ ಮೊಳಗಿಸಲಿದ್ದೇನೆ” ಎಂದು ಹೇಳಿದರು.
ನವದೆಹಲಿ : ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನದ ಮೊದಲನೇ ಹಂತ ಯಶಸ್ವಿಯಾಗಿದೆ. ಇದೀಗ ಎರಡನೆ ಹಂತ ಆರಂಭವಾಗಿದ್ದು, ಅದಕ್ಕಾಗಿ ನೋಂದಣಿ ಮಾಡಿಕೊಳ್ಳಲು ಸರ್ಕಾರ ತಿಳಿಸಿದೆ. ೬೦ ವರ್ಷ ಮೇಲ್ಪಟ್ಟವರು ಮತ್ತು ೪೫ ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಕೊರೋನಾ ಲಸಿಕೆ ಪಡೆಯಲು ನೋಂದಣಿ ಮಾಡಬಹುದು. Co-WIN ಅಪ್ಲಿಕೇಶನ್ ಮತ್ತು ಪೋರ್ಟಲ್ ನಲ್ಲಿ ನೀವು ಹೇಗೆ ನೋಂದಾಯಿಸಬಹುದು ಎಂಬುದನ್ನು ಇಲ್ಲಿ ನೋಡಿ.
COWIN.GOV ನಲ್ಲಿ ನೋಂದಣಿ ಹೇಗೆ?
cowin.gov.in ಅಪ್ಲಿಕೇಶನ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗ್ ಆನ್ ಮಾಡಿ
ಎಸ್ ಎಂಎಸ್ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
OTP ಯನ್ನು ನಮೂದಿಸಿ ಮತ್ತು “verify” ಬಟನ್ ಕ್ಲಿಕ್ ಮಾಡಿ
ಒಮ್ಮೆ ಒಟಿಪಿ ಯನ್ನು ಮಾನ್ಯ ಮಾಡಿದ ನಂತರ, “ಲಸಿಕೆಯ ನೋಂದಣಿ” ಪುಟ ತೆರೆದುಕೊಳ್ಳುತ್ತದೆ
ನಿಮ್ಮ ಫೋಟೋ ID ಪ್ರೂಫ್ ನಂತಹ “ಲಸಿಕೆನೋಂದಣಿ” ಪುಟದಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ. ನಿಮಗೆ ಯಾವುದೇ ಸಮಸ್ಯೆಗಳಿವೆಯೇ ಎಂದು ಸಹ ಕೇಳಲಾಗುವುದು. ಇದಕ್ಕೆ ‘ಹೌದು’ ಅಥವಾ ‘ಇಲ್ಲ’ ಕ್ಲಿಕ್ ಮಾಡುವ ಮೂಲಕ ಉತ್ತರಿಸಬಹುದು.
ನೋಂದಣಿಗಾಗಿ ವಿವರಗಳನ್ನು ನಮೂದಿಸಿದ ನಂತರ, ಬಲ ಕೆಳಭಾಗದಲ್ಲಿರುವ “ರಿಜಿಸ್ಟರ್” ಬಟನ್ ಕ್ಲಿಕ್ ಮಾಡಿ
ಯಶಸ್ವಿ ನೋಂದಣಿಯ ಮೇಲೆ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ
ಒಮ್ಮೆ ನೋಂದಣಿ ಮುಗಿದ ನಂತರ, ನಿಮಗೆ “ಖಾತೆ ವಿವರಗಳು” ತೋರಿಸಲಾಗುತ್ತದೆ. “ಖಾತೆ ವಿವರಗಳು” ಪುಟದಿಂದ ನೀವು ನಿಮ್ಮ ಅಪಾಯಿಂಟಮೆಂಟ್ ಅನ್ನು ನಿಗದಿಪಡಿಸಬಹುದು
ಶೆಡ್ಯೂಲ್ ಅಪಾಯಿಂಟ್ಮೆಂಟ್ ಸೂಚಿಸುವ ಬಟನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಅಪಾಯಿಂಟ್ಮೆಂಟ್ ಪಡೆದುಕೊಳ್ಳಬಹುದು.
ಪುಟದ ಬಲಭಾಗದಲ್ಲಿ “ಆಡ್ ಮೋರ್” ಬಟನ್ ಕ್ಲಿಕ್ ಮಾಡುವ ಮೂಲಕ ಈ ಮೊಬೈಲ್ ಸಂಖ್ಯೆಯೊಂದಿಗೆ ಇನ್ನೂ ಮೂರು ಜನರನ್ನು ಸೇರಿಸಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸೇರಿಸಬೇಕಾದ ವ್ಯಕ್ತಿಗಳ ಎಲ್ಲಾ ವಿವರಗಳನ್ನು ನಮೂದಿಸಿ ತದನಂತರ “ಸೇರಿಸು” ಬಟನ್ ಕ್ಲಿಕ್ ಮಾಡಿ
ನವದೆಹಲಿ: ದೇಶದಲ್ಲಿ ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಲಸಿಕೆ ತೆಗೆದುಕೊಂಡ್ರು. ಈ ಮೂಲಕ ಲಸಿಕೆ ತೆಗೆದುಕೊಂಡ ಮೊದಲ 60 ವರ್ಷದ ಮೇಲಿನ ವ್ಯಕ್ತಿ ಎನ್ನಿಸಿಕೊಂಡಿದ್ದಾರೆ.
ದೆಹಲಿಯ ಏಮ್ಸ್ನಲ್ಲಿ ಪ್ರಧಾನಿ ಮೋದಿ ಲಸಿಕೆ ಸ್ವೀಕರಿಸಿದ್ದು, ಕೇರಳದ ರೋಸಮ್ಮ ಅನಿಲ್ ಹಾಗೂ ಪುದುಚೆರಿಯ ಪಿ. ನಿವೇದಾ ಪ್ರಧಾನಿ ಮೋದಿಯವ್ರಿಗೆ ಭಾರತ್ ಬಯೋಟೆಕ್ʼನ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ನೀಡಿದ್ದಾರೆ.
ಲಸಿಕೆ ನಂತ್ರ ಟ್ವೀಟ್ ಮಾಡಿದ ಪ್ರಧಾನಿ ಮೋದಿ, “ನನ್ನ ಮೊದಲ ಡೋಸ್ ಕೊರೊನಾ ಲಸಿಕೆಯನ್ನ ಏಮ್ಸ್ನಲ್ಲಿ ಪಡೆದಿದ್ದೇನೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಶೀಘ್ರಗತಿಯ ಕೆಲಸ ಮಾಡುತ್ತಿರುವ ವೈದ್ಯರು ಹಾಗೂ ವಿಜ್ಞಾನಿಗಳ ಕಾರ್ಯ ಮಹತ್ವವಾದದ್ದು. ಲಸಿಕೆಗೆ ಅರ್ಹರಿರುವ ಎಲ್ಲರೂ ಈ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ಭಾರತವನ್ನ ಕೋವಿಡ್ ಮುಕ್ತ ರಾಷ್ಟ್ರವನ್ನಾಗಿ ಮಾಡೋಣ” ಎಂದಿದ್ದಾರೆ.
ಅಂದ್ಹಾಗೆ, ಪ್ರಧಾನಿ ಮೋದಿಯವ್ರಿಗೆ ಮುಖ್ಯ ನರ್ಸ್ ಪಿ. ನಿವೇದಾ ಲಸಿಕೆ ನೀಡಿದ್ದು, ಲಸಿಕೆ ತೆಗೆದುಕೊಂಡ ನಂತ್ರ ಪ್ರಧಾನಿ ಮೋದಿ ಒಂದು ಮಾತು ಹೇಳಿದ್ರಂತೆ. ಅದೇನೆಂದ್ರೆ, “ಲಗಾ ಭಿ ದಿಯಾ ಔರ್ ಪತಾ ಭಿ ನಹಿ ಚಲಾ” ಅಂದ್ರೆ, “ನೀವು ಲಸಿಕೆ ಚುಚ್ಚಿಬಿಟ್ರಾ..? ನನಗೆ ಗೊತ್ತೇ ಆಗಿಲ್ಲ” ಎಂದು ಹೇಳಿದ್ದಾರಂತೆ.
ಕಳೆದ ಮೂರು ವರ್ಷಗಳಿಂದ ಪಿ. ನಿವೇದಾ ಏಮ್ಸ್ನಲ್ಲಿ ಸೇವೆ ಸಲ್ಲಿಸ್ತಿದ್ದು, ಪ್ರಧಾನಿ ಮೋದಿ ಲಸಿಕೆ ಸ್ವೀಕರಿಸಲು ಬರ್ತಿದ್ದಾರೆ ಅನ್ನೋ ವಿಚಾರ ಇಂದು ಬೆಳಗ್ಗೆಯಷ್ಟೇ ತಿಳಿಯಿತು. “ನನ್ನನ್ನ ಲಸಿಕೆ ಕೇಂದ್ರಕ್ಕೆ ಡ್ಯೂಟಿಗೆ ಹಾಕಿದ್ದರು. ಇಂದು ಬೆಳಗ್ಗೆ ನನ್ನನ್ನ ಕರೆದು ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ಹೇಳಿದ್ರು. ನನಗೆ ಪ್ರಧಾನಿ ಮೋದಿಯನ್ನ ಭೇಟಿಯಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ” ಎಂದರು.
ಸ್ಪೆಷಲ್ ಡೆಸ್ಕ್ : ಶರೀರ ಆರೋಗ್ಯಕರವಾಗಿರಲು ಹೃದಯದ ಆರೋಗ್ಯವು ತುಂಬಾನೆ ಮುಖ್ಯವಾಗಿದೆ. ಆದರೆ ಇಂದಿನ ದಿನಗಳಲ್ಲಿ ಅನಿಯಮಿತವಾದ ಆಹಾರ ಸೇವನೆ ಮತ್ತು ಅನಾರೋಗ್ಯಕರ ಲೈಫ್ಸ್ಟೈಲ್ನಿಂದಾಗಿ ಹೆಚ್ಚು ರಕ್ತದ ಒತ್ತಡ ಮತ್ತು ಕಡಿಮೆ ರಕ್ತದ ಒತ್ತಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಯಾರದೆ ಶರೀರದಲ್ಲಿ ರಕ್ತ ಪ್ರವಾಹ ಸಾಮಾನ್ಯಕ್ಕಿಂತ ಕಡಿಮೆ ಇದ್ದರೆ ಅದನ್ನು ಲೋ ಬ್ಲಡ್ ಪ್ರೆಶರ್ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಬ್ಲಡ್ ಪ್ರೆಶರ್ 120/80 ಇರುತ್ತದೆ. ಒಂದು ವೇಳೆ ಬ್ಲಡ್ ಪ್ರೆಶರ್ 90 ಕ್ಕಿಂತ ಕಡಿಮೆ ಆದರೆ ಅದನ್ನು ಲೋ ಬ್ಲಡ್ ಪ್ರೆಶರ್ ಎನ್ನಲಾಗುತ್ತದೆ. ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಇದರ ಪರಿಣಾಮ ಶರೀರದ ಇತರ ಅಂಗಗಳ ಮೇಲೆ ಉಂಟಾಗುತ್ತದೆ. ಆದುದರಿಂದ ಲೋ ಬ್ಲಡ್ ಪ್ರೆಶರ್ ಸಮಸ್ಯೆ ಉಂಟದಾರೆ ತಕ್ಷಣವೇ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ….
ಉಪ್ಪು ನೀರು : ಉಪ್ಪು ನೀರು ಲೋ ಬ್ಲಡ್ ಪ್ರೆಶರ್ ಸಂದರ್ಭದಲ್ಲಿ ತುಂಬಾ ಉಪಯೋಗಕಾರಿಯಾಗಿದೆ. ಇದರಿಂದ ಬ್ಲಡ್ ಪ್ರೆಶರ್ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಉಪ್ಪಿನಲ್ಲಿ ಸೋಡಿಯಂ ಅಂಶ ಇರುತ್ತದೆ. ಇದರಿಂದ ಬ್ಲಡ್ ಪ್ರೆಶರ್ ಹೆಚ್ಚುತ್ತದೆ. ಆದರೆ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುವಷ್ಟು ಹೆಚ್ಚು ಉಪ್ಪಿನ ಅಂಶ ನೀಡಬೇಡಿ. ಬದಲಾಗಿ ಒಂದು ಗ್ಲಾಸ್ ನೀರಿನಲ್ಲಿ ಅರ್ಧ ಚಮಚ ಉಪ್ಪು ಬೆರೆಸಿ ನೀಡಿ.
ಕೆಫೆನ್ ಸೇವನೆ ಮಾಡಿ : ಕಾಫಿ ಕೂಡ ಬ್ಲಡ್ ಪ್ರೆಶರ್ಗೆ ಉತ್ತಮ. ಬ್ಲಡ್ ಪ್ರೆಶರ್ ಕಡಿಮೆಯಾದ ತಕ್ಷಣ ಸ್ಟ್ರಾಂಗ್ ಕಾಫಿ. ಹಾಟ್ ಚಾಕಲೆಟ್, ಕೋಲಾ ಅಥವಾ ಕೆಫೆನ್ಯುಕ್ತ ಖಾದ್ಯ ಪದಾರ್ಥಗಳನ್ನು ನೀಡಿ. ಇದರಿಂದ ರಕ್ತಸಂಚಾರ ಸಾಮಾನ್ಯ ಸ್ಥಿತಿಗೆ ಬರುತ್ತದೆ. ನಿಮಗೆ ಪ್ರತಿದಿನ ಕಡಿಮೆ ರಕ್ತದೊತ್ತಡ ಸಮಸ್ಯೆ ಇರುತ್ತದೆ ಎಂದಾದರೆ ಪ್ರತಿದಿನ ಮುಂಜಾನೆ ಒಂದು ಗ್ಲಾಸ್ ಕಾಫಿ ಸೇವಿಸಿ. ಇದರ ಜೊತೆ ಏನಾದರು ತಿನ್ನಲು ಮರೆಯಬೇಡಿ.
ಒಣದ್ರಾಕ್ಷಿ ಕೂಡ ಉತ್ತಮ : ಇದನ್ನು ಪಾರಂಪರಿಕ ಆಯುರ್ವೇದ ಆಹಾರ ಎಂದು ಹೇಳಲಾಗುತ್ತದೆ. ಬಿಪಿ ಕಡಿಮೆಯಾದರೆ ಇದನ್ನು ಸೇವಿಸಿದರೆ ಉತ್ತಮ. ರಾತ್ರಿ 30 -40 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿ. ಒಣದ್ರಾಕ್ಷಿಯನ್ನು ಹಾಕಿಟ್ಟ ನೀರನ್ನು ಸಹ ಸೇವಿಸಿ. ತಿಂಗಳಲ್ಲಿ ಒಂದು ಬಾರಿ ಇದನ್ನು ಮಾಡಿ. ಇದಲ್ಲದೆ ಒಂದು ಗ್ಲಾಸ್ ಹಾಲಿನಲ್ಲಿ 4-5 ಬಾದಾಮ್, 15- 25 ಶೇಂಗಾ ಮತ್ತು 10 -15 ಒಣದ್ರಾಕ್ಷಿಸಿ ಮಿಕ್ಸ್ ಮಾಡಿ ಸೇವಿಸಿ.
ತುಳಸಿ : ಕಡಿಮೆಯಾದ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲು ತುಳಸಿ ಸಹಾಯ ಮಾಡುತ್ತದೆ. ಇದರಲ್ಲಿ ವಿಟಾಮಿನ್ ಸಿ, ಪೊಟ್ಯಾಶಿಯಂ, ಮೆಗ್ನೇಶಿಯಂ ಮೊದಲಾದ ತತ್ವಗಳಿವೆ. ಇವು ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆಯಾಸವನ್ನು ದೂರ ಮಾಡುತ್ತದೆ. ಯಾವುದೆ ಜ್ಯೂಸ್ನಲ್ಲಿ 10 -15 ತುಳಸಿ ಎಲೆಹಾಕಿ, ಇದರ ಜೊತೆ ಒಂದು ಚಮಚ ಜೇನು ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿದರೆ ಉತ್ತಮ ಪರಿಹಾರ ದೊರೆಯುತ್ತದೆ.
ನಿಂಬೆ ಜ್ಯೂಸ್ ಸೇವಿಸಿ : ನಿಂಬೆ ಜ್ಯೂಸ್ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಜೊತೆಗೆ ಕಡಿಮೆ ರಕ್ತದೊತ್ತಡ ಸಮಸ್ಯೆಗೂ ಇದು ಉತ್ತಮ. ಡೀಹೈಡ್ರೇಶನ್ ಸಮಸ್ಯೆ ಕಂಡು ಬಂದಾಗ ಇದನ್ನು ಸೇವಿಸಿ. ಬಿಪಿ ಸಮಸ್ಯೆ ಕಂಡು ಬಂದರೆ ನಿಂಬೆ ಜ್ಯೂಸ್ನಲ್ಲಿ ಸ್ವಲ್ಪ ಉಪ್ಪು ಮತ್ತು ಸಕ್ಕರೆ ಬೆರೆಸಿ ಸೇವಿಸಿ.
ನವದೆಹಲಿ : 60 ವರ್ಷ ಮೇಲ್ಪಟ್ಟ ವರಿಗೆ ಮತ್ತು 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡೀತರಿಗೆ ಮಾರ್ಚ್ 1ರಿಂದ ಲಸಿಕೆ ಹಾಕಲು ಭಾರತ ಸಿದ್ಧತೆ ನಡೆಸುತ್ತಿರುವುದರಿಂದ, ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಯೂ ಕೊರೊನಾವೈರಸ್ ಲಸಿಕೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಗಳ ವೆಚ್ಚವನ್ನು 250 ರೂ.ಗೆ ಭರಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕರೋನವೈರಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ, ಆದರೆ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಬೇಕಾಗುತ್ತದೆ.
ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಸರಿ ಪಕ್ಷ ಅಧಿಕಾರಕ್ಕೆ ಬಂದರೆ ಕರೋನವೈರಸ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿತ್ತು.
ಎಲ್ಲರಿಗೂ ಉಚಿತ ಲಸಿಕೆ ನೀಡುವ ಭರವಸೆಯನ್ನು ಸ್ವೀಕರಿಸಿದ ಸಚಿವ ಸಂಪುಟ ಸಭೆಯಲ್ಲಿ ಉಚಿತ ಲಸಿಕೆ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಭಾನುವಾರ ಸಿಎಂ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಜನರಿಗೆ ಉಚಿತವಾಗಿ ಲಸಿಕೆಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳಲಿದ್ದಾರೆ, 60 ವರ್ಷ ಮೇಲ್ಪಟ್ಟಮತ್ತು 45 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆ ಹಾಕುವ ಅಭಿಯಾನವು ಪ್ರಾರಂಭವಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಐಜಿಐಎಂಎಸ್ ಆಸ್ಪತ್ರೆಯಲ್ಲಿ ಕರೋನವೈರಸ್ ಲಸಿಕೆಯ ಡೋಸ್ ಅನ್ನು ನಿತೀಶ್ ಕುಮಾರ್ ಅವರಿಗೆ ನೀಡಲಾಗುವುದು.
ಬೆಂಗಳೂರು: ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೋವಿಡ್ ಲಸಿಕೆ ದರ ನಿಗದಿ ಮಾಡಿದ್ದು, ಇದೀಗ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಿಗದಿ ಮಾಡಿರುವ ದರ ಕಡಿಮೆಯಾಗಿದ್ದು, ನಮಗೆ ಇದೀಗ ಮೋಸ ಹೋದ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಲಸಿಕೆಗೆ 250ರೂ ದರ ಮಿತಿ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ವಿರೋಧಿಸಿದ್ದು, ‘ಲಸಿಕೆಗೆ ನಿಗದಿ ಮಾಡಿರುವ ಬೆಲೆಯು ತೀರಾ ಕಡಿಮೆ. ಲಸಿಕೆ ಕಂಪನಿಗಳಿಗೆ ಮೋಸ ಹೋದಂತಹ ಅನುಭವ ಆಗುತ್ತಿದೆ. ಇಂತಹ ನಡೆಗಳು ಉದ್ಯಮಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.
ಈಗಾಗಲೇ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರತೀ ಡೋಸ್ ಗೆ 3 ಅಮೆರಿಕನ್ ಡಾಲರ್ ದರ ನಿಗದಿಗೆ ಅನುಮತಿ ನೀಡಿದೆ. ಆದರೆ ಸರ್ಕಾರ ಅದನ್ನು ಏಕೆ 2 ಡಾಲರ್ ಗೆ ಇಳಿಸಬೇಕಿತ್ತು ಪ್ರಶ್ನಿಸಿದ್ದಾರೆ.
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,510 ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಒಂದೇ ದಿನ ಮಹಾಮಾರಿ ವೈರಸ್ 106 ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾವಿನ ಸಂಖ್ಯೆ 1,57,157ಕ್ಕೆ ಏರಿಕೆಯಾಗಿದೆ.
ಈ ನಡುವೆ ಒಟ್ಟಾರೆ 1,10,96,731 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 11,288 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,07,86,457ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 1,68,627 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ದೇಶದ್ಲಲಿ ಮೊದಲನೇ ಹಂತದ ಕೊರೋನಾ ಲಸಿಕೆ ಅಭಿಯಾನ ಯಶಸ್ವಿಯಾಗಿದ್ದು, ಇದೀಗ ಎರಡನೇ ಹಂತದ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಲಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿಯವರು ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ.
ನವದೆಹಲಿ: 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಇತರೆ ಆನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದಕ್ಕಾಗಿ ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯವನ್ನು ಇಂದಿನಿಂದ ಆರಂಭಿಸಲಿದೆ.
ಮೂಲಗಳ ಪ್ರಕಾರ ಕೋ-ವಿನ್2.0 ಆನ್ ಲೈನ್ ಪೋರ್ಟಲ್ ನಲ್ಲಿ ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವ ಮೂಲಕ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಲಸಿಕೆ ನೋಂದಣಿಯ ಕೋ–ವಿನ್ 2.0 ಆ್ಯಪ್ ಅಥವಾ ಪೋರ್ಟಲ್ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಕ್ರಿಯವಾಗಲಿದೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ–ವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಸಮಯ ಕಾಯ್ದಿರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.
ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಗೊತ್ತುಪಡಿಸಿದ 10,000 ಆಸ್ಪತ್ರೆಗಳಿವೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಸುಮಾರು 600 ಆಸ್ಪತ್ರೆಗಳನ್ನು ಗೊತ್ತು ಮಾಡಲಾಗಿದೆ.
ಇನ್ನು ಒಂದು ಮೊಬೈಲ್ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್ಪಿಆರ್ ಸ್ಮಾರ್ಟ್ ಕಾರ್ಡ್, ಭಾವಚಿತ್ರ ಇರುವ ಪೆನ್ಶನ್ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು.
ದೇಶದಲ್ಲಿ ಈಗ ಎರಡು ಲಸಿಕೆಗಳು ಲಭ್ಯ ಇವೆ. ಪುಣೆಯ ಸೀರಂ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್ ಮತ್ತು ಭಾರತ್ ಬಯೊಟೆಕ್ ನ ಕೋವ್ಯಾಕ್ಸಿನ್ಗಳನ್ನು ಜನರು ಪಡೆದುಕೊಳ್ಳಬಹುದು. ಆದರೆ, ಇದರಲ್ಲಿ ಯಾವುದನ್ನು ಪಡೆದುಕೊಳ್ಳಬೇಕು ಎಂಬ ಆಯ್ಕೆಯು ಜನರಿಗೆ ಇಲ್ಲ. ಆಸ್ಪತ್ರೆಯವರು ಯಾವ ಲಸಿಕೆ ನೀಡುತ್ತಾರೆಯೋ ಅದನ್ನೇ ಪಡೆದುಕೊಳ್ಳಬೇಕು.
ಶಾಮ್ಲಿ : ಮತ್ತೆ ಟ್ರ್ಯಾಕ್ಟರ್ಗಳನ್ನು ಸಿದ್ಧವಾಗಿರಿಸಿ, ನಾವು ಯಾವಾಗ ಬೇಕಾದರೂ ರಾಷ್ಟ್ರ ರಾಜಧಾನಿಗೆ ಹೋಗಬಹುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದ್ದಾರೆ.
“ರೈತರು ತಮ್ಮ ಹೊಲಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಬೇಕು, ಜೊತೆಗೆ ತಮ್ಮ ಟ್ರ್ಯಾಕ್ಟರ್ಗಳಿಗೆ ಡೀಸೆಲ್ ತುಂಬಿಸಿಕೊಂಡು ಸಿದ್ಧವಿರಬೇಕು. ಏಕೆಂದರೆ ಯಾವಾಗ ಬೇಕಾದರೂ ದೆಹಲಿಗೆ ಬರಬೇಕಾಗಬಹುದು” ಎಂದು ಟಿಕಾಯತ್ ಹೇಳಿದ್ದಾರೆ.
ಕೇಂದ್ರವು ರೈತರ ಒಪ್ಪಿಗೆಯಿಲ್ಲದೆ ಹೊಸ ಕೃಷಿ ಕಾನೂನುಗಳನ್ನು ರೂಪಿಸಿದೆ. ಹಾಗಾಗಿ ಈ ಕಾನೂನುಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ದೇಶಾದ್ಯಂತ ಮಹಾಪಂಚಾಯತ್ಗಳನ್ನು ನಡೆಸುವುದು ಅವಶ್ಯಕವಾಗಿದೆ. ಏಕೆಂದರೆ ಇದು ಇಡೀ ರಾಷ್ಟ್ರದ ಸಮಸ್ಯೆಯಾಗಿದೆ. ಮಾರ್ಚ್ 24 ರವರೆಗೆ ಕಾರ್ಯಕ್ರಮಗಳನ್ನು ಯೋಜಿಸಿದ್ದೇವೆ. ದೇಶಾದ್ಯಂತ ಪ್ರಯಾಣಿಸುತ್ತೇವೆ ಎಂದು ಟಿಕಾಯತ್ ಹೇಳಿದರು.
ಶ್ರೀಹರಿಕೋಟ : ಮೊದಲ ಮಾನವರಹಿತ ಮಿಷನ್ ಸೇರಿದಂತೆ 2021ರ ಅಂತ್ಯದೊಳಗೆ ಇಸ್ರೋ 14 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾನುವಾರ ಹೇಳಿದ್ದಾರೆ.
ಬ್ರೆಜಿಲ್ನ ಅಮೆಜೋನಾ-1 ಮತ್ತು ಇತರ 18 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ ನಂತರ ಮಾತನಾಡಿದ ಅವರು ನಾವು ಈ ವರ್ಷ 14 ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆ ಹೊಂದಿದ್ದೇವೆ ಎಂದಿದ್ದಾರೆ.
ಏಳು ಉಪಗ್ರಹ ಉಡಾವಣಾ ವಾಹನ ಮತ್ತು ಆರು ಉಪಗ್ರಹ ಜೊತೆಗೆ ವರ್ಷದ ಅಂತ್ಯದ ವೇಳೆಗೆ ಮೊದಲ ಮಾನವರಹಿತ ಮಿಷನ್ ಉಡಾವಣೆಗೊಳಿಸುವುದು ನಮ್ಮ ಗುರಿ ಮತ್ತು ವಿಜ್ಞಾನಿಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಗಗನ್ಯಾನ್ ಮಿಷನ್ ಯೋಜನೆಯಂತೆ 2022ರ ವೇಳೆಗೆ ಮೂವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದೆ. ಈ ಕಾರ್ಯಾಚರಣೆಗೆ ಆಯ್ಕೆಯಾದ ನಾಲ್ಕು ಪರೀಕ್ಷಾ ಪೈಲಟ್ಗಳು ಪ್ರಸ್ತುತ ರಷ್ಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನವದೆಹಲಿ : ಸಾಮಾಜಿಕ ಮಾಧ್ಯಮ, ಆನ್ ಲೈನ್ ಸ್ಟ್ರೀಮಿಂಗ್ ಮತ್ತು ಡಿಜಿಟಲ್ ಕಂಟೆಂಟ್ ಪ್ಲಾಟ್ ಫಾರ್ಮ್ ಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಫೆಬ್ರವರಿ 25ರಂದು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ ವೊಂದು, ಹೊಸ ಮಾರ್ಗಸೂಚಿಯ ಪ್ರಕಾರ, ಮೂರು ತಿಂಗಳ ಒಳಗೆ ಎಲ್ಲಾ ಸಾಮಾಜಿಕ ಜಾಲತಾಣಖಾತೆಗಳನ್ನು ಸರ್ಕಾರಿ ಐಡಿಯೊಂದಿಗೆ ತಪಾಸಣೆ ಮಾಡಬೇಕು ಎಂದು ಹೇಳಿದೆ.
ದೆಹಲಿ ಹೈಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಉಮ್ರಾವ್ ಕೂಡ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಫೆಬ್ರವರಿ 25ರಂದು, ತಮ್ಮ ವೆರಿಫೈಡ್ ಟ್ವಿಟರ್ ಹ್ಯಾಂಡಲ್ ಮೂಲಕ ಉಮ್ರಾವ್ ಹೀಗೆ ಬರೆದಿದ್ದಾರೆ, “ಎಲ್ಲಾ ಸೋಷಿಯಲ್ ಮೀಡಿಯಾ ಖಾತೆಗಳನ್ನು ಮೂರು ತಿಂಗಳಒಳಗೆ ಮೊಬೈಲ್ ಫೋನ್ ಮೂಲಕ ಸರ್ಕಾರಿ ಐಡಿಯೊಂದಿಗೆ ತಪಾಸಣೆ ಮಾಡಬೇಕಾಗುತ್ತದೆ. ಸ್ವಾಗತಾರ್ಹ ಹೆಜ್ಜೆ . ಇಂಟರ್ನೆಟ್ ಈಗ ಸುರಕ್ಷಿತ ಮತ್ತು ಹೆಚ್ಚು ಜವಾಬ್ದಾರಿಯುತವಾಗಿದೆ. ಬಳಕೆದಾರರ ಹಕ್ಕುಗಳನ್ನು ರಕ್ಷಿಸಲು ಸರ್ಕಾರವು ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ ನಿಯಮಗಳು, 2021 ಅನ್ನು ಪ್ರಕಟಿಸುತ್ತದೆ. #ottguidelines” ಎಂದು ಬರೆದುಕೊಂಡಿದ್ದರು.
ಇದೀಗ ಈ ಸುದ್ದಿಯ ಅಸಲಿಯತ್ತು ತಿಳಿದು ಬಂದಿದೆ. ಈ ಹೇಳಿಕೆಯು ದಾರಿ ತಪ್ಪಿಸುವಂತೆ ಕಂಡುಬಂದಿದೆ. ನಾಗರಿಕರು ತಮ್ಮ ಸಾಮಾಜಿಕ ಜಾಲತಾಣಖಾತೆಗಳನ್ನು ಪರಿಶೀಲಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸ್ವಯಂ ಪ್ರೇರಿತವಾಗಿ ತಮ್ಮ ಖಾತೆಗಳನ್ನು ಪರಿಶೀಲಿಸಲು ಬಯಸುವ ಬಳಕೆದಾರರಿಗೆ ಸೂಕ್ತ ವ್ಯವಸ್ಥೆ ಒದಗಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸರ್ಕಾರ ಸೂಚಿಸಿದೆ.
ಭಾರತದಲ್ಲಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳನ್ನು ಕಡ್ಡಾಯವಾಗಿ ಪರಿಶೀಲಿಸುವ ಬಗ್ಗೆ ಯಾವುದೇ ನಂಬಲರ್ಹ ಸುದ್ದಿ ವರದಿ ಅಥವಾ ಸರ್ಕಾರದ ಆದೇಶ ನಮಗೆ ಸಿಗಲಿಲ್ಲ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೂತನ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ಯನ್ನು ಪ್ರಕಟಿಸಲಾಗಿದೆ.
ಭಾರತದ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (PIB) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ರವಿಶಂಕರ್ ಪ್ರಸಾದ್ ಅವರು ಸಾಮಾಜಿಕ ಜಾಲತಾಣದ ಖಾತೆಗಳ ಪರಿಶೀಲನೆ ಯ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೊದ ಶೀರ್ಷಿಕೆಯಲ್ಲಿ, “ತಮ್ಮ ಖಾತೆಗಳನ್ನು ಸ್ವಯಂಪ್ರೇರಿತವಾಗಿ ಪರಿಶೀಲಿಸಲು ಬಯಸುವ ಬಳಕೆದಾರರಿಗೆ ತಮ್ಮ ಖಾತೆಗಳನ್ನು ಪರಿಶೀಲಿಸಲು ಸೂಕ್ತ ವಾದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ ಮತ್ತು ಪರಿಶೀಲನೆಯ ಸ್ಪಷ್ಟ ಮತ್ತು ಗೋಚರ ಚಿಹ್ನೆಯನ್ನು ಒದಗಿಸಲಾಗುತ್ತದೆ: ಕೇಂದ್ರ ಸಚಿವ ಹೇಳಿರುವುದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳು ಸ್ವಯಂಪ್ರೇರಿತವಾಗಿ ಪರಿಶೀಲನೆ ಮಾಡುವ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಪ್ರಸಾದ್ ಅವರು ಹೇಳಿದ್ದಾರೆ.
ಡಿಜಿಟಲ್ ಮೀಡಿಯಾ ನೀತಿ ಸಂಹಿತೆಯ ಬಗ್ಗೆ ನಾವು ಪತ್ರಿಕಾ ಪ್ರಕಟಣೆಯನ್ನು ಸಹ ಪರಿಶೀಲಿಸಿದ್ದೇವೆ, ಇದು “ಸ್ವಯಂಪ್ರೇರಿತ ಬಳಕೆದಾರ ಪರಿಶೀಲನಾ ವ್ಯವಸ್ಥೆ”ಯನ್ನು ಉಲ್ಲೇಖಿಸುತ್ತದೆ. ಇದು ಕೇವಲ ಸ್ವಯಂಪ್ರೇರಿತ ಕ್ರಮವೇ ಹೊರತು ಕಡ್ಡಾಯವಲ್ಲ ಎಂದು ಸರ್ಕಾರ ಹೇಳಿದೆ.
ನವದೆಹಲಿ: ಕೇಂದ್ರ ಪ್ರೌಢ ಪರೀಕ್ಷಾ ಮಂಡಳಿ (ಸಿಬಿಎಸ್ ಇ) 10 ನೇ ತರಗತಿ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ (ಮಾರ್ಚ್ 1) ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ. ಪ್ರಾಜೆಕ್ಟ್ ಗಳು ಮತ್ತು ಆಂತರಿಕ ಮೌಲ್ಯಮಾಪನವನ್ನು ಒಳಗೊಂಡ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್ ಇ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆಯಾ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಮೌಲ್ಯಮಾಪನ ಮುಗಿದ ತಕ್ಷಣ ಅಂಕಗಳನ್ನು ಅಧಿಕಾರಿಗಳು ಅಪ್ ಲೋಡ್ ಮಾಡಬೇಕು ಎಂದು ತಿಳಿಸಿದೆ.
ಪರೀಕ್ಷಾ ಸಮಯದಲ್ಲಿ ಆಂತರಿಕ ಮತ್ತು ಬಾಹ್ಯ ಪರೀಕ್ಷಕರು ಹಾಜರಿರಲಿದ್ದಾರೆ ಎಂದು ಪ್ರಾಂಶುಪಾಲರು ಮತ್ತು ಮುಖ್ಯಶಿಕ್ಷಕರುಗಳಿಗೆ ಬರೆದ ಪತ್ರದಲ್ಲಿ ಮಂಡಳಿ ತಿಳಿಸಿದೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ವಿವರವಾದ ಅಂಕಗಳನ್ನು ಸಹ ಮಂಡಳಿ ನೀಡಿದೆ.
ಪ್ರಸಕ್ತ ನಡೆಯುತ್ತಿರುವ COVID-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಸ್ಥಳೀಯ ಸರ್ಕಾರದ ಎಲ್ಲಾ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಶಾಲೆಗಳು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತವೆ.
ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ, ಪರೀಕ್ಷೆಗಳನ್ನು ರದ್ದುಮಾಡಲಾಗುತ್ತದೆ ಮತ್ತು ಆಯಾ ವಿಷಯದ ಪರೀಕ್ಷೆಯಲ್ಲಿ ಅವರ ಸ್ಕೋರ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತದೆ. ಪರೀಕ್ಷಾ ಮೇಲ್ವಿಚಾರಣೆಗೆ ಒಬ್ಬ ವೀಕ್ಷಕನನ್ನು ಸಹ ಮಂಡಳಿ ನೇಮಿಸಲಿದೆ.
ತಲಾ 25 ವಿದ್ಯಾರ್ಥಿಗಳನ್ನು ಹೊಂದಿರುವ ಎರಡು ಉಪಗುಂಪುಗಳಾಗಿ ವಿದ್ಯಾರ್ಥಿಗಳನ್ನು ವಿಂಗಡಿಸಲಾಗುವುದು. ಪರೀಕ್ಷೆ ನಡೆಸುವ ಲ್ಯಾಬ್ ಗಳು ಪರೀಕ್ಷೆ ನಡೆಸುವ ಮುನ್ನ ನೈರ್ಮಲ್ಯ ಗೊಳಿಸಬೇಕಾಗುತ್ತದೆ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಾಸ್ಕ್ ಗಳನ್ನು ಧರಿಸಬೇಕು, ಇಡೀ ಅಭ್ಯಾಸದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನವನ್ನು ಸಿದ್ಧಪಡಿಸಬೇಕು ಮತ್ತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಮಂಡಳಿಯು ಶಾಲೆಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಜೂನ್ 11ರೊಳಗೆ ಪೂರ್ಣಗೊಳಿಸಲು ಅನುಮತಿ ನೀಡಿದೆ, ಇದು ಥಿಯರಿ ಪರೀಕ್ಷೆಗಳ ಕೊನೆಯ ದಿನಾಂಕವಾಗಿದೆ.
ಮುಂಬೈ : ಮುಂಬೈ ಪೊಲೀಸರು, ‘ಜೈಷೆ ಉಲ್ ಹಿಂದ್’ ಎಂಬ ಭಯೋತ್ಪಾದಕ ಸಂಘಟನೆ ಬಿಡುಗಡೆ ಮಾಡಿರುವ ಸಂದೇಶದಲ್ಲಿ ಮುಕೇಶ್ ಅಂಬಾನಿಗೆ ಬೆದರಿಕೆ ಪತ್ರ ನೀಡಿಲ್ಲ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಹೇಳಿಕೊಂಡಿದೆ.
ಭಾನುವಾರ, ಭಯೋತ್ಪಾದಕ ಸಂಘಟನೆ ಬರೆದಿರುವ ಪತ್ರದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ ನೀಡಿರುವ ಬೆದರಿಕೆಯ ಹೊಣೆಯನ್ನು ಜೈಶ್ ಉಲ್ ಹಿಂದ್ ಹೊತ್ತುಕೊಂಡಿತ್ತು.
ಜಿಲೆಟಿನ್ ಕಡ್ಡಿಗಳು, ಮುಂಬೈ ಇಂಡಿಯನ್ಸ್ ಲಾಂಛನದ ಬ್ಯಾಗ್ ಹಾಗೂ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಅವರಿಗೆ ಬರೆದಿರುವ ಬೆದರಿಕೆ ಪತ್ರವನ್ನು ಗುರುವಾರ ಮುಂಬೈನ ‘ಅಂಟಿಲಿಯಾ’ದಲ್ಲಿರುವ ಉದ್ಯಮಿಯ ನಿವಾಸದ ಹೊರಭಾಗದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಭಯೋತ್ಪಾದಕ ಸಂಘಟನೆ ಬಿಡುಗಡೆ ಮಾಡಿರುವ ಇತ್ತೀಚಿನ ಬ್ಯಾನರ್ ನಲ್ಲಿ, ‘ಮೋಸಗಾರರಿಂದ ಎಂದಿಗೂ ಹಣ ತೆಗೆದುಕೊಳ್ಳುವುದಿಲ್ಲ ಮತ್ತು ಮುಕೇಶ್ ಅಂಬಾನಿಯೊಂದಿಗೆ ಯಾವುದೇ ಹೋರಾಟವಿಲ್ಲ’ ಎಂದು ಜೈಷೆ ಉಲ್ ಹಿಂದ್ ಹೇಳಿದೆ. ‘ಜೈಷ್ ಉಲ್ ಹಿಂದ್ ನಿಂದ ಅಂಬಾನಿಗೆ ನೋ ಬೆದರಿಕೆ’ ಎಂದು ಬ್ಯಾನರ್ ಇದೆ.
ಜೈಷ್ ಉಲ್ ಹಿಂದ್ ಬ್ಯಾನರ್ ನಲ್ಲಿ “ಇಂದು ಬೆಳಗ್ಗೆ ನಾವು ಭಾರತದ ಖ್ಯಾತ ಮುಕೇಶ್ ಅಂಬಾನಿ ನಿವಾಸದ ಹೊರಗೆ ಸ್ಪೋಟಕ ಪತ್ತೆಯಾಗಿರುವುದನ್ನು ಜೈಷ್ ಉಲ್ ಹಿಂದ್ ಇಟ್ಟಿರುವುದಾಗಿ ಮಾಹಿತಿ ಪ್ರಸಾರವಾಗಿದ್ದನ್ನು ನೋಡಿದ್ದೆವು. ಈ ಬೆದರಿಕೆಯ ಹೊಣೆ ಹೊತ್ತುಕೊಂಡಿರುವ ಟೆಲಿಗ್ರಾಂ ಖಾತೆ ಜೈಷ್ ಉಲ್ ಹಿಂದ್ ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಉಗ್ರ ಸಂಘಟನೆ ತನ್ನ ಬ್ಯಾನರ್ ನಲ್ಲಿ ಹೇಳಿದೆ.
‘ಜೈಷ್ ಉಲ್ ಹಿಂದ್ ಸಂಘಟನೆಯ ನಕಲಿ ಪೋಸ್ಟರ್ ಗಳನ್ನು ಮಾರ್ಫಿಂಗ್ ಮಾಡಿ, ನಕಲಿ ಪೋಸ್ಟರ್ ಗಳನ್ನು ತಯಾರಿಸಿರುವ ಭಾರತೀಯ ಗುಪ್ತಚರ ಇಲಾಖೆಯನ್ನು ನಾವು ಖಂಡಿಸುತ್ತೇವೆ’ ಎಂದು ಬ್ಯಾನರ್ ನಲ್ಲಿ ಹೇಳಿದೆ.
ಈ ಬ್ಯಾನರ್ ನಲ್ಲಿ ಈ ರೀತಿ ಉಲ್ಲೇಖವಿದೆ: “ಜೈಶ್ ಉಲ್ ಹಿಂದ್ ಎಂದಿಗೂ ಮೋಸಗಾರರು ಮತ್ತು ಭಾರತೀಯ ವ್ಯಾಪಾರ ದಂಧೆಗಳೊಂದಿಗೆ ಇಂದಿಗೂ ಹೋರಾಡುವುದಿಲ್ಲ, ನಾವು ಬಿಜೆಪಿ ಮತ್ತು ಆರ್ ಎಸ್ ಎಸ್ ನ ಫ್ಯಾಸಿಸಂ ವಿರುದ್ಧ ಹೋರಾಡುತ್ತೇವೆ, ನಾವಿಂದು ಮುಗ್ಧ ಮುಸ್ಲಿಮರ ವಿರುದ್ಧ ಕೈಗೊಳ್ಳುವ ನರೇಂದ್ರ ಮೋದಿ ವಿರುದ್ಧ ಹೋರಾಡುತ್ತೇವೆ. ನಾವು ಹಣಕ್ಕಾಗಿ ಹೋರಾಟ ಮಾಡುತ್ತಿಲ್ಲ, ಅಂಬಾನಿ ಜಾತ್ಯತೀತ ಪ್ರಜಾಪ್ರಭುತ್ವದ ವಿರುದ್ಧ ಹೋರಾಡುತ್ತಿದ್ದೇವೆ’ ಎಂದು ಹೇಳಿದರು.
ನವದೆಹಲಿ : ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರೋನವೈರಸ್ ಲಸಿಕೆ ಡೋಸ್ ನೀಡಲಾಯಿತು.
ಕೊರೊನಾವೈರಸ್ ಲಸಿಕೆ ಯನ್ನು ತೆಗೆದುಕೊಂಡ ನಂತರ ಪಿಎಂ ನರೇಂದ್ರ ಮೋದಿ ಅವರು, ಭಾರತವನ್ನು ಕೋವಿಡ್ ಮುಕ್ತ ದೇಶವನ್ನಾಗಿ ಸಲು ಲಸಿಕೆ ಯನ್ನು ಪಡೆಯಲು ಅರ್ಹರಾದ ಎಲ್ಲರಿಗೂ ಮನವಿ ಮಾಡಿದರು.
ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, “ಏಮ್ಸ್ ನಲ್ಲಿ ನಾನು ಮೊದಲ ಬಾರಿಗೆ COVID-19 ಲಸಿಕೆಯನ್ನು ತೆಗೆದುಕೊಂಡೆ. COVID-19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಕ್ಷಿಪ್ರ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹ. ಲಸಿಕೆಯನ್ನು ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡುತ್ತಿದ್ದೇನೆ. ಒಟ್ಟಾಗಿ, ಭಾರತವನ್ನು COVID-19 ಮುಕ್ತವನ್ನಾಗಿ ಮಾಡೋಣ!” ಎಂದು ಟ್ವೀಟ್ ಮಾಡಿದ್ದಾರೆ.
Took my first dose of the COVID-19 vaccine at AIIMS.
Remarkable how our doctors and scientists have worked in quick time to strengthen the global fight against COVID-19.
I appeal to all those who are eligible to take the vaccine. Together, let us make India COVID-19 free! pic.twitter.com/5z5cvAoMrv
ಮೀರತ್: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳು ರೈತರಿಗೆ ಡೆತ್ ವಾರೆಂಟ್ ಆಗಲಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ನೂತನ ಕಾನೂನುಗಳ ವಿರುದ್ಧ ಆಮ್ ಆದ್ಮಿ ಪಕ್ಷ ಆಯೋಜಿಸಿದ್ದ ಕಿಸಾನ್ ಮಹಾ ಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, ಬಂಡವಾಳಷಾಹಿಗಳು ರೈತರ ಜಮೀನುಗಳನ್ನು ಪಡೆದು ಸಮಸ್ಯೆಯನ್ನುಂಟು ಮಾಡಲಿದ್ದಾರೆ ಎಂದರು.
ತಮ್ಮ ಜಮೀನುಗಳನ್ನು ಬಂಡವಾಳ ಷಾಹಿಗಳು ಕೈಗೆ ನೀಡಲು ಒಪ್ಪದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 25 ವರ್ಷಗಳಲ್ಲಿ ಮೂರುವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಡಿಜಿಟಲ್ ಡೆಸ್ಕ್ : ಗುತ್ತಲ ಸಮೀಪದ ಹಾವನೂರ ಗ್ರಾಮದಲ್ಲಿ ಭಾನುವಾರ ನಡೆದ ಐತಿಹಾಸಿಕ ‘ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ’ದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ’ದಲ್ಲಿ ಸವನಿಧಿ ಆಯಿತಲೇ ಪರಾಕ್ ಎಂದು ಗೊರವಯ್ಯ ಕಾರ್ಣಿಕ ನುಡಿದನು. ಸವನಿಧಿ ಆಯಿತಲೇ ಎಂಬುವುದು ಸುಖ ದುಃಖ, ಮಳೆ ಬೆಳೆ ಎಲ್ಲವೂ ಚೆನ್ನಾಗಿ ಆಗುತ್ತದೆ ಎಂಬ ಅರ್ಥ ಕಲ್ಪಿಸುತ್ತದೆ ಎನ್ನಲಾಗಿದೆ,
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಕೊರೊನಾ ಹಿನ್ನೆಲೆ ಕಾರ್ಣಿಕ ಕೇಳಲು ಅವಕಾಶ ಸಿಗದ ಹಿನ್ನೆಲೆ ಹಾವನೂರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗಿಯಾಗಿದ್ದರು.
ಶಿವಮೊಗ್ಗ : ರಾಜ್ಯದ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿರುವ ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದ್ದು, ಮುಂದಿನ ತಿಂಗಳ ಮಾರ್ಚ್ 8 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ ಈಗಾಗಲೇ ಬಜೆಟ್ ಸಂಬಂಧಿಸಿದಂತೆ ಹಲವು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಲವು ಮೂಲಗಳಿಂದ ಹಣಕಾಸಿನ ಸಂಗ್ರಹ ಮಾಡಿಕೊಂಡಿರುವೆ, ಬಜೆಟ್ ನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುತ್ತೇವೆ, ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು,
ಮುಂದುವರೆದು ಮಾತನಾಡಿದ ಅವರು ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ, ಹಣಕಾಸಿನ ಇತಿಮಿತಿಯಲ್ಲಿ ಅನುದಾನ ನೀಡಲಾಗುತ್ತದೆ. ಅಲ್ಲದೇ ಬಜೆಟ್ ಸಂಬಂಧಿಸಿದ ಎಲ್ಲಾ ಚರ್ಚೆಗಳು ಮುಗಿದಿದೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆ 234 ಕೋಟಿ ರೂ ಮೊತ್ತದ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿ ಮಾತನಾಡಿದರು.,
ಇನ್ನೂ, ಈ ವರ್ಷದ ರಾಜ್ಯ ಸರ್ಕಾರ ಬಜೆಟ್ ಮಂಡನೆ ಬಗ್ಗೆ ರಾಜ್ಯದ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು, ಈ ಬಾರಿಯ ಬಜೆಟ್ ಯಾವ ಯಾವ ಕ್ಷೇತ್ರಕ್ಕೆ ಯಾವ ರೀತಿ ಲಾಭವಾಗಲಿದೆ. ಜನಸಾಮಾನ್ಯರು, ರೈತರಿಗೆ ಬಜೆಟ್ ಮಂಡನೆ ಎಷ್ಟರಮಟ್ಟಿಗೆ ಲಾಭದಾಯಕವಾಗಲಿದೆ ಎಂಬುದನ್ನು ಕಾದು ನೋಡಬೇಕು.
ಕೊಚ್ಚಿ : ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಗೊಳಿಸಲಾಗಿದೆ.
ಮಾರ್ಚ್ 1 ರಂದು ಚೆನ್ನೈ ಮತ್ತು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಹಾಗೂ ಚೆನ್ನೈಯ ಎಂಜಿ ಆರ್ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಾಂಬ್ ಇಡಲಾಗುವುದು ಎಂದು ಬೆದರಿಕೆ ಕರೆ ಬಂದಿತ್ತು. ಆದ್ದರಿಂದ ಈ ಮೂರು ಸ್ಥಳದಲ್ಲಿ ಪೊಲೀಸ್ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹದ್ದಿನ ಕಣ್ಣುಗಾವಲಿಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಾಖಂಡ: ಉತ್ತರಾಖಂಡದಲ್ಲಿ ಮಾರ್ಚ್ 3 ಮತ್ತು 4ರಂದು ಮತ್ತೆ ಮಳೆ ಬೀಳಲಿದ್ದು, ಈ ಮಳೆ ಹಿಮಪಾತಕ್ಕೆ ಕಾರಣವಾಗ್ಬೋದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಟ್ವೀಟ್ ಮಾಡಿರುವ ಹವಾಮಾನ ಇಲಾಖೆ, “ಮಾರ್ಚ್ 3 ಮತ್ತು 4ರಂದು ಬೀಳುವ ಮಳೆ ಹಿಮಪಾತಕ್ಕೆ ಕಾರಣವಾಗ್ಬೋದು. ಚಮೋಲಿಯಲ್ಲಿ ಕೆಲವು ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆ ಇದೆ” ಎಂದಿದೆ.
ಬಯಲು ಸೀಮೆಯಲ್ಲಿ ಬಿಸಿಲಿನ ಝಳಕ್ಕೆ ತತ್ತರಿಸಿದ್ದರೂ ಗುಡ್ಡಗಾಡು ಪ್ರದೇಶ ಈಗ ಚಳಿಯಿಂದ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ಇನ್ನು ಉತ್ತರಾಖಂಡದಲ್ಲಿ ಮಳೆ ಮತ್ತು ಹಿಮಪಾತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Under the influence of Western Disturbance, isolated light rainfall/snowfall likely over Uttarakhand on today. Weather very likely to remaindry on 01st & 02nd March. Thereafter, a fresh Western Disturbance is likely to cause light rainfall/snowfall on 03rd & 04th March, 2021.
ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಜಲ ಗಡಿ ಪ್ರವೇಶಿಸಿದ ಆರೋಪದ ಮೇರೆಗೆ 17 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಭಾರತೀಯ ಮೀನುಗಾರರನ್ನು ಕರಾಚಿಯ ಮಾಲಿರ್ ಅಥವಾ ಲಾಂಧಿ ಜೈಲಿಗೆ ಕಳುಹಿಸಲಾಗುತ್ತದೆ ಮೂರು ಬೋಟ್ಗಳನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತ ಮೀನುಗಾರರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಸ್ಥಳೀಯ ಬಂದರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ,.
ಈ ಹಿಂದೆ ಜಲಗಡಿ ಉಲ್ಲಂಘಿಸಿದ ಆರೋಪದ ಮೇಲೆ ಪಾಕ್ 23 ಭಾರತೀಯರನ್ನು ಬಂಧಿಸಿ, ನಾಲ್ಕು ಬೋಟ್ಗಳನ್ನು ಪಾಕ್ ವಶಕ್ಕೆ ಪಡೆದಿತ್ತು. ಇದೀಗ 17 ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಬೆಂಗಳೂರು: ಸರ್ಕಾರ ವಿರುದ್ಧದ ಹೋರಾಟಕ್ಕೆ ಮತ್ತೆ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಮುಂದಾಗಿದ್ದು, ವಿವಿಧ ಬೇಡಿಕೆಗೆ ಆಗ್ರಹಿಸಿ ಮಾರ್ಚ್ 2ರಂದು ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ
ಧರಣಿಯ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದು, “ಈ ಹಿಂದೆ ನಡೆಸಿದ ಧರಣಿ ವೇಳೆ ಸರ್ಕಾರ ಕೊಟ್ಟ ಭರವಸೆ ವಿಳಂಬವಾದ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗ ಸೇರಿ 9 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುವುದು” ಎಂದು ತಿಳಿಸಿದ್ದಾರೆ.
ನವದೆಹಲಿ: ಮಾರ್ಚ್ ಅಥ್ವಾ ಏಪ್ರಿಲ್ ವೇಳೆಗೆ ದೇಶಾದ್ಯಂತ ಪೆಟ್ರೋಲ್, ಡಿಸೇಲ್ ಸೇರಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ತೈಲ ಉತ್ಪಾದಿಸುವ ರಾಷ್ಟ್ರಗಳಾದ ರಷ್ಯಾ, ಕತಾರ್ ಮತ್ತು ಕುವೈತ್ ಮೇಲೆ ಭಾರತ ಒತ್ತಡ ಹೇರುತ್ತಿದ್ದು, ಪ್ರತಿ ಬ್ಯಾರೆಲ್ ಇಂಧನ ಬೆಲೆಯೂ ಕಡಿಮೆಯಾಗುವುದರಿಂದ ತೈಲ ಬೆಲೆಯೂ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ತೈಲ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳ ಜತೆ ಸಂಪರ್ಕ ಹೊಂದಿರುವುದಾಗಿ ಹೇಳಿದ ಸಚಿವರು, ಈ ದೇಶಗಳಿಂದ ಇಂಧನ ಖರೀದಿಸುವ ಭಾರತದಲ್ಲಿ ತೈಲ ಬೆಲೆ ಇಳಿಕೆಯಾಗುವ ನಿಟ್ಟಿನಲ್ಲಿ ಇಂಧನ ಉತ್ಪಾದನೆಯನ್ನ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಯಾವಾಗ ಇಳಿಯುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದಿದ್ದ ಸಚಿವರು, ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಅಡುಗೆ ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಇಳಿಕೆಯಾಗಬಹುದು’ ಎಂದು ಹೇಳಿದರು.
ಇಂಧನ ಬೆಲೆ ಗಗನಕ್ಕೇರಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿವಾಸದ ಎದುರು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆಯನ್ನ ಖಂಡಿಸಿ ನಡೆಸಿದ್ರು. ಸರಕಾರ ಕೂಡಲೇ ದರ ಏರಿಕೆಯನ್ನ ವಾಪಸ್ ಮಾಡಬೇಕು ಎಂದು ಆಗ್ರಹಿಸಿದರು.
ನವದೆಹಲಿ: ವಾಯುವ್ಯ ದೆಹಲಿಯ ಆದರ್ಶ್ ನಗರದಲ್ಲಿ ಮಾರುಕಟ್ಟೆಯಿಂದ ಮನೆಗೆ ಬರುತ್ತಿದ್ದಾಗ ಯುವತಿ ಮೇಲೆಯ ಚೈನ್ ಕದಿಯಲು ಕಳ್ಳ ಯತ್ನಿಸಿದ್ದು, ಇದಕ್ಕೆ ಪ್ರತಿರೋಧ ಒಡ್ಡಿದ ಯುವತಿಗೆ ಕಳ್ಳ ಚೂರಿ ಇರಿದ ಘಟನೆ ನಡೆದಿದೆ.
ಕಳ್ಳನೋರ್ವ ಯುವತಿಯ ಚೈನ್ ಕದಿಯಲು ಯತ್ನಿಸಿದಾಗ ಆಕೆ ಪ್ರತಿರೋಧವೊಡ್ಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಖದೀಮ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾಳೆ.
ಸಿಮ್ರಾನ್ ಎಂದು ಗುರುತಿಸಲಾದ ಈ ವ್ಯಕ್ತಿ ಶನಿವಾರ ರಾತ್ರಿ 9.30ರ ಸುಮಾರಿಗೆ ಮಾರ್ಕೆಟ್ ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಆ ಸಮಯದಲ್ಲಿ ಅವಳು ತನ್ನ ಮಗುವನ್ನು ಹಿಡಿದಿಟ್ಟುಕೊಂಡಿದ್ದಳು.
ಇಡೀ ಘಟನೆ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ಸೆರೆಯಾಗಿದೆ.
ವಿಡಿಯೋದಲ್ಲಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದು, ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಮಹಿಳೆಯ ಸರ ವನ್ನು ಕಿತ್ತುಕೊಂಡು ಹೋಗಲು ಯತ್ನಿಸಿದಾಗ ಈ ದೃಶ್ಯ ದಲ್ಲಿ ಕಂಡು ಬಂದಿದೆ. ನಂತರ ಮಹಿಳೆ ಆತನನ್ನು ಬೆನ್ನಟ್ಟಿ ಕೊಂಡು ಹೋದಾಗ ರಸ್ತೆ ಮೇಲೆ ಬಿದ್ದಿದ್ದಾನೆ. ಆತ ಎದ್ದು ನಿಂತು ನಂತರ ಮಹಿಳೆಗೆ ಚೂರಿಯಿಂದ ಇರಿದಿದ್ದಾನೆ.
ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಕಳ್ಳನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ನವದೆಹಲಿ: ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ಬೇಕು ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆಗೆ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದು, ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮೀನುಗಾರಿಕೆ ಇಲಾಖೆಯನ್ನ ಆರಂಭಿಸಿದೆ. ನೀವು ರಜೆಯಲ್ಲಿದ್ದೀರಿ. ಹಾಗಾಗಿ ನಿಮಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಪರ ಪ್ರಚಾರ ನಡೆಸಲು ಪುದುಚೇರಿಗೆ ಆಗಮಿಸಿರುವ ಅಮಿತ್ ಶಾ ಅವ್ರು ರಾಹುಲ್ ಗಾಂಧಿಯವ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು “ರಾಹುಲ್ ಗಾಂಧಿ ಕೆಲವು ದಿನಗಳ ಹಿಂದೆ ಇಲ್ಲಿ ಹೇಳಿದ್ದರು. ಮೀನುಗಾರರಿಗೆಂದೇ ಪ್ರತ್ಯೇಕ ಇಲಾಖೆಯನ್ನ ಮೋದಿ ಸರ್ಕಾರ ರಚಿಸಲಿಲ್ಲ ಅಂತಾ. ನರೇಂದ್ರ ಮೋದಿಜೀಯವ್ರ ನೇತೃತ್ವದ ಸರ್ಕಾರ 2 ವರ್ಷಗಳ ಹಿಂದೆಯೇ ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯವನ್ನ ರಚಿಸುವ ಕೆಲಸ ಮಾಡಿದೆ. ರಾಹುಲ್ ಭಯ್ಯಾ (ಸಹೋದರ)… ನೀವು ರಜೆಯಲ್ಲಿದ್ದೀರಿ, ಆದ್ದರಿಂದ ನಿಮಗೆ ಗೊತ್ತಿಲ್ಲ” ಎಂದು ಶಾ ವ್ಯಂಗ್ಯ ಮಾಡಿದರು.
ಇನ್ನು “ನಾನು ಪುದುಚೇರಿಯ ಜನರನ್ನು ಕೇಳಬಯಸುತ್ತೇನೆ… ನಾಲ್ಕು ಅವಧಿಗಳ ಕಾಲ ಲೋಕಸಭೆಯಲ್ಲಿ ದ್ದ ಪಕ್ಷದ ನಾಯಕನಿಗೆ ಎರಡು ವರ್ಷಗಳ ಹಿಂದೆ ದೇಶದಲ್ಲಿ ಮೀನುಗಾರಿಕೆ ಇಲಾಖೆಯನ್ನು ಪ್ರಾರಂಭಿಸಿರುವುದು ಗೊತ್ತಿಲ್ಲ. ಪುದುಚೇರಿಯ ಹಿತವನ್ನು ಆ ಪಕ್ಷ ನೋಡಿಕೊಳ್ಳಲು ಸಾಧ್ಯವೇ ಎಂದು ಶಾ ಪ್ರಶ್ನಿಸಿದರು.
ನವದೆಹಲಿ : ಐಸಿಸಿಯಿಂದ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮ 8 ನೇ ಸ್ಥಾನಕ್ಕೆ ಜಿಗಿದಿದ್ದು ಅವರ ವೃತ್ತಿ ಜೀವನದ ಅತ್ಯುತ್ತಮ ಸಾಧನೆ ಇದಾಗಿದೆ.
ಫೆ.27 ರಂದು ಎಂಆರ್ ಎಫ್ ಟೈರ್ಸ್ ನ ಐಸಿಸಿ ಶ್ರೇಯಾಂಕ ಪ್ರಕಟಗೊಂಡಿದ್ದು, ಅಹ್ಮದಾಬಾದ್ ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ಬಳಿಕ ಹಲವು ಆಟಗಾರರ ಶ್ರೇಯಾಂಕ ಬದಲಾವಣೆ ಕಂಡಿದೆ.
ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್ ನಲ್ಲಿ 66 ರನ್ ಗಳು ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ 25 ರನ್ ಗಳನ್ನು ಗಳಿಸಿದ್ದರು. 2019ರ ಅಕ್ಟೋಬರ್ ರಲ್ಲಿ 722 ಅಂಕ ಗಳಿಸಿದ್ದ ರೋಹಿತ್ ಶರ್ಮಾ, ಈಗ 20 ಅಂಕಗಳ ಮೂಲಕ 742 ಅಂಕಗಳನ್ನು ಹೆಚ್ಚಿಸಿಕೊಂಡು 10 ನೇ ಸ್ಥಾನದಿಂದ 8 ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಸ್ಪಿನ್ನರ್ ಅಕ್ಷರ್ ಪಟೇಲ್ 11 ವಿಕೆಟ್ ಗಳ ಪಡೆಯುವ ಮೂಲಕ 38 ನೇ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ 7 ವಿಕೆಟ್ ಪಡೆದು ಮೂರನೇ ಸ್ಥಾನಕ್ಕೇರಿದ್ದಾರೆ.
ಉಡುಪಿ: ಈ ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರಿಗೆ ಪಲಿಮಾರು ವಿದ್ಯಾಧೀಶ ಶ್ರೀ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಸಿದ್ಧರಾಮಯ್ಯನವರ ವಿವಾದಿತ ಹೇಳಿಕೆಯ ವಿರುದ್ಧ ಹರಿಹಾಯ್ದ ಶ್ರೀಗಳು, “ಮಂದಿರಕ್ಕೆ ಬೇಕಾದ ಎಲ್ಲಾ ಸಾಕ್ಷ್ಯ ಭೂಗರ್ಭದಿಂದ ಪಡೆಯಲಾಗಿದೆ. ಮೊಹಮ್ಮದ್ ಅವರ ನೇತೃತ್ವದಲ್ಲಿ ಉತ್ಖನನ ನಡೆದು ಸಾಕ್ಷಿ ಕಣ್ಣ ಮುಂದಿವೆ. ಆದ್ರೆ, ಕೆಲ ಜನನಾಯಕರು ಮಂದಿರಕ್ಕೆ 10 ರೂಪಾಯಿ ಕೊಡಬೇಕಿದ್ದರೂ ಅಯೋಧ್ಯೆ ರಾಮಮಂದಿರ ಕ್ಷೇತ್ರ ವಿವಾದಿತ ಭೂಮಿ ಎನ್ನುತ್ತಿದ್ದಾರೆ” ಎಂದರು.
ಉಡುಪಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು “ಮಂದಿರವಿದ್ದ ಬಗ್ಗೆ ಎಲ್ಲಾ ಪುರಾವೆ ನ್ಯಾಯಾಲಯಕ್ಕೆ ನೀಡಲಾಗಿದೆ. ಐವರು ನ್ಯಾಯಮೂರ್ತಿಗಳು ಸೇರಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಅದರಲ್ಲೂ ಓರ್ವ ಮುಸ್ಲಿಂ ಸಮುದಾಯದ ನ್ಯಾಯಮೂರ್ತಿ ಇದ್ದರು. ಆದರೂ ವಕೀಲರಾಗಿದ್ದ ಓರ್ವ ಜನನಾಯಕ ತೀರ್ಪನ್ನ ಒಪ್ಪುತ್ತಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ” ಎಂದರು.
ಚೆನ್ನೈ: 74 ವರ್ಷಗಳ ಹಿಂದೆ ಬ್ರಿಟಿಷರನ್ನ ಭಾರತದಿಂದ ತೊಲಗಿಸಿದ್ದೇವೆ. ಈಗ ನರೇಂದ್ರ ಮೋದಿ ಸರ್ಕಾರವನ್ನ ಇಳಿಸುವುದು ಅಷ್ಟೇನು ಕಷ್ಟವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿಯ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ವಿದ್ಯಾರ್ಥಿ ಮತ್ತು ಶಿಕ್ಷಕರ ಜತೆ ಸಂವಾದ ನಡೆಸಿದ ರಾಹುಲ್, ಬಿಜೆಪಿ ವಿರುದ್ಧ ಅವರು ಪ್ರಬಲ ವಾಕ್ಪ್ರಹಾರ ನಡೆಸಿದರು. 74 ವರ್ಷಗಳ ಹಿಂದೆ ಬ್ರಿಟಿಷರನ್ನ ಭಾರತದಿಂದ ತೊಲಗಿಸಿದ್ದೇವೆ. ಈಗ ನರೇಂದ್ರ ಮೋದಿ ಸರ್ಕಾರವನ್ನ ಇಳಿಸುವುದು ಅಷ್ಟೇನು ಕಷ್ಟವಲ್ಲ. ತನ್ನ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರಲೆಂದೇ ಕೇಂದ್ರ ಹೊಸ ಶಿಕ್ಷಣ ನೀತಿಯನ್ನ ಜಾರಿಗೊಳಿಸಿದೆ ಎಂದು ಹರಿಹಾಯ್ದರು.
ನವದೆಹಲಿ : ಕಳೆದ 24 ಗಂಟೆಗಳಲ್ಲಿ 13 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರೋನವೈರಸ್ ನಿಂದ (ಕೋವಿಡ್-19) ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಉತ್ತರ ಪ್ರದೇಶ, ಒಡಿಶಾ, ಗೋವಾ, ಹಿಮಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಸಿಕ್ಕಿಂ, ಮಿಜೋರಾಂ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ಗಳಲ್ಲಿ ಯಾವುದೇ Covid-19 ಸಂಬಂಧಿತ ಸಾವುಗಳು ವರದಿಯಾಗಿಲ್ಲ. ಜಮ್ಮು ಮತ್ತು ಕಾಶ್ಮೀರ, ಚಂಡೀಗಢ, ಲಕ್ಷದ್ವೀಪ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ನಿಂದ ಯಾವುದೇ ಸಾವುಗಳು ವರದಿಯಾಗಿಲ್ಲ.
ಕಳೆದ 24 ಗಂಟೆಗಳಲ್ಲಿ 16,752 ಹೊಸ ಕೋವಿಡ್-19 ಪ್ರಕರಣಗಳು ಮತ್ತು 113 ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ಬೆಳಿಗ್ಗೆ 8 ಕ್ಕೆ ತಿಳಿಸಿವೆ. ಇದರೊಂದಿಗೆ ದೇಶದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ 11,096,731ಕ್ಕೆ ಏರಿದೆ.
ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ವಿಶೇಷ ಅವಕಾಶ ನೀಡುತ್ತಿದೆ. ಎಸ್ ಬಿಐ ತನ್ನ ಗ್ರಾಹಕರಿಗೆ ಅತ್ಯುತ್ತಮ ಫಿಕ್ಸೆಡ್ ಡೆಪಾಸಿಟ್ (ಎಫ್ ಡಿ) ನಿಂದ ಪಿಪಿಎಫ್ ಇನ್ವೆಸ್ಟ್ ಮೆಂಟ್ʼಗೆ ಅತ್ಯುತ್ತಮ ಕೊಡುಗೆಗಳನ್ನ ನೀಡುತ್ತದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಹೂಡಿಕೆ ಯೋಜನೆಯನ್ನ ಪರಿಚಯಿಸಿದ್ದು, ಇದರಲ್ಲಿ ಗ್ರಾಹಕರಿಗೆ ತಿಂಗಳಿಗೆ 10,000 ರೂ.ವರೆಗೆ ಗಳಿಸಬೋದು. ಅದ್ರಂತೆ, ಈ ಉಳಿತಾಯ ಯೋಜನೆಗೆ ʼವಾರ್ಷಿಕ ಯೋಜನೆʼ ಎಂದು ಹೆಸರಿಡಲಾಗಿದೆ.
ಎಸ್ ಬಿಐ ವಾರ್ಷಿಕ ಯೋಜನೆ ಎಂದರೇನು..?
ಎಸ್ ಬಿಐ ತನ್ನ ಗ್ರಾಹಕರಿಗೆ ವಿಶೇಷ ಉಳಿತಾಯವನ್ನ ಪರಿಚಯಿಸಿದೆ. ಈ ಯೋಜನೆಯ ಮೂಲಕ ಸುರಕ್ಷಿತ ಹೂಡಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ 36, 60, 84 ಅಥವಾ 120 ತಿಂಗಳು ಹೂಡಿಕೆ ಮಾಡುವ ಆಯ್ಕೆಯನ್ನ ನೀವು ಪಡೆಯುತ್ತೀರಿ. ಇದರಲ್ಲಿ ಯಾರು ಬೇಕಾದ್ರೂ ಹೂಡಿಕೆ ಮಾಡಬಹುದು. ಇನ್ನು ಹೂಡಿಕೆಯ ಮೇಲಿನ ಬಡ್ಡಿ ದರವು ಒಂದೇ ರೀತಿ ಇರುತ್ತೆ. ಇದು ನೀವು ಆಯ್ಕೆ ಮಾಡಿದ ಅವಧಿಯ ನಿಶ್ಚಿತ ಠೇವಣಿಯ ಮೇಲೆ ಬ್ಯಾಂಕಿನಿಂದ ಪಡೆದ ಬಡ್ಡಿಯಾಗಿದೆ. ಅಂದ್ರೆ, ನೀವು ಈ ಯೋಜನೆಯಲ್ಲಿ 10 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಹತ್ತು ವರ್ಷಗಳ ಎಫ್ ಡಿಯಲ್ಲಿ ಎಸ್ ಬಿಐನಿಂದ ಪಡೆದ ಬಡ್ಡಿಗೆ ಸಮಾನ ಬಡ್ಡಿಯೂ ದೊರೆಯುತ್ತದೆ.
ಈ ಯೋಜನೆಯಲ್ಲಿ ವಿಶೇಷವೇನು..?
ಎಸ್ ಬಿಐನ ಈ ಯೋಜನೆಯಲ್ಲಿ, ನೀವು 36, 60, 84 ಅಥವಾ 120 ತಿಂಗಳುಗಳ ಕಾಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಮಾಡಬಹುದು. ಹೂಡಿಕೆಗೆ ಉತ್ತಮ ಬಡ್ಡಿ ದರ ಲಭ್ಯವಿದೆ. ಗರಿಷ್ಠ ಹೂಡಿಕೆ ಮಿತಿ ಇಲ್ಲ. ಈ ಯೋಜನೆಯಲ್ಲಿ ನೀವು ಕನಿಷ್ಠ 1000 ರೂ.ಗಳಿಂದ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಮಧ್ಯಮ ವರ್ಗದ ಕುಟುಂಬಕ್ಕೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಕಡಿಮೆ ಹೂಡಿಕೆ ಮಾಡುವ ಮೂಲಕವೂ ಈ ಯೋಜನೆ ಮೂಲಕ ಉತ್ತಮ ಆದಾಯ ಪಡೆಯಬಹುದು.
ಪ್ರತಿ ತಿಂಗಳು 10000 ರೂ. ಗಳಿಸಬೋದು..!
ಈ ಯೋಜನೆಯಲ್ಲಿ ಹೂಡಿಕೆ ಮಾಡಿ ನೀವು ತಿಂಗಳಿಗೆ 10,000 ರೂಪಾಯಿವರೆಗೆ ಗಳಿಸಬಹುದು. ಹೌದು, ಮಾಸಿಕ ಹತ್ತು ಸಾವಿರ ಸಂಪಾದಿಸಲು ಈ ಯೋಜನೆಯಲ್ಲಿ ನೀವು ಸುಮಾರು 5,07,964 ರೂಪಾಯಿಗಳನ್ನ ಠೇವಣಿ ಇಡಬೇಕಾಗುತ್ತದೆ. ಈ ಠೇವಣಿಯ ಮೇಲೆ ನೀವು 7 ಪ್ರತಿಶತ ದರದಲ್ಲಿ ಬಡ್ಡಿಯನ್ನ ಪಡೆಯುತ್ತೀರಿ. ಈ ಮೂಲಕ ಭವಿಷ್ಯದಲ್ಲಿ ಉತ್ತಮ ಮೊತ್ತ ಪಡೆಯಬಹುದು. ಅದ್ರಂತೆ, ಈ ಯೋಜನೆ ಭವಿಷ್ಯದ ದೃಷ್ಟಿಯಿಂದ ಉತ್ತಮ ಯೋಜನೆಯಾಗಿದೆ.
ಡಿಜಿಟಲ್ ಡೆಸ್ಕ್: ಪುಣೆಯಲ್ಲಿ 23 ವರ್ಷದ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷ ಬಿಜೆಪಿ ತಮ್ಮನ್ನ ದೂರಿದ್ದಕ್ಕಾಗಿ ಮನನೊಂದು ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್ ರಾಥೋಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ ಬಗ್ಗೆ ವಿವಾದಗಳು ಸುತ್ತುವರಿದ ಹಿನ್ನೆಲೆಯಲ್ಲಿ ಶಿವಸೇನೆ ನಾಯಕ ಸಂಜಯ್ ರಾಥೋಡ್ ಅವರು ಭಾನುವಾರ ಸಿಎಂ ಉದ್ಧವ್ ಠಾಕ್ರೆ ಅವರನ್ನ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಸಂಜಯ್ ರಾಥೋಡ್ ತಮ್ಮ ರಾಜೀನಾಮೆಯನ್ನು ಸ್ವೀಕರಿಸುವಂತೆ ಸಿಎಂ ಉದ್ಧವ್ ಅವರನ್ನು ಕೋರಿದ್ದಾರೆ.
ರಾಜೀನಾಮೆ ಬಳಿಕ ಪ್ರತಿಕ್ರಿಯಿಸಿದ ಅವ್ರು ಕೊಳಕು ರಾಜಕಾರಣ ನನಗೆ ಬೇಡ. ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಸಂಜಯ್ ರಾಥೋಡ್, ಯವತಮಲ್ ಜಿಲ್ಲೆಯ ದಿಗ್ರಾಸ್ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.ನಂತರ ಅರಣ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ರಾಜಿನಾಮೆಗೆ ಕಾರಣ ಮತ್ತು ಸಿಎಂ ರಾಜಿನಾಮೆ ಸ್ವೀಕರಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಪುಣೆಯಲ್ಲಿ 23 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ವಿರೋಧ ಪಕ್ಷ ಬಿಜೆಪಿ ಸಚಿವರ ಜೊತೆ ಲಿಂಕ್ ಮಾಡಿದ ಕಾರಣ ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್ ರಾಥೋಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕೊಳಕು ರಾಜಕಾರಣದಿಂದಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ ಯೋಗೇಶ್ವರ್, ಹೆಚ್. ಡಿ ಕುಮಾರಸ್ವಾಮಿಯವರನ್ನ ಸೋಲಿಸುತ್ತಾರೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಭವಿಷ್ಯ ನುಡಿದ್ದಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, “ಮುಂದಿನ ಚುನಾವಣೆಯಲ್ಲಿ ಯೋಗೇಶ್ವರ್ ಜೆಡಿಎಸ್ʼನ ಎದುರಾಳಿ. ಅವರು ಕುಮಾರಸ್ವಾಮಿಯನ್ನ ಸೋಲಿಸುತ್ತಾರೆ. ಕುಮಾರಸ್ವಾಮಿ ವಿರುದ್ಧ ಅವರು ನೀಡಿರುವ ಹೇಳಿಕೆಗಳು ಸ್ಪಷ್ಟವಾಗಿದೆ” ಎಂದಿದ್ದಾರೆ.
ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು ಅನ್ನೋ ಕುಮಾರಸ್ವಾಮಿ ಹೇಳಿಕೆ ಡಿಸಿಎಂ ಟಾಂಗ್ ನೀಡಿದ್ದು, “ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅವರಿಗೂ ಅನುಕೂಲ ಆಯ್ತು. ನಾವು ಅವ್ರಿಗೆ ಬಂಗಾರದ ತಟ್ಟೆಯಲ್ಲಿ ಅಧಿಕಾರವನ್ನ ಕೊಟ್ಟಿದ್ದೇವು. ಆದ್ರೆ, ಬಂಗಾರದ ತಟ್ಟೆಯಲ್ಲಿ ಬಂದಿದ್ದನ್ನ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆ ಅಧಿಕಾರವನ್ನ ಕುಮಾರಸ್ವಾಮಿ ಕಾಲಲ್ಲಿ ಒದ್ದಿದ್ದರು. ಅದಕ್ಕೆ ನಾವೇನು ಮಾಡೋಕಾಗಲ್ಲ” ಎಂದರು.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಪ್ರಧಾನಿಯಾಗಿದ್ದರೂ ತಮ್ಮ ಮೂಲವನ್ನು ಮರೆತಿಲ್ಲ. ಇಂದಿಗೂ ತನ್ನನ್ನು ಚಾಯ್ ವಾಲ ಎಂದು ಹೇಳಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಜಮ್ಮುವಿನ ಕಾರ್ಯಕ್ರಮವೊಂದರಲ್ಲಿ ಗುಜ್ಜರ್ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಆಜಾದ್, “ಪ್ರಧಾನಿಯಾಗಿದ್ದರೂ ತಮ್ಮ ಬೇರುಗಳನ್ನು ಮರೆತಿಲ್ಲ. ತನ್ನನ್ನು ತಾನು ‘ಚಾಯ್ ವಾಲಾ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ನರೇಂದ್ರ ಮೋದಿ ಜತೆ ನನಗೆ ಗಂಭೀರ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಪ್ರಧಾನಿ ಒಬ್ಬ ವಿನಮ್ರ ವ್ಯಕ್ತಿ,” ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಅವರ ಅಧಿಕಾರಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಗುಲಾಂ ನಬಿ ಆಜಾದ್ ಅವರಿಗೆ ಪಿಎಂ ನರೇಂದ್ರ ಮೋದಿ ಅವರು ಕಂಬನಿಯವಿದಾಯ ಮಾಡಿದ ಕೆಲ ದಿನಗಳ ನಂತರ ಈ ಹೇಳಿಕೆ ನೀಡಿದ್ದಾರೆ.
2007ರಲ್ಲಿ ನಡೆದ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಗುಜರಾತ್ ಜನರನ್ನು ಮರಳಿ ಕರೆತರಲು ಆಜಾದ್ ಮಾಡಿದ ಸಹಾಯ ಮತ್ತು ಪ್ರಯತ್ನಗಳನ್ನು ನೆನಪಿಸಿಕೊಂಡ ಮೋದಿ, 13 ನಿಮಿಷಗಳ ತಮ್ಮ ಭಾಷಣದಲ್ಲಿ ಹಲವು ಬಾರಿ ಅಜಾದ್ ಅವರನ್ನು ಶ್ಲಾಘಿಸಿದ್ದರು.
370ನೇ ವಿಧಿರದ್ದು ಮತ್ತು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು-ಕಾರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಆಜಾದ್ ಹೇಳಿದರು.
‘ಅಭಿವೃದ್ಧಿ ಕಾರ್ಯಗಳು ಮೂರು ಪಟ್ಟು ಹೆಚ್ಚಿಸಬೇಕು. ಜಮ್ಮು-ಕಾಶ್ಮೀರದ ಜನರಿಗೆ ದೆಹಲಿಗಿಂತ 3-4 ಪಟ್ಟು ಹೆಚ್ಚು ಅನುದಾನ ನೀಡಬೇಕು. ಇಂದು ಕೆಲಸ ಕಣ್ಣಿಗೆ ಕಾಣುವುದಿಲ್ಲ, ಕೈಗಾರಿಕೆಗಳು ಮುಚ್ಚಿವೆ’ ಎಂದು ಆಜಾದ್ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಕಪಿಲ್ ಸಿಬಲ್, ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ, ಮನೀಶ್ ತಿವಾರಿ, ವಿವೇಕ್ ಟಂಖಾ, ರಾಜ್ ಬಬ್ಬರ್ ಮುಂತಾದವರು ಉಪಸ್ಥಿತರಿದ್ದರು.
ಡಿಜಿಟಲ್ ಡೆಸ್ಕ್: 2021-22ನೇ ಸಾಲಿನ ನಾಸಿಕ್ ವಿಭಾಗದ ಅಪ್ರೆಂಟಿಸ್ ಹುದ್ದೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್ ) ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ hal-india.co.in HAL Recruitment 2021 ವೆಬ್ಸೈಟ್ʼಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಎಚ್ ಎಎಲ್ ನೇಮಕಾತಿ 2021ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 13, 2021ವಾಗಿದ್ದು, ಅಭ್ಯರ್ಥಿಗಳು ಎಚ್ ಎಎಲ್ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿವರಗಳನ್ನು ಈ ಕೆಳಗೆ ಪರಿಶೀಲಿಸಬಹುದು.
ಎಚ್ ಎಎಲ್ ಖಾಲಿ ಹುದ್ದೆಗಳ ವಿವರ
ಒಟ್ಟು – 475 ಹುದ್ದೆಗಳು
ಫಿಟ್ಟರ್- 210
ಟರ್ನರ್- 28
ಮೆಶಿನಿಸ್ಟ್- 26
ಕಾರ್ಪೇನ್ಟರ್- 03 .
ಮೆಶಿನಿಸ್ಟ್- 06
ಎಲೆಕ್ಟ್ರಿಷಿಯನ್- 78
ಡ್ರಾಟ್ಸ್ ಮನ್ (ಮೆಕ್ಯಾನಿಕಲ್)- 08
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್- 08
ಚಿತ್ರಕಲಾವಿದ (ಸಾಮಾನ್ಯ) – 05
ಶೀಟ್ ಮೆಟಲ್ ವರ್ಕರ್- 04
ಮೆಕ್ಯಾನಿಕ್- 04
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್- 77
ವೆಲ್ಡರ್- 10
ಶೀಘ್ರಲಿಪಿಗಾರ- 08
ಎಚ್ ಎಎಲ್ ಅಪ್ರೆಂಟಿಸ್ ನೇಮಕಾತಿ 2021: ಅರ್ಜಿ ಸಲ್ಲಿಸಲು ಈ ಹಂತಗಳನ್ನ ಅನುಸರಿಸಿ
ಹಂತ 1: ಅಭ್ಯರ್ಥಿಗಳು apprenticeshipindia.org ನಲ್ಲಿ ನೋಂದಾಯಿಸಿಕೊಳ್ಳಿ.
ಹಂತ 2: ಪೋರ್ಟಲ್ʼನಲ್ಲಿ ಎಚ್ ಎಎಲ್-ನಾಸಿಕ್ʼಗೆ ಅರ್ಜಿ ಹಾಕಿ
ಹಂತ 3: ಈ ಲಿಂಕ್ ತೆರೆಯಿರಿ: docs.google.com/forms/d/e/1FAIpQLSedzB_fpt897wM2tfNJNprEZargN205xKzUU4Y DKml1IkxK_g/viewform?vc=0&c=0&w=1&flr=0
ಹಂತ 4: ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನ ನಮೂದಿಸಿ.
ಹಂತ 5: ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಇಮೇಲ್ ಸ್ವೀಕರಿಸುತ್ತೀರಿ.
ಹ್ಯೂಸ್ಟನ್: ಪಿಜ್ಜಾ.. ಸಧ್ಯ ಜಾಗತಿಕ ಫೇವರಿಟ್ ಫುಡ್.. ಬಹುತೇಕರು ಬಾಯಿ ಚಪ್ಪರಿಸಿಕೊಂಡು ತಿನ್ನೋ ಈ ಪಿಜ್ಜಾವನ್ನ ಆಕಾಶದಲ್ಲಿ ಹಾರಾಡುತ್ತಾ ತಿಂದ್ರೆ ಹೇಗಿರುತ್ತೆ? ರುಚಿ ದುಪ್ಪಟ್ಟಾಗುತ್ತಾ? ಅಥ್ವಾ ಟೆಸ್ಟ್ಲೆಸ್ ಆಗಿಬಿಡುತ್ತಾ? ಈ ಅನುಮಾನ ನಿಮ್ಮನ್ನು ಕಾಡ್ತಿದ್ರೆ, 14000 ಅಡಿ ಎತ್ತರದಲ್ಲಿ ಹಾರಾಡುತ್ತಾ ಫಿಜ್ಜಾ ಸವಿದ ಈ ಈ ಸ್ಕೈ ಡೈವರ್ʼಗಳ ಅನುಭವವನ್ನ ಕೇಳಿ.
ಹೌದು, ಟೆಕ್ಸಾಸ್ʼನ ಲೋರಿ ಪಟಾಲೊಕೊ ಎಂಬ ಸ್ಕೈ ಡೈವರ್ ಮತ್ತು ಇತರ ಮೂವರು 14,000 ಅಡಿ ಎತ್ತರದಲ್ಲಿ ಫಿಜ್ಜಾ ಸವಿದಿದ್ದಾರೆ. ಸಧ್ಯ ಈ SWNS ಸುದ್ದಿಯು ಟ್ಯೂಬ್ ಪೇಜ್ʼನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.
ಅಂದ್ಹಾಗೆ, ಸ್ಕೈ ಡೈವರ್ ಪ್ಯಾಟಲೊಕೊ ಅವ್ರ ಪ್ರೇಯಸಿ ಮೆಲಿಸ್ಸಾಗೆ ಪಿಜ್ಜಾ ಅಂದ್ರೆ ಪಂಚಪ್ರಾಣವಂತೆ. ಈಕೆಗೆ ವಿಮಾನದಿಂದ ಬೀಳುವಾಗ ಅಂದ್ರೆ, ಆಕಾಶದಲ್ಲಿ ಹಾರಾಡುವಾಗ ಪಿಜ್ಜಾ ತಿನ್ನಬಹುದೇ ಅನ್ನೋ ಅನುಮಾನ ಇತ್ತಂತೆ. ಹಾಗಾಗಿ ಪ್ಯಾಟಲೊಕೊ ಮತ್ತೆ ಮೂವರ ಜೊತೆ ಸೇರಿ ಈ ಸಾಹಸ ಮಾಡಿದ್ದಾರೆ.
SWNS ಜೊತೆ ಪ್ಯಾಟಲೊಕೊ ಮಾತನಾಡುತ್ತಾ, “ಇದು ನಾನು ಮಾಡಿದ ಅತ್ಯಂತ ನಂಬಲ ಸಾಧ್ಯವಾದ ಮತ್ತು ಅದ್ಭುತವಾದ ಜಿಗಿತ. ನನ್ನ ಪ್ರೀಯಸಿಗಾಗಿ ಈ ಸಾಹಸ ಮಾಡಬೇಕಾಯ್ತು” ಎಂದಿದ್ದಾರೆ.
ನವದೆಹಲಿ : ದೆಹಲಿ ಮುಖ್ಯ ಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಮೀರತ್ ನಲ್ಲಿ ‘ಕಿಸಾನ್ ಮಹಾಪಂಚಾಯತ್’ ಉದ್ದೇಶಿಸಿ ಮಾತನಾಡಿ, ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಬೆಂಬಲ ನೀಡಿದರು.
‘ದೇಶದ ರೈತರು ದುಃಖಿತರಾಗಿದ್ದಾರೆ. 90 ಕ್ಕೂ ಹೆಚ್ಚು ದಿನಗಳಿಂದ ದೆಹಲಿ ಬಳಿ ತಮ್ಮ ಕುಟುಂಬದವರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಈ ಮೂರು ತಿಂಗಳಲ್ಲಿ 250ಕ್ಕೂ ಹೆಚ್ಚು ರೈತರು ಸತ್ತಿದ್ದಾರೆ, ಆದರೆ ಕೇಂದ್ರ ಏನೂ ಮಾಡಿಲ್ಲ’ ಎಂದು ಕೇಜ್ರಿವಾಲ್ ಹೇಳಿದರು.
ಅಲ್ಲದೆ, ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಚೋದನೆ ನೀಡಿದೆ ಎಂದು ಅವರು ಆರೋಪಿಸಿದರು. ಕೆಂಪುಕೋಟೆ ಹಿಂಸಾಚಾರದ ಹಿಂದೆ ಬಿಜೆಪಿ ಇದೆ, ರೈತರಲ್ಲ ಎಂದು ಹೇಳಿದ ಅವರು ಗಂಭೀರ ಆರೋಪ ಮಾಡಿದರು. ತಾವು ಕೇಂದ್ರ ಸರ್ಕಾರದ ಮುಖ್ಯಮಂತ್ರಿ ಆಗಿರುವ ಕಾರಣ ಏನಾಯಿತು ಎಂಬುದು ತಮಗೆ ತಿಳಿದಿದೆ ಎಂದು ಹೇಳಿದರು.
2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಎಪಿ ಘೋಷಿಸಿದ ಕೆಲವೇ ತಿಂಗಳುಗಳ ನಂತರ ಈ ‘ಮಹಾಪಂಚಾಯತ್’ ಬಂದಿದೆ.