india breaking news – #1 Latest News Updates Portal – 24×7 | Kannada News Now
Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಡಿಜಿಟಲ್ ಡೆಸ್ಕ್: ವಾಟ್ಸಾಪ್ ನವೀಕರಣಗೊಂಡಿದ್ದು, ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ವೈಶಿಷ್ಟ್ಯವನ್ನ ಪರಿಚಯಿಸಿದೆ. ಇನ್ಮುಂದೆ ನೀವು ವೀಡಿಯೋ ತುಣುಕೊಂದನ್ನ ಬೇರೊಬ್ಬರಿಗೆ ಕಳಿಸುವ ಮುನ್ನ ಅದನ್ನ ಮ್ಯೂಟ್ ಮಾಡಬಹುದು. ಅಂದ್ರೆ, ನೀವು ಕಳಿಸುವ ವೀಡಿಯೋ ಹಿನ್ನೆಲೆ ಧ್ವನಿಯನ್ನ ಮ್ಯೂಟ್ ಮಾಡ್ಬೋದು.
ವರದಿಗಳ ಪ್ರಕಾರ, ಸಧ್ಯ ಈ ವೈಶಿಷ್ಟ್ಯವನ್ನ ವಾಟ್ಸಾಪ್ʼನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.21.3.13 ಯಲ್ಲಿ ಲಭ್ಯವಿದೆ. ಇನ್ನು ಶೀಘ್ರದಲ್ಲೇ ವಿಶೇಷ ವೈಶಿಷ್ಟ್ಯವು ಶೀಘ್ರದಲ್ಲೇ ನಿಮ್ಮ ಮೊಬೈಲ್ʼನಲ್ಲಿಯೂ ಲಭ್ಯವಾಗಲಿದೆ. ಇಲ್ಲಿಯವರೆಗೆ ಬಹುಶಃ ಇದು ಎಲ್ಲಾ ಬಳಕೆದಾರರನ್ನ ತಲುಪಿಲ್ಲ. ಆದ್ರೆ, ಮುಂಬರುವ 1-2 ದಿನಗಳಲ್ಲಿ ಈ ಅದ್ಭುತ ವೈಶಿಷ್ಟ್ಯವು ಎಲ್ಲಾ ಬಳಕೆದಾರರನ್ನ ತಲುಪಲಿದೆ ಎಂದು ಹೇಳಲಾಗ್ತಿದೆ.
ಇದಕ್ಕಾಗಿ ನೀವು ಮೊದಲಿನಂತೆ ವೀಡಿಯೋ ಕಳುಹಿಸುವ ಪ್ರಕ್ರಿಯೆಯನ್ನೇ ಅನುಸರಿಸಬೇಕು. ವಾಟ್ಸಾಪ್ʼನ ಮ್ಯೂಟ್ ವೀಡಿಯೊ ವೈಶಿಷ್ಟ್ಯವನ್ನ ವೀಡಿಯೋ ಕಳುಹಿಸುವ ವಿಂಡೋದಲ್ಲಿ ಎಡಿಟ್ ವಿಡಿಯೋ ಆಯ್ಕೆಯ ಮೇಲೆ ಕ್ಲಿಕ್ ಮಾಡ್ಬೇಕು. ಸ್ಪೀಕರ್ ಐಕಾನ್ʼನ್ನ ಮೇಲಿನ ಎಡಭಾಗದಲ್ಲಿ ನೀಡಲಾಗಿರುತ್ತೆ. ಯಾರಿಗಾದರೂ ವಿಡಿಯೋ ಕಳುಹಿಸುವ ಮುನ್ನ ಸ್ಪೀಕರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಕಂಪನಿಯು ಕಳೆದ ವರ್ಷದಿಂದ ವಾಟ್ಸಾಪ್ ವಿಡಿಯೋ ಮ್ಯೂಟ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ನವೆಂಬರ್ʼನಲ್ಲಿ ಐಫೋನ್ʼನ ಬೀಟಾ ಆವೃತ್ತಿಯಲ್ಲಿ ಇದನ್ನ ಪರೀಕ್ಷಿಸಲಾಯಿತು. ಅದರ ನಂತರ ಈಗ ಆಂಡ್ರಾಯ್ಡ್ʼನಲ್ಲಿ ಮಾಡಲಾಗಿದೆ. ಈಗ ಇದು ಎಲ್ಲಾ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್ ಸ್ಫೋಟಗೊಂಡಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣವನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ದಿನೇಶ್ ಕಲ್ಲಹಳ್ಳಿ ಯಾರು ಎಂಬುದೇ ನನಗೆ ಗೊತ್ತಿಲ್ಲ, ಜಾರಕಿಹೊಳಿ ಅತ್ಯಂತ ದೊಡ್ಡ ಕುಟುಂಬ..ನಾನು ಅಂತ್ಯಂತ ಸೂಕ್ಷ್ಮ ಮನಸ್ಸಿನ ವ್ಯಕ್ತಿ, ಯುವತಿ ಯಾರು ಎಂಬುದೇ ನನಗೆ ಗೊತ್ತಿಲ್ಲ, ನಾನು ಏನಾದರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ಕಳೆದ 21 ವರ್ಷದಿಂದ ನಾನು ರಾಜಕೀಯದಲ್ಲಿದ್ದೇನೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಬಳಿ ಮಾತನಾಡುವೆ, ಸುದ್ದಿವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದ್ದು ನೋಡಿ ಬೇಸರವಾಯಿತು , ಬೆಂಗಳೂರಿನ ನಿವಾಸದಲ್ಲಿ ಕುಳಿತು ಮಾತನಾಡುತ್ತಿರುವೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಹಿರಂಗವಾದ ಕೂಡಲೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಇದೀಗ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು : ರಮೇಶ್ ಜಾರಕಿಹೊಳಿ ರಾಸಲೀಲೆ ವೈರಲ್ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಟೀಕೆ, ಚರ್ಚೆಗೆ ಕಾರಣವಾಗಿದೆ. ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ನಾಯಕರುಗಳು ಭೇಟಿ ನೀಡಿಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಡಿಕೆ ಶಿವಕುಮಾರ್, ಜಮೀರ್ ಅಹಮದ್ ಸೇರಿದಂತೆ ಹಲವು ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ವೈರಲ್ ಆಗುತ್ತಿದ್ದಂತೆ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಸಚಿವ ರಮೇಶ್ ಜಾರಕಿಹೊಳೀ ರಾಜೀನಾಮೆಗೆ ಒತ್ತಡ ಹೇರಲು ಚರ್ಚೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಹಿರಂಗವಾದ ಕೂಡಲೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್ ಸ್ಫೋಟಗೊಂಡಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣವನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಹಿರಂಗವಾದ ಕೂಡಲೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಹೌದು, ಮೈಸೂರಿನ ಅಜ್ಞಾತ ಸ್ಥಳದಲ್ಲಿ ರಮೇಶ್ ಜಾರಕಿಹೊಳಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿವಾಹ ಆರತಕ್ಷತೆ ಹಿನ್ನೆಲೆಯಲ್ಲಿ ರಮೇಶ್ ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ಗನ್ ಮ್ಯಾನ್ ಗಳನ್ನು ಬಿಟ್ಟು ಖಾಸಗಿ ಕಾರಿನಲ್ಲಿ ಮೈಸೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಮಾಜಿಕ ಕಾರ್ಯಕರ್ತ, ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ಜಲ ಸಂಪನ್ಮೂಲ ಸಚಿವರ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದು, ಸಚಿವರ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ದೇಶದ್ಯಾಂತ 2ನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದ್ದು, ಇಂದು ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಯವ್ರು ಲಸಿಕೆ ಪಡೆದುಕೊಂಡಿದ್ದಾರೆ.
ಎರಡನೇ ಹಂತದ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸಚಿವರು, ಸಂಸದರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿ : ನಮ್ಮದು ಶಿಸ್ತಿನ ಪಕ್ಷ, ಬಿಜೆಪಿಯಲ್ಲಿ ಇದನ್ನೆಲ್ಲಾ ಸಹಿಸಲ್ಲ, ನಾಯಕರು ನೈತಿಕವಾಗಿ ಶುದ್ದವಾಗಿರಬೇಕು ಎಂದು ಕೇಂದ್ರ ಸಚಿವ ಸಂಸದ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಯಾವುದೇ ವರದಿ ಬಂದ ಕೂಡಲೇ ತೀರ್ಮಾನಿಸಲ್ಲ, ಸತ್ಯಾಸತ್ಯತೆ ಅರಿತು ತನಿಖೆ ನಡೆಸಬೇಕು. ನಾಯಕರು ಕ್ಲೀನ್ ಆಗಿರಬೇಕು ಎಂದು ಹೇಳಿದ್ದಾರೆ.
ನಾಳೆ ದೆಹಲಿಯಲ್ಲಿ ವರಿಷ್ಟರ ಜೊತೆ ಚರ್ಚೆ ಮಾಡುತ್ತೇವೆ, ಈ ಬಗ್ಗೆ ತನಿಖೆ ನಡೆಯಬೇಕು, ಇದರ ಬಗ್ಗೆ ನನಗೇನು ಹೆಚ್ಚು ಗೊತ್ತಿಲ್ಲ, ಶೇಕಡ ನೂರರಷ್ಟು ತನಿಖೆ ನಡೆಯಲಿದೆ ಎಂದು ಹೇಳಿದರು.
ಬೆಂಗಳೂರು: ಮೈಸೂರು ಪಾಲಿಕೆ ಚುನಾವಣೆಯ ಮೈತ್ರಿ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಮುನಿಸಿಕೊಂಡ ಸಿದ್ಧರಾಮಯ್ಯ ನಾಳಿನ ಪಾತ್ರೆಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ ಎನ್ನಲಾಗ್ತಿದೆ. ಸಧ್ಯ ಈ ವಿಚಾರವಾಗಿ ಇದೀಗ ವಿಪಕ್ಷ ನಾಯಕನ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರನ್ನ ಡಿ.ಕೆ. ಸುರೇಶ್ ಮನವೊಲಿಸಲು ಪ್ರಯತ್ನಿಸಿದ್ದರು. ಆದ್ರೆ, ಸಿದ್ದರಾಮಯ್ಯ ಸುರೇಶ್ ಮಾತಿಗೆ ಕ್ಯಾರೆ ಎಂದಿಲ್ಲವಂತೆ. ಹಾಗಾಗಿ ಸಿದ್ದರಾಮಯ್ಯ ಮನವೊಲಿಕೆಗೆ ಸ್ವತಃ ಡಿ.ಕೆ ಶಿವಕುಮಾರ್ ಮುಂದಾಗಿದ್ದು, ಮನೆಗೇ ಹೋಗಿ ಮನವೊಲಿಕೆ ಯತ್ನಿಸುತ್ತಿದ್ದಾರೆ. ನಾಳಿನ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗ್ತಿದೆ.
ಬೆಂಗಳೂರು : ವಿಧಾನಸೌಧದಲ್ಲಿ ನಾಳೆ (ಮಾರ್ಚ್ 3) ಮಧ್ಯಾಹ್ನ 2 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಳೆ ಮಧ್ಯಾಹ್ನ 2 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಮಹತ್ವದ ವಿಚಾರಗಳು ಚರ್ಚೆಯಾಗಲಿದೆ ಎನ್ನಲಾಗಿದೆ.
ಸದ್ಯ, ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವೈರಲ್ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನೂ, ಸಿಡಿ ವೈರಲ್ ಆಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಬರ್ತಾರಾ..? ಸಭೆಯಲ್ಲಿ ಸಿಡಿ ಸ್ಪೋಟ ವಿಚಾರಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಚರ್ಚೆಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡಿಜಿಟಲ್ ಡೆಸ್ಕ್ : ತಮ್ಮ ವಿರುದ್ಧ ತುಮಕೂರಿನಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ತಡೆ ನೀಡಬೇಕು ಎಂದು ನಟಿ ಕಂಗನಾ ರಣಾವತ್ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಹೊಸ ರೈತ ಮಸೂದೆಯನ್ನು ವಿರೋಧಿಸುವವರು ಭಯೋತ್ಪಾದಕರು ಎಂದು ಟ್ವೀಟ್ ಮಾಡಿದ್ದ ಕಂಗನಾ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದರು. ಸಿಎಎ ವಿರುದ್ಧ ತಪ್ಪು ಮಾಹಿತಿಯನ್ನು ಹಬ್ಬಿಸಿ ದಂಗೆಗೆ ಕಾರಣರಾದ ಜನರೇ ಈಗ ರೈತ ಮಸೂದೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಾ ದೇಶದಲ್ಲಿ ಭಯ ಹುಟ್ಟಿಸುತ್ತಿದ್ದಾರೆ, ಅವರು ಭಯೋತ್ಪಾದಕರು ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದರು.
ಪ್ರಕರಣ ಸಂಬಂಧ ಕಂಗನಾ ಪರ ವಕೀಲರು ಸಲ್ಲಿಸಿದ ಅರ್ಜಿಯು ಸರಿಯಾದ ಪ್ರಕಾರದಲ್ಲಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದ್ದು, ಸರಿಯಾದ ಮಾಹಿತಿ ಒದಗಿಸಿದ್ರೆ ಮಾತ್ರ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಕೋರ್ಟ್ ಸೂಚಿಸಿದೆ.
ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ, ರಾಗಿಣಿ ಸೇರಿದಂತೆ 24 ಜನರ ವಿರುದ್ಧ NDPS ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಕಾಟನ್ ಪೇಟೆ ಪೊಲೀಸರಿಂದ ಸುಮಾರು 3 ಸಾವಿರ ಪುಟಗಳ ಚಾರ್ಚ್ ಶೀಟ್ ಕೋರ್ಟ್ ಸಲ್ಲಿಕೆಯಾಗಿದೆ.
ಡ್ರಗ್ಸ್ ಕೇಸ್ ಪ್ರಕರಣ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು ನಂತರ ಕಾಟನ್ ಪೇಟೆ ಠಾಣೆಗೆ ವರದಿ ಸಲ್ಲಿಸಿದ್ದರು. ಸದ್ಯ ಕಾಟನ್ ಪೇಟೆ ಪೊಲೀಸರು ಎನ್ ಡಿ ಪಿ ಎಸ್ ಕೋರ್ಟ್ ಗೆ 3 ಸಾವಿರ ಪುಟಗಳ ಚಾರ್ಚ್ ಶೀಟ್ ಸಲ್ಲಿಸಿದ್ದಾರೆ.
ನವದೆಹಲಿ: ಸೋಮವಾರ ಬೆಳಗ್ಗೆ 9 ಗಂಟೆಗೆ ಕೋ-ವಿನ್ ಪೋರ್ಟಲ್ ವಿಂಡೋ ತೆರೆದಿದ್ದೇ ತಡ ಸಾಕಷ್ಟು ಜನ ನೋಂದಾಣಿಯಾಗಿದ್ದು, ಒಂದೇ ದಿನದಲ್ಲಿ ಸುಮಾರು 50 ಲಕ್ಷ ಮಂದಿ ಕೋ- ವಿನ್ ಪೋರ್ಟಲ್ʼನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
45-60 ವರ್ಷ ವಯೋಮಿತಿಯೊಳಗಿನವರಿಗೆ ಲಸಿಕೆ ಹಾಕುವ ಅಭಿಯಾನ ಮಾರ್ಚ್ 1ರಿಂದ ಆರಂಭವಾಗಿದ್ದು, ಸೋಮವಾರ ಬೆಳಗ್ಗೆ 9 ಗಂಟೆಗೆ ಕೋ-ವಿನ್ ಪೋರ್ಟಲ್ cowin.gov.in.ನಲ್ಲಿ ನೋಂದಣಿಗಳು ಶುರುವಾದ್ವು.
ಮೊದಲ ಎರಡು ಹಂತಗಳಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆಯವರೆಗೆ ದೇಶದಲ್ಲಿ 1,48,55,073 ಕೋವಿಡ್-19 ಲಸಿಕೆ ಡೋಸ್ʼಗಳನ್ನ ನೀಡಲಾಗಿದೆ. ಈ ಪೈಕಿ 67,04,856 ಆರೋಗ್ಯ ಆರೈಕೆ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದ್ದು, 25,98,192 ಹೆಲ್ತ್ ಕೇರ್ ಕಾರ್ಮಿಕರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ, ಇದುವರೆಗೆ 53,43,219 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 2,08,791 ಮಂದಿ ಹಾಗೂ 45-60 ವರ್ಷ ವಯಸ್ಸಿನವರು ಈ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ವಾರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು : ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಬಸ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ಮತ್ತೆ ಪ್ರತಿಭಟನೆಗಿಳಿಯಲಿದ್ದಾರೆ.
ಹೌದು. ಈ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ನಗರದ ಮೌರ್ಯ ಸರ್ಕಲ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಮತ್ತೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ನಮ್ಮ ಬೇಡಿಕೆ ಮಾರ್ಚ್ 15 ರ ಒಳಗೆ ಈಡೇರದಿದ್ದರೆ ಸರ್ಕಾರಕ್ಕೆ ನಾವು ಯೂ ಟರ್ನ್ ಹೊಡೆತೀವಿ, ಮಾರ್ಚ್ 15 ರ ಬಳಿಕ ಬಸ್ ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.,
ಹೆಂಡತಿ ಮಕ್ಕಳ ಸಮೇತ ರಸ್ತೆಗೆ ಇಳಿದು ಹೋರಾಟ ಮಾಡುತ್ತೇವೆ, ಸಾರಿಗೆ ಸಚಿವರೇ , ಮುಖ್ಯಮಂತ್ರಿಗಳೇ ಈಗಲೂ ಕೂಡ ಸಮಯ ಇದೆ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್ ಸ್ಫೋಟಗೊಂಡಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣವನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಹಿರಂಗವಾದ ಕೂಡಲೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಹೌದು, ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ರಮೇಶ್ ಜಾರಕಿಹೊಳಿ ಬೆಂಗಾವಲು ಪಡೆ ಬಿಟ್ಟು ಏಕಾಂಗಿಯಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ರಮೇಶ್ ಜಾರಕಿಹೊಳಿಯ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಇನ್ನೂ, ರಮೇಶ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಗೋಕಾಕ್ ವ್ಯಾಪ್ತಿಯಲ್ಲಿ ಕರೆಂಟ್ ಕಟ್ ಕೂಡ ಮಾಡಲಾಗಿದೆ.
ಸಾಮಾಜಿಕ ಕಾರ್ಯಕರ್ತ, ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ಜಲ ಸಂಪನ್ಮೂಲ ಸಚಿವರ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದು, ಸಚಿವರ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಬೆಂಗಳೂರು : ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು ,ಜೈನರು, ಬೌದ್ದ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಮುಂದುವರೆದು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಎಸ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಹೌದು, (Post-matric, Pre matric and Merit-cum-means Scholarship) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ SSP ( state scholarship portal ) ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದ್ದು, ದಿನಾಂಕ 31:03:2021 ರೊಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ,
.ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಆಯಾ ಕಾಲೇಜಿನ ‘E attestation’ ಆಫೀಸರ್ ಗಳಿಗೆ ಸೂಚನೆ ನೀಡಲಾಗಿದೆ.
ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ https://ssp.postmatric.karnataka.gov.in/ portal ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಿದ ಪ್ರತಿಯನ್ನು ಕಾಲೇಜು ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶಾಲಾ/ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್ ಸ್ಫೋಟಗೊಂಡಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣವನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ಜಲ ಸಂಪನ್ಮೂಲ ಸಚಿವರ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದು, ಸಚಿವರ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಪೊಲೀಸ್ ಆಯುಕ್ತರ ಕಛೇರಿಯಿಂದ ಹೊರ ಬಂದ ದಿನೇಶ್ ಕಲ್ಲಹಳ್ಳಿ, “ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ʼಗೆ ದೂರು ನೀಡಿದ್ದೇನೆ. ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದರಿಂದ, ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿ ಎಂದು ಆಯುಕ್ತರು ಸೂಚಿಸಿದ್ದಾರೆ. ಹಾಗಾಗಿ ಈಗ ಠಾಣೆಗೆ ತೆರಳಿ ದೂರು ನೀಡುತ್ತೇನೆ ಎಂದರು.
ಇನ್ನು ನನಗೆ ನಿನ್ನೆಯಷ್ಟೇ ಸಂತ್ರಸ್ತೆ ಕುಟುಂಬದವರಿಂದ ಮಾಹಿತಿ ಸಿಕ್ಕಿದ್ದು, ನ್ಯಾಯ ಕೊಡಿಸುವಂತೆ ನನಗೆ ಅವರು ಮನವಿ ಮಾಡಿದರು. ಹೀಗಾಗಿ ನೀರಾವರಿ ಸಚಿವ ರಮೇಶ್ ಜಾರಕಹೊಳಿ ವಿರುದ್ಧ ನಾನು ಆಯುಕ್ತರಿಗೆ ದೂರು ನೀಡಲು ಬಂದಿದ್ದೆ ಎಂದಿದ್ದಾರೆ.
ನವದೆಹಲಿ: ಮುಂಬೈ ನ್ಯಾಯಾಲಯಗಳಲ್ಲಿ ತನ್ನ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಸಹೋದರಿ ರಂಗೋಲಿ ಚಂದೇಲ್ ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ವಕೀಲ ನೀರಜ್ ಶೇಖರ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ದುರುದ್ದೇಶಪೂರಿತ ತಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಮುಂಬೈನಲ್ಲಿ ವಿಚಾರಣೆಗಳು ಮುಂದುವರಿದರೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ವಾದಿಸಿದರು.
ಕಂಗನಾ “ಜೀವ ಮತ್ತು ಆಸ್ತಿಗೆ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದ್ದು, ಪ್ರಕರಣಗಳನ್ನು ಮುಂಬೈನಿಂದ ವರ್ಗಾಯಿಸದಿದ್ದರೆ ಅವರ ಜೀವಕ್ಕೆ ಅಪಾಯವಿದೆ” ಅರ್ಜಿಯಲ್ಲಿ ತಿಳಿಸಲಾಗಿದೆ.
ಗುಜರಾತ್: ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ (ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ) ಮತ್ತು ಪ್ರತಿಪಕ್ಷದ ನಾಯಕ ಪರೇಶ್ ಧನಾನಿ (ರಾಜೀನಾಮೆ) ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆಯನ್ನ ಸ್ವೀಕರಿಸಿದೆ. ಹೊಸ ಅಧ್ಯಕ್ಷ ಮತ್ತು ಸಿಎಲ್ಪಿ ನಾಯಕನನ್ನು ಮಾರ್ಚ್ ಅಂತ್ಯದೊಳಗೆ ಘೋಷಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (ಗುಜರಾತ್ ಸ್ಥಳೀಯ ದೇಹ ಸಮೀಕ್ಷೆ ಫಲಿತಾಂಶ) ಬಿಜೆಪಿ ಪಕ್ಷ ಭರ್ಜರಿ ಗೆಲವು ಪಡೆದಿದ್ದು, ಕಾಂಗ್ರೆಸ್ʼನ ಹೀನಾಯ ಸೋಲಿನ ನಂತ್ರ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಮತ್ತು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಪರೇಶ್ ಧನಾನಿ ಅವರು ರಾಜೀನಾಮೆ ನೀಡಿದ್ದಾರೆ.
ಗುಜರಾತ್ನ 6 ಮೆಟ್ರೋಪಾಲಿಟನ್ ಪುರಸಭೆಗಳ ಚುನಾವಣೆಯಲ್ಲಿ ಭಾರಿ ಜಯಗಳಿಸಿದ ಒಂದು ವಾರದೊಳಗೆ, ಪುರಸಭೆ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ (ಗುಜರಾತ್ ಸ್ಥಳೀಯ ದೇಹ ಸಮೀಕ್ಷೆ ಫಲಿತಾಂಶ) ಬಿಜೆಪಿ ಜಯಗಳಿಸಿದೆ. ಪಾಟೀದಾರ್ ಮೀಸಲಾತಿ ಆಂದೋಲನದ ನಂತರ, 2015 ರಲ್ಲಿ ನಡೆದ ಈ ಚುನಾವಣೆಗಳಲ್ಲಿ ಕಾಂಗ್ರೆಸ್ (ಕಾಂಗ್ರೆಸ್) ಅದ್ಭುತ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಹೀನಾಯ ಸೋಲನ್ನ ಎದುರಿಸುತ್ತಿದೆ. ಮಹಾನಗರ ಪಾಲಿಕೆಯ ನಂತರ, ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆ ಕೂಡ ಬಹಳ ನಿರಾಶಾದಾಯಕವಾಗಿದೆ.
ತಿರುವನಂತಪುರಂ: 2016ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ನೋಟು ರದ್ಧತಿ ಕ್ರಮದಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯ ಅಸ್ತವ್ಯಸ್ತವಾಗಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಆಯೋಜಿಸಿದ್ದ ಅಭಿವೃದ್ಧಿ ಶೃಂಗಸಭೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ, ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯ ಅಸ್ತವ್ಯಸ್ತವಾಗಿದೆ. ಇದಕ್ಕೆ 2016 ರಲ್ಲಿ ಮೋದಿ ಸರ್ಕಾರ ತೆಗೆದುಕೊಂಡ ನೋಟು ರದ್ಧತಿ ಕಾರಣ ಎಂದು ಹೇಳಿದರು.
ಹರಿಯಾಣ: ಹರಿಯಾಣ ರಾಜ್ಯದ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಖಾಸಗಿ ಉದ್ಯೋಗಗಳಲ್ಲಿಯೂ 75ರಷ್ಟು ಮೀಸಲಾತಿ ಸಿಗಲಿದೆ ಎಂದು ಸ್ಪಷ್ಟಪಡಿಸಿದೆ.
ಹೌದು, ಖಾಸಗಿ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಬೇಕು ಅನ್ನೋ ಮಸೂದೆಗೆ ಹರಿಯಾಣ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿರುವ ನಿರುದ್ಯೋಗಿಗಳು ಖಾಸಗಿ ಕ್ಷೇತ್ರದಲ್ಲಿಯೂ ಆರಾಮವಾಗಿ ಉದ್ಯೋಗ ಗಳಿಸಬಹುದಾಗಿದೆ.
ನವದೆಹಲಿ: ಇಂದು ಕೃಷಿ ಸಚಿವ ಬಿ. ಸಿ ಪಾಟೀಲ್ ಲಸಿಕೆ ತೆಗೆದುಕೊಂಡಿದ್ದಾರೆ. ಆದ್ರೆ, ಇವ್ರು ತಮ್ಮ ಮನೆಗೇ ಆರೋಗ್ಯ ಸಿಬ್ಬಂದಿಯನ್ನ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದಿರೋದು ಸಧ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಧ್ಯ ಕೇಂದ್ರ ಸರ್ಕಾರ ಈ ಕುರಿತು ವರದಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್ ಅವ್ರು ಇಂದು ಸುದ್ದಿಗೋಷ್ಠಿಯಲ್ಲಿ ನಡೆಸಿದ್ದು, ಅಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಯ್ತು, ಇದಕ್ಕೆ ಉತ್ತರಿಸಿದ ಭೂಷಣ್, ಆರೋಗ್ಯ ಸಿಬ್ಬಂದಿಯನ್ನ ಮನೆಗೆ ಕರೆಸಿಕೊಂಡು ಲಸಿಕೆ ಸ್ವೀಕರಿಸುವುದಕ್ಕೆ ಶಿಷ್ಟಾಚಾರದಲ್ಲಿ ಅವಕಾಶವಿಲ್ಲ ನೀಡಿಲ್ಲ. ಹಾಗಾಗಿ ರಾಜ್ಯ ಸರ್ಕಾರದಿಂದ ವರದಿ ನೀಡುವಂತೆ ಕೇಳಿದ್ದೇವೆ ಎಂದಿದ್ದಾರೆ.
ಅಂದ್ಹಾಗೆ, ಪ್ರಧಾನಿ ನರೇಂದ್ರ ಮೋದಿಯೇ ಏಮ್ಸ್ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿರುವಾಗ, ಸಚಿವರು ಆಸ್ಪತ್ರೆಗೆ ತೆರಳದೇ ಆರೋಗ್ಯ ಸಿಬ್ಬಂದಿಯಿಂದ ಹೋಮ್ ಸರ್ವೀಸ್ ಪಡೆದಿದ್ದಾರೆಂದು ಟೀಕೆ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿ.ಸಿ ಪಾಟೀಲ್ ಉಡಾಫೆ ಉತ್ತರ ನೀಡಿದ್ದರು.
ನಾನು “ಆಸ್ಪತ್ರೆಗೆ ಹೋಗಿದ್ರೆ ಅರ್ಧ ಗಂಟೆ ಆಗ್ತಿತ್ತು. ಜನರಿಗೆ ತೊಂದರೆ ಆಗಬಾರದು ಅಂತ ಮನೆಯಲ್ಲೇ ಲಸಿಕೆ ಪಡೆದಿದ್ದೀನಿ. ನಾನೇ ಆರೋಗ್ಯಾಧಿಕಾರಿಯನ್ನ ಕರೆಸಿಕೊಂಡೆ. ಕೆಲವು ಹಕ್ಕು ಇರುತ್ತೆ ಬಳಸಿಕೊಂಡ್ರೆ ತಪ್ಪಾ” ಎಂದು ಪ್ರಶ್ನಿಸಿದ್ದರು.
Took the #COVID19Vaccine with my wife, at my Hirekerur house from the Govt. doctors today.
While 'Made In India' vaccines are being immensely appreciated by many countries, some vested interest groups are spreading false information about the vaccines.@DDChandanaNews | @DHFWKApic.twitter.com/yE6fYZTddJ
ಅಸ್ಸಾಂ : ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಅಸ್ಸಾಂಗೆ ಎರಡು ದಿನಗಳ ಪ್ರವಾಸ ತೆರಳಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಿಎಎ-ಎನ್ ಆರ್ ಸಿ (ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್) ಬಗ್ಗೆ ಮೌನ ಕ್ಕೆ ಜಾರಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತೇಜ್ ಪುರದಲ್ಲಿ ಮಂಗಳವಾರ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, “ಭಾರತದಾದ್ಯಂತ ಬಿಜೆಪಿ ಸಿಎಎ ಜಾರಿಗೆ ತರುವ ಬಗ್ಗೆ ಮಾತನಾಡುತ್ತಿದೆ, ಆದರೆ ಅದು ಅಸ್ಸಾಂನಲ್ಲಿ ಏಕೆ ಮೌನವಾಗಿದೆ ಎಂದು ಹೇಳಿದರು.
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಅಸ್ಸಾಂನ ಅಸ್ತಿತ್ವಕ್ಕೆ ಬೆದರಿಕೆ ಎಂದು ಬಣ್ಣಿಸಿದ ಪ್ರಿಯಾಂಕಾ ಗಾಂಧಿ, ರಾಜ್ಯದ ಏಕತೆಗೆ ಧಕ್ಕೆ ಬಂದಿದೆ ಎಂದು ಹೇಳಿದ್ದಾರೆ.
‘ದೇಶದ ಏಕತೆ ಮತ್ತು ಅಸ್ಸಾಂ ನಲ್ಲಿ ಏಕತೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮಸ್ಯೆ ಹೊಂದಿದ್ದಾರೆ. ದೇಶಾದ್ಯಂತ ಅವರು CAA-NRC ಬಗ್ಗೆ ಮಾತನಾಡಿದ್ದು, ಅಸ್ಸಾಂನಲ್ಲಿ ದ್ದಾಗ ಅವರು ಸುಮ್ಮನಿದ್ದದ್ದು ಏಕೆ? ಚುನಾವಣೆಗೂ ಮುನ್ನ ಅಸ್ಸಾಂನಲ್ಲಿ ಎನ್ ಆರ್ ಸಿ ಜಾರಿಮಾಡುವುದಿಲ್ಲ ಎಂದು ಬಿಜೆಪಿ ಹೇಳಿತ್ತು. ಅದು ಏನಾಯಿತು?” ಪ್ರಿಯಾಂಕಾ ಗಾಂಧಿ ಹೇಳಿದರು.
ಅಸ್ಸಾಂನಲ್ಲಿ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು ಮತ್ತು ಕೆಲವರು ಪ್ರತಿಭಟನೆಗಳಲ್ಲಿ ಪ್ರಾಣ ಕಳೆದುಕೊಂಡರು ಎಂದು ವರದಿಯಾಗಿದೆ. ಈ ಕಾನೂನು ತಮ್ಮ ಸಾಂಸ್ಕೃತಿಕ ಅಸ್ಮಿತೆ ಮತ್ತು ಜೀವನೋಪಾಯಕ್ಕೆ ಮಾರಕ ಎಂದು ಅವರು ಹೇಳಿದರು.
ಹಿಮಾಚಲ : ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಗ್ಯುಟೊ ತಾಂತ್ರಿಕ ಮೊನೆಸ್ಟ್ರಿಯಲ್ಲಿ 150ಕ್ಕೂ ಹೆಚ್ಚು ಸನ್ಯಾಸಿಗಳ ಕೋವಿಡ್-19 ಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಇದುವರೆಗೆ 300ಕ್ಕೂ ಹೆಚ್ಚು ಸನ್ಯಾಸಿಗಳು ಕರೋನವೈರಸ್ ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ ಎಂದು ಕಂಗ್ರಾ ಮುಖ್ಯ ವೈದ್ಯಾಧಿಕಾರಿ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
‘ಗಂಭೀರ ಸ್ಥಿತಿಯಲ್ಲಿರುವ ಒಬ್ಬ ಸನ್ಯಾಸಿಯನ್ನು ಟಾಂಡ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಉಳಿದವರು ಮಠದಲ್ಲೇ ಕ್ವಾರೆಂಟೈನ್ ಆಗಿದ್ದಾರೆ’ ಎಂದು ಕಾಂಗ್ರಾ ದ ಸಿ.ಎಂ.ಒ ಡಾ. ಗುರುದರ್ಶನ್ ಗುಪ್ತಾ ತಿಳಿಸಿದ್ದಾರೆ.
ಓರ್ವ ಸಂನ್ಯಾಸಿ ಹೊಸ ವರ್ಷಕ್ಕಾಗಿ ಕರ್ನಾಟಕ, ದೆಹಲಿಯಿಂದ ಪ್ರವಾಸ ಮಾಡಿದ್ದ. ಆತನನ್ನು ಹೋಮ್ ಐಸಲೋಶನ್ ನಲ್ಲಿ ಇರಿಸಲಾಗಿದೆ. ಮಾರ್ಚ್ 5ರಿಂದ ಸಂದರ್ಶಕರಿಗಾಗಿ ಮಠವನ್ನು ಮುಚ್ಚಲಾಗುತ್ತದೆ ಎಂದು ಡಾ. ಗುರುದರ್ಶನ್ ತಿಳಿಸಿದ್ದಾರೆ. ಇಂದು ಹಿಮಾಚಲ ಪ್ರದೇಶದಲ್ಲಿ ಒಟ್ಟು ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 434 ದಾಖಲಾಗಿದೆ.
ಬೆಂಗಳೂರು: ಸಾರಿಗೆ ಇಲಾಖೆ ನಿಮ್ಮ ಅಪ್ಪನ ಆಸ್ತಿ ಅಲ್ಲ. ಕರ್ನಾಟಕದ ಜನರ ಆಸ್ತಿ. ತಲೆ ತಿರುಗೋ ಹಾಗೇ ಮಾತಾಡೋದನ್ನ ಬಿಡಿ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ್ರ ಮೇಲೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಮೌರ್ಯ ಸರ್ಕಲ್ನಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, “ನಮ್ಮ ಬೇಡಿಕೆ ಒಂದೇ ಇರುತ್ತೆ. ಅದು ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎನ್ನುವುದು. ನಮ್ಮ ಬೇಡಿಕೆ ಮಾರ್ಚ್ 15 ರ ಒಳಗೆ ಈಡೇರಿಸಬೇಕು. ಇಲ್ಲವಾದ್ರೆ, ಮಾರ್ಚ್ 15 ರ ಬಳಿಕ ಬಸ್ ಬಂದ್ ಮಾಡಿ ಮುಷ್ಕರ ನಡೆಸಲಾಗುವುದು. ಈ ಹಿಂದೆ ಯಾವುದೇ ಸಿದ್ಧತೆ ಇಲ್ಲದೆ ಒಂದೇ ರಾತ್ರಿಯಲ್ಲಿ ಇಡೀ ಬಸ್ ಸಂಚಾರ ನಿಲ್ಲಿಸಿದ್ವಿ. ಈಗ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಇನ್ನು ” ನೌಕರರು 40 ವರ್ಷಗಳಿಂದ ನಿರಂತವಾಗಿ ಕೆಲಸ ಮಾಡ್ತಿದ್ದಾರೆ. ನೌಕರರ ವಿರುದ್ಧ ಸರ್ಕಾರ ಹಗಲು ದರೋಡೆ ಮಾಡ್ತಿದೆ. ನಮ್ಮ ಯುದ್ಧ ಅಹಿಂಸಾತ್ಮಕವಾಗಿ ಇರುತ್ತೆ. ಸಾರಿಗೆ ಇಲಾಖೆ ನಿಮ್ಮ ಅಪ್ಪನ ಆಸ್ತಿ ಅಲ್ಲ. ಕರ್ನಾಟಕದ ಜನರ ಆಸ್ತಿ. ತಲೆ ತಿರುಗೋ ಹಾಗೇ ಮಾತೋಡದನ್ನ ಬಿಡಿ. ಮಿಸ್ಟರ್ ಲಕ್ಷಣ್ ಸವದಿ ಅವರೇ ಪದೇ ಪದೇ ಮಾತಾಡ್ತೀರಾ, ಯಾರು ಅವ್ರು ಅಂತ ಪ್ರಶ್ನೆ ಮಾಡ್ತೀರಲ್ಲ. ಆವತ್ತು ಪ್ರತಿಭಟನೆ ವೇಳೆ ಸಂಜೆ ನೀವು ಸರ್ಕಾರದ ನಿಗಮದ ಅಧ್ಯಕ್ಷರು ಬಂದು ನಮಗೆ ಲವ್ ಲೆಟರ್ ಕೊಟ್ಟಿದ್ದೀರಾ (ಪತ್ರದ ಮೂಲಕ ಆಶ್ವಾಸನೆ ಕೊಟ್ಟಿದ್ದು). ಅವಾಗ ನಿಮ್ಮ ಜ್ಞಾನ ಎಲ್ಲಿತ್ತು..? ಅವಾಗ ಸರಿ ಇತ್ತಾ? ಎಂದು ಹರಿಹಾಯ್ದಿದ್ದಾರೆ.
ಚೆನ್ನೈ : ದಕ್ಷಿಣ ಭಾರತದ ಜನಪ್ರಿಯ ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ (ಎಂಎನ್ಎಂ) ಸಂಸ್ಥಾಪಕ ಕಮಲ್ ಹಾಸನ್ ಇಂದು ಚೆನ್ನೈನಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಹಾಕಿಸಿಕೊಂಡಿದ್ದಾರೆ.
ನಟ, ರಾಜಕಾರಣಿ ಕಮಲ್ ಹಾಸನ್ ಅವರು ತಮ್ಮ ಮೊದಲ ಡೋಸ್ ಅನ್ನು COVID-19 ಲಸಿಕೆಯನ್ನು ತೆಗೆದುಕೊಂಡಿರುವುದಾಗಿ ಮತ್ತು ಲಸಿಕೆಯನ್ನು ಪಡೆಯಬೇಕೆಂದು ಟ್ವೀಟ್ ಮಾಡುವ ಮೂಲಕ ಜನರಿಗೆ ಪ್ರೋತ್ಸಾಹ ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ‘ಶ್ರೀ ರಾಮಚಂದ್ರ ಆಸ್ಪತ್ರೆಯಲ್ಲಿ ಕೊರೋನವೈರಸ್ ಗೆ ಲಸಿಕೆ ಹಾಕಿಸಿದ್ದೇನೆ. ತಮ್ಮ ಬಗ್ಗೆ ಮಾತ್ರವಲ್ಲ, ಇತರರ ಬಗ್ಗೆಯೂ ಕಾಳಜಿ ವಹಿಸುವವರು ಅದನ್ನು ಹಾಕಿಸಿಕೊಳ್ಳಬೇಕು… ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ ಹಾಕಲು ರೆಡಿಯಾಗುತ್ತೇನೆ ಎಂದರು.
ಮುಂಬರಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಘೋಷಿಸಿದ್ದು, ನಾಳೆಯಿಂದ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಡಿಜಿಟಲ್ ಡೆಸ್ಕ್: ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) 2020-21ನೇ ಹಣಕಾಸು ವರ್ಷದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನ ಮಾರ್ಚ್ 4ರಂದು ಪ್ರಕಟಿಸುವ ಸಾಧ್ಯತೆ ಇದೆ.
ಕೋವಿಡ್-19 ಆರ್ಥಿಕ ಕುಸಿತ ನಂತರ ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನ ನಿವೃತ್ತಿ ಸಂಸ್ಥೆಯು ಕಡಿಮೆ ಮಾಡಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಅಂದ್ಹಾಗೆ, ಇಪಿಎಫ್ ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನ 2019-20ನೇ ಸಾಲಿನಲ್ಲಿ 7 ವರ್ಷಗಳ ಕಡಿಮೆ ಬಡ್ಡಿದರದಲ್ಲಿ ಶೇ.8.5ಕ್ಕೆ ಇಳಿಸಿತ್ತು. ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ಶೇ.8.5ಬಡ್ಡಿಯನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಮಂಡಳಿ ಈ ಹಿಂದೆ ಹೇಳಿತ್ತು.
“ಇದು ಸಾಲದ ಆದಾಯದಿಂದ 8.15% ಮತ್ತು ಉಳಿದ 0.35% ನಷ್ಟು (ಲಾಭಗಳು) ಇಟಿಎಫ್ ಗಳ (ವಿನಿಮಯ-ವ್ಯಾಪಾರೀ ನಿಧಿಗಳು) ಮಾರಾಟದಿಂದ ಶೇ.0.35ರಷ್ಟು (ಲಾಭಗಳು) ಒಳಗೊಂಡಿರುತ್ತದೆ. ಇದು ಡಿಸೆಂಬರ್ 31, 2020ರ ವೇಳೆಗೆ ಅವರ ವಿಮೋಚನೆಗೆ ಒಳಪಟ್ಟಿರುತ್ತದೆ ಎಂದು ನಿವೃತ್ತಿ ನಿಧಿ ತಿಳಿಸಿತ್ತು.
ಕೋಲ್ಕತ್ತಾ : ಗೋಹತ್ಯೆ ಮತ್ತು ಲವ್ ಜಿಹಾದ್ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ತರಾಟೆಗೆ ತೆಗೆದುಕೊಂಡು, ರಾಜ್ಯದಲ್ಲಿ ಗೋ ಹತ್ಯೆ ಮತ್ತು ಲವ್ ಜಿಹಾದ್ ಅನ್ನು ತಡೆಯಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
‘ಇಲ್ಲಿ (ಪಶ್ಚಿಮ ಬಂಗಾಳ) ‘ಲವ್ ಜಿಹಾದ್’ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ನಾವು ಕಾನೂನು ಮಾಡಿದೆವು. ಆದರೆ ಇಲ್ಲಿ (ಪಶ್ಚಿಮ ಬಂಗಾಳ) ಸಮಾಧಾನದ ರಾಜಕಾರಣವಿದೆ. ಆದ್ದರಿಂದ ಗೋ ಕಳ್ಳಸಾಗಣೆ ಮತ್ತು ಲವ್ ಜಿಹಾದ್ (ಲವ್ ಜಿಹಾದ್) ತಡೆಯಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
2021ರ ವಿಧಾನಸಭೆ ಚುನಾವಣೆ ಗೂ ಮುನ್ನ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ರ್ಯಾಲಿಯಲ್ಲಿ ಯೋಗಿ ಆದಿತ್ಯನಾಥ್ ಮಾತನಾಡುತ್ತಿದ್ದರು.
ಯೋಗಿ ಆದಿತ್ಯನಾಥ್ ಮಾತನಾಡಿ, ಪ.ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ನಿಷೇಧಿಸಲಾಗಿದೆ. ಈದ್ ಸಮಯದಲ್ಲಿ ಗೋಹತ್ಯೆ ಮಾಡಲಾಗುತ್ತದೆ. ಹಸು ಕಳ್ಳಸಾಗಣೆ ಮೂಲಕ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಘಟನಾವಳಿಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಮೌನವಾಗಿದೆ. ಆದರೀಗ ರಾಜ್ಯದಲ್ಲಿ ಜೈಶ್ರೀ ರಾಮ್ ಘೋಷಣೆ ನಿಷೇಧಿಸಲು ಮಮತಾ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಯೋಗಿ ಗುಡುಗಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, “ಉತ್ತರ ಪ್ರದೇಶದಲ್ಲಿ ಶ್ರೀರಾಮ ಭಕ್ತರ ಮೇಲೆ ಗುಂಡು ಹಾರಿಸುವ ಸರ್ಕಾರವಿದೆ ಎಂದು ನಾನು ಬಂಗಾಳ ಸರ್ಕಾರಕ್ಕೆ ತಿಳಿಸಬಯಸುತ್ತೇನೆ. ಈಗ ಆ ಸರ್ಕಾರದ ಸ್ಥಿತಿ ಹೇಗಿದೆ ಎಂದು ನೀವು ನೋಡಬಹುದು. ಈಗ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಸರದಿ.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕತ್ವ ಮತ್ತು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಬಂಗಾಳಿ ಸಹೋದರ ಸಹೋದರಿಯರನ್ನು ಸಂಪರ್ಕಿಸಲು ಇಲ್ಲಿಗೆ ಬಂದಿದ್ದಾರೆ ಮತ್ತು ಈ ಮೂಲಕ ಬಂಗಾಳದ ಅಸ್ಮಿತೆಯನ್ನು ಮರುಸ್ಥಾಪಿಸಲು ಮತ್ತು ಈ ಮೂಲಕ ಹೊಸ ಬದಲಾವಣೆಯನ್ನು ತರಲು ಪ್ರಯತ್ನಿಸುವರು ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತವಿರುವ ಸರ್ಕಾರದ ವಿರುದ್ಧ ಕಿಡಿ ಕಾರಿ ಯುಪಿ ಸಿಎಂ, “ಪಶ್ಚಿಮ ಬಂಗಾಳವು ಭಾರತದಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆಯ ನಾಡು. ಇದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಭೂಮಿಯಾಗಿದೆ. ಇಂದು, ಇಲ್ಲಿ ಅರಾಜಕತೆಯ ವಾತಾವರಣ ನೋಡಿದಾಗ ಇಡೀ ದೇಶಕ್ಕೆ ನೋವನ್ನುಂಟು ಮಾಡುತ್ತದೆ.” ಎಂದು ಹೇಳಿದರು.
ಸ್ಪೆಷಲ್ ಡೆಸ್ಕ್ : ಪುರುಷರು ಶೇವಿಂಗ್ ಮಾಡುವಾಗ ಕುತ್ತಿಗೆ ಭಾಗದಲ್ಲಿ ರೇಜರ್ನಿಂದ ಕೆಲವು ಗಾಯಗಳಾಗುತ್ತವೆ. ಸರಳವಾಗಿ ಹೇಳುವುದಾದರೆ ತುಂಬಾ ಉದ್ದವಾಗಿ ಬೆಳೆದ ಕೂದಲು ತುಂಡಾದಾಗ ಆ ಭಾಗದಲ್ಲಿರುವ ಚರ್ಮ ಉರಿಯುತ್ತದೆ. ಹಾಗೂ ಉದ್ದ ಕೂದಲು ಕ್ರಮೇಣ ಗುಂಗುರಾಗಿ ಹಿಮ್ಮುಖಕ್ಕೆ ಹೋಗುತ್ತವೆ. ಬಳಿಕ ಇದು ಚರ್ಮಕ್ಕೆ ಸ್ಪರ್ಶಿಸಿ ನೋವನ್ನುಂಟು ಮಾಡುತ್ತದೆ.
ದೇಹವು ಈ ಕೂದಲನ್ನು ಅನ್ಯ ವಸ್ತುವನ್ನಾಗಿ ನೋಡುತ್ತದೆ. ಈ ಪರಿಣಾಮ ಆ ಭಾಗದಲ್ಲಿ ಗಾಯವಾಗುತ್ತದೆ. ಇದನ್ನು ತಡೆಯಲು ಇಲ್ಲಿದೆ ಟಿಪ್ಸ್.
ಶೇವಿಂಗ್ ಮಾಡುವ ಮೊದಲು ಬಿಸಿ ನೀರಿನಲ್ಲಿ ಶವರ್ ಬಾತ್ ಮಾಡಿ. ಬಿಸಿ ಮತ್ತು ತೇವಾಂಶವು ಮುಖದ ಕೂದಲನ್ನು ಮೃದುವಾಗಿಸುತ್ತದೆ ಮತ್ತು ಚರ್ಮದ ರಂಧ್ರಗಳನ್ನು ತೆರೆಯುತ್ತವೆ. ಇದರಿಂದ ರೇಜರ್ ಬಳಸುವಾಗ ಯಾವುದೇ ಗಾಯಗಳಾಗುವುದಿಲ್ಲ.
ಇದೇ ರೀತಿ ಶೇವಿಂಗ್ ಮಾಡುವ ಮೊದಲು ಕುತ್ತಿಗೆಗೆ ಶೇವಿಂಗ್ ಜೆಲ್ ಬಳಸಿ. ಇದು ರೇಜರ್ನ ಬ್ಲೇಡ್ಗಳನ್ನು ನಯಗೊಳಿಸುತ್ತದೆ. ಈ ಪರಿಣಾಮ ಕೂದಲಿನ ಎಳೆಗಳು ಘರ್ಷಣೆಯಾಗುವುದು ಅಥವಾ ಹಿಮ್ಮುಖವಾಗಿ ಗುಂಗುರಾಗುವುದು ಕಡಿಮೆಯಾಗುತ್ತದೆ. ಕ್ರೀಮ್ಗಳನ್ನು ಬಳಸುವುದಕ್ಕಿಂತ ಜೆಲ್ ಬಳಕೆ ಉತ್ತಮ.
ಗಡ್ಡವನ್ನು ಶೇವಿಂಗ್ ಮಾಡುವಾಗ ಲೈಟ್ ಸ್ಟ್ರೋಕ್ ಬಳಸಿ. ರೇಜರ್ನ ತಲೆಯನ್ನು ನೀವು ಚರ್ಮಕ್ಕೆ ಹತ್ತಿರವಾಗಿರಿಸಿ ಒತ್ತಿದರೆ ಕ್ಲೋಸರ್ ಶೇವಿಂಗ್ ಮಾಡಬಹುದು. ಆದರೆ ಇದು ಅತಿಯಾದರೆ ಕೂದಲು ಅರ್ಧದಲ್ಲಿಯೇ ತುಂಡಾಗಿ ಹಿಮ್ಮುಖವಾಗಿ ಸುರುಳಿ ಸುತ್ತುತ್ತಾ ಹೋಗುತ್ತದೆ.
ಸಾಧ್ಯವಾದರೆ ರಾತ್ರಿ ವೇಳೆ ಶೇವಿಂಗ್ ಮಾಡಿ. ಈ ಸಂದರ್ಭದಲ್ಲಿ ನಿಮ್ಮ ಕುತ್ತಿಗೆಗೆ ಗ್ಲೈಕೊಲಿಕ್ ಆಸಿಡ್ ಹಚ್ಚಿ. ಇದು ಚರ್ಮವನ್ನು ಚೆನ್ನಾಗಿ ಎಕ್ಸ್ಫಾಲಿಯೇಟ್ ಮಾಡುತ್ತದೆ ಮತ್ತು ರೇಜರ್ನಿಂದ ಗಾಯಗಳಾದಂತೆ ತಡೆಯುತ್ತದೆ.
ಟೆಟ್ರಾಸೈಕ್ಲಿನ್ಗಳಿರುವ ಗುಳಿಗೆಗಳು ಶೇವಿಂಗ್ ಮಾಡಿದ ಉಂಟಾಗುವ ಉರಿಯನ್ನು ಕಡಿಮೆಗೊಳಿಸುತ್ತವೆ. ಇದು ಗಾಯವನ್ನು ವಾಸಿ ಮಾಡುವುದರ ಜೊತೆಗೆ ಚರ್ಮಕ್ಕೂ ಹೊಸ ಕಳೆ ನೀಡುತ್ತದೆ.
ಬೆಂಗಳೂರು: ಯಾವ ನಾಯಕರ ವಿರುದ್ಧವೂ ಯಾರೂ ಬಹಿರಂಗವಾಗಿ ಮಾತನಾಡಬಾರದು. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಬೇಕು. ಇದರ ಬಗ್ಗೆ ಶಿಸ್ತುಕ್ರಮ ಕೈಗೊಳ್ತೇನೆ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಅಖಂಡ ಶ್ರೀನಿವಾಸ್ ಅವ್ರು ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಹೈಕಮಾಂಡ್ʼಗೆ ದೂರು ನೀಡುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಅಖಂಡ ಶ್ರೀನಿವಾಸ್ ಮೂರ್ತಿ ಇರಬಹುದು, ಯಾರೇ ಇರಬಹುದು. ಯಾವ ನಾಯಕರ ವಿರುದ್ಧವೂ ಯಾರೂ ಬಹಿರಂಗವಾಗಿ ಮಾತನಾಡಬಾರದು. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಬೇಕು. ಇದರ ಬಗ್ಗೆ ಶಿಸ್ತುಕ್ರಮ ಕೈಗೊಳ್ತೇನೆ ಎಂದಿದ್ದಾರೆ.
ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು, ಇಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ ₹4,442 ರೂಪಾಯಿ ದಾಖಲಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹42,100 ರೂಪಾಯಿ ನಿಗದಿಯಾಗಿದೆ. 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹45,930 ರೂ ತಲುಪಿದೆ.
ಬೆಂಗಳೂರು: ಕೃಷಿ ಸಚಿವ ಬಿ. ಸಿ ಪಾಟೀಲ್ ತಮ್ಮ ಮನೆಗೇ ಆರೋಗ್ಯ ಸಿಬ್ಬಂದಿಯನ್ನ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದಿದ್ದು, ಸಧ್ಯ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಸಿಎಂ ಯಡಿಯೂರಪ್ಪನವ್ರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅವ್ರು ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ ಎಂದರು.
ಪೂರ್ಣ ಪ್ರಜ್ಞ ಲೇಔಟ್ʼನ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಿಎಸ್ವೈ, “ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳೋದು ಮುಖ್ಯ. ಹೀಗಾಗಿ ಯಾರ್ಯಾರಿಗೆ ಎಲ್ಲಿಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ. ನಾನು ಮನೇಲಿ ಲಸಿಕೆ ಹಾಕಿಸಿಕೊಳ್ಳಬೇಕಾ? ಅಥವಾ ಆಸ್ಪತ್ರೆಗೆ ಹೋಗಿ ಹಾಕಿಸಿಕೊಳ್ಬೇಕಾ ಎಂದು ನೋಡುತ್ತೇನೆ. ಇನ್ನೆರಡು ದಿನಗಳಲ್ಲಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ” ಎಂದಿದ್ದಾರೆ.
ಜೈಪುರ : ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಲು ಇಂದು ರಾಜಸ್ಥಾನಕ್ಕೆ ಆಗಮಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಮತ್ತು ಇತರ ನಾಯಕರು ವಿಮಾನ ನಿಲ್ದಾಣದಲ್ಲಿ ನಡ್ಡಾ ಅವರನ್ನು ಬರಮಾಡಿಕೊಂಡಿದ್ದಾರೆ. . ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಇತರ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ಏರ್ಪೋರ್ಟ್ನಿಂದ ಬಿರ್ಲಾ ಸಭಾಂಗಣಕ್ಕೆ ತೆರಳಿರುವ ನಡ್ಡಾ, ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು ಮತ್ತು ಜಿಲ್ಲಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.
ಡಿಜಿಟಲ್ ಡೆಸ್ಕ್: ಯಾವ ಕೋರ್ಸ್ʼಗೆ ಹೋಗಬೇಕು ಅನ್ನೋ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ರೆ, ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. 10, 12ನೇ ತರಗತಿ, ಪದವಿ ಹಂತ, ಕಾನೂನು, ಎಂಜಿನಿಯರಿಂಗ್, ಬ್ಯಾಂಕಿಂಗ್ ಮತ್ತು ಆರ್ಟ್ಸ್ ಕ್ಷೇತ್ರದ ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನ ಪಟ್ಟಿ ಮಾಡಿದ್ದೇವೆ. ಅದು ಈ ಕೆಳಗಿನಂತಿದೆ.
ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಪ್ರಧಾನಿ ಸೇರಿ 45 ವರ್ಷ ಮೇಲ್ಪಟ್ಟ ಸಚಿವರು, ಸಂಸದರು ಲಸಿಕೆ ಸ್ವೀಕರಿಸುತ್ತಿದ್ದಾರೆ. ಅದ್ರಂತೆ, ಇಂದು ಕೃಷಿ ಸಚಿವ ಬಿ. ಸಿ ಪಾಟೀಲ್ ಲಸಿಕೆ ತೆಗೆದುಕೊಂಡಿದ್ದಾರೆ. ಆದ್ರೆ, ಇವ್ರು ತಮ್ಮ ಮನೆಗೇ ಆರೋಗ್ಯ ಸಿಬ್ಬಂದಿಯನ್ನ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದಿರೋದು ಸಧ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ದೇಶದ ಪ್ರಧಾನಿಯೇ ಏಮ್ಸ್ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿರುವಾಗ, ಸಚಿವರು ಆಸ್ಪತ್ರೆಗೆ ತೆರಳದೇ ಆರೋಗ್ಯ ಸಿಬ್ಬಂದಿಯಿಂದ ಹೋಮ್ ಸರ್ವೀಸ್ ಪಡೆದಿದ್ದಾರೆಂದು ಟೀಕೆ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿ. ಸಿ ಪಾಟೀಲ್ ಉಡಾಫೆ ಉತ್ತರ ನೀಡಿದ್ದಾರೆ.
ಹೌದು, ನಾನು “ಆಸ್ಪತ್ರೆಗೆ ಹೋಗಿದ್ರೆ ಅರ್ಧ ಗಂಟೆ ಆಗ್ತಿತ್ತು. ಜನರಿಗೆ ತೊಂದರೆ ಆಗಬಾರದು ಅಂತ ಮನೆಯಲ್ಲೇ ಲಸಿಕೆ ಪಡೆದಿದ್ದೀನಿ. ನಾನೇ ಆರೋಗ್ಯಾಧಿಕಾರಿಯನ್ನ ಕರೆಸಿಕೊಂಡೆ. ಕೆಲವು ಹಕ್ಕು ಇರುತ್ತೆ ಬಳಸಿಕೊಂಡ್ರೆ ತಪ್ಪಾ” ಎಂದಿದ್ದಾರೆ.
ನಿಯಮಗಳ ಅನ್ವಯ ಎಲ್ಲರೂ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳ ಕೊರೊನಾ ಲಸಿಕೆ ಕೇಂದ್ರಗಳಿಗೆ ತೆರಳಿ ವ್ಯಾಕ್ಸಿನ್ ಪಡೆಯಬೇಕು. ಆದ್ರೆ, ಇಂದು ಬಿ.ಸಿ.ಪಾಟೀಲ್ ಮತ್ತವರ ಪತ್ನಿ ವನಜಾ ಪಾಟೀಲ್ ಆರೋಗ್ಯಾಧಿಕಾರಿಯನ್ನ ಕರೆಸಿಕೊಂಡೆ ಲಸಿಕೆ ಪಡೆದಿದ್ದಾರೆ.
ಶ್ರೀನಗರ: ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಕೆಲದಿನಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಜಮ್ಮು ಕಾಶ್ಮೀರದಲ್ಲಿ ಆಜಾದ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅವರ ಪ್ರತಿಕೃತಿ ದಹಿಸಿದ್ದಾರೆ.
“ಕಾಂಗ್ರೆಸ್ ಅವರನ್ನು ಅತ್ಯಂತ ಗೌರವದಿಂದ ನೋಡಿದೆ. ಆದರೆ ಇಂದು ಅವರು ಬಿಜೆಪಿಯೊಂದಿಗೆ ಸ್ನೇಹವನ್ನು ರೂಪಿಸಿಕೊಂಡರು. ಅವರು ಡಿಡಿಸಿ ಚುನಾವಣಾ ಪ್ರಚಾರಕ್ಕಾಗಿ ಬರಲಿಲ್ಲ. ಪ್ರಧಾನ ಮಂತ್ರಿಯನ್ನು ಹೊಗಳಲು ಬಂದಿದ್ದಾರೆ ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಗುಲಾಮ್ ನಬಿ ಆಜಾದ್ ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ ಪ್ರಧಾನಿಯವರನ್ನು ಹೊಗಳುತ್ತಾ, “ನರೇಂದ್ರ ಮೋದಿ ಪ್ರಧಾನಿಯಾದರೂ ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ. ಇನ್ನು ಪ್ರಧಾನಿಯಾದರೂ ತಾವು ಚಾಯ್ವಾಲಾ ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ” ಎಂದು ಹೇಳಿದ್ದರು. ಇದರಿಂದ ದೇಶಾದ್ಯಂತ ಕೈ ನಾಯಕರು ಕಿಡಿ ಕಾರಿದ್ದರು.
ಅಸ್ಸಾಂ : ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಅಸ್ಸಾಂಗೆ ಎರಡು ದಿನಗಳ ಭೇಟಿ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಸಹೋದರ ರಾಹುಲ್ ಗಾಂಧಿಯಂತೆ ಕಾರ್ಮಿಕರ ಜೊತೆ ಕೈ ಜೋಡಿಸಿದ್ದಾರೆ. ಪ್ರಿಯಾಂಕಾ ಅವರು ಭೇಟಿ ವೇಳೆ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಬುಟ್ಟಿ ಹಿಡಿದು ಚಹಾ ಕಿತ್ತ ಫೋಟೋ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಹಿಂದೂ ಮಹಾಸಾಗರದಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ತಮಿಳುನಾಡಿನ ಮೀನುಗಾರರೊಂದಿಗೆ ಈಜುತ್ತಿರುವ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಚಹಾ ತೋಟದಲ್ಲಿ, ಪ್ರಿಯಾಂಕಾ ಅವರು ಕಾರ್ಯಕರ್ತರೊ೦ದಿಗೆ ಸಂವಾದ ನಡೆಸಿ, “ಅವರ ಚಿಂತೆಗಳು ಮತ್ತು ಆತಂಕಗಳು, ಅವರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಚಹಾ ತೋಟಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕಾರ್ಯಕರ್ತರ ಪ್ರೀತಿ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
‘ಟೀ ತೋಟದ ಕಾರ್ಮಿಕರ ಬದುಕು ಸತ್ಯ ಮತ್ತು ಸರಳತೆಯಿಂದ ತುಂಬಿದ್ದು, ಅವರ ಶ್ರಮ ದೇಶಕ್ಕೆ ಅಮೂಲ್ಯವಾಗಿದೆ. ಇಂದು ಅವರ ಕೆಲಸ ಮತ್ತು ಕುಟುಂಬದ ಯೋಗಕ್ಷೇಮದ ಬಗ್ಗೆ ಅವರೊಂದಿಗೆ ಮಾತನಾಡಿದೆ ಮತ್ತು ಅವರ ಜೀವನದ ಕಷ್ಟಗಳನ್ನು ಅರಿತುಕೊಂಡೆ. ಅವರಿಂದ ನನಗೆ ದೊರೆತ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
ಕೆಎನ್ ಎನ್ ಡೆಸ್ಕ್ : ಕೆಂಪು ಬಾಳೆಹಣ್ಣಿನಲ್ಲಿ ಸಾಕಷ್ಟು ನಾರಿನಂಶ ಮತ್ತು ಉತ್ತಮ ಕಾರ್ಬೋಹೈಡ್ರೇಟ್ ಗಳನ್ನು ಒಳಗೊಂಡಿರುವ ಅತ್ಯಂತ ಆರೋಗ್ಯಕರ ಹಣ್ಣಾಗಿದ್ದು, ಇವು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಮತ್ತು ಇದರಲ್ಲಿ ಹೆಚ್ಚಿನ ನಾರಿನಂಶವಿದೆ. ಅವು ನಿಧಾನವಾಗಿ ಸಕ್ಕರೆಯನ್ನು ಬಿಡುಗಡೆ ಮಾಡಿ ನಿಮ್ಮ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ B6 ಜೀವಸತ್ವ ಮತ್ತು ವಿಟಮಿನ್ ಡಿ ಅಂಶವೂ ಇದ್ದು, ಕೆಂಪು ರಕ್ತ ಕಣಗಳು ಮತ್ತು ಪ್ರೋಟೀನ್ ಗಳ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.
ಕೆಂಪು ಬಾಳೆಹಣ್ಣುಗಳ ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ
ತೂಕ ಇಳಿಕೆಗೆ ಸಹಾಯ ಮಾಡುತ್ತದೆ
ಕೆಂಪು ಬಾಳೆಹಣ್ಣಿನಲ್ಲಿ ಹೆಚ್ಚಿನ ನಾರಿನಂಶವಿದ್ದು, ಇದು ನಿಮ್ಮನ್ನು ಹೆಚ್ಚು ಹೊತ್ತು ಹೊಟ್ಟೆ ತುಂಬಿಸುತ್ತದೆ. ಒಂದು ಇಡೀ ಕೆಂಪು ಬಾಳೆಹಣ್ಣಿನಲ್ಲಿ ಕೇವಲ 90 ರಿಂದ 100 ಕ್ಯಾಲೋರಿಗಳು ಮತ್ತು ಉತ್ತಮ ಕಾರ್ಬೋಹೈಡ್ರೇಟ್ ಗಳು ಇದ್ದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಮೂತ್ರ ಪಿಂಡದ ಕಲ್ಲುಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ
ಮೂತ್ರಪಿಂಡದ ಕಲ್ಲುಗಳು ಉತ್ಪತ್ತಿಯಾಗದಂತೆ ಪೊಟ್ಯಾಶಿಯಂ ಸಹಾಯ ಮಾಡುತ್ತದೆ. ಕೆಂಪು ಬಾಳೆಹಣ್ಣು ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಇದು ಮೂಳೆಗಳ ಬೆಳವಣಿಗೆಗೆ ಒಳ್ಳೆಯದು ಮತ್ತು ಅವುಗಳನ್ನು ಸದೃಢವಾಗಿರಿಸುತ್ತದೆ.
ಧೂಮಪಾನ ತ್ಯಜಿಸಲು ಸಹಾಯ ಮಾಡುತ್ತದೆ
ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಗಳು ನಿಕೋಟಿನ್ ಅನ್ನು ಹಿಂತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಧೂಮಪಾನದ ತುಡಿತವನ್ನು ನಿಭಾಯಿಸಲು ಇವು ನೆರವಾಗುತ್ತವೆ. ಇವು ಮಾನಸಿಕ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುವ ಶಕ್ತಿ ಮತ್ತು ತೃಪ್ತಿಯ ಭಾವನೆಯನ್ನು ನೀಡುತ್ತವೆ.
ನಿಮ್ಮ ಚರ್ಮಕ್ಕೆ ಅತ್ಯುತ್ತಮ
ಕೆಂಪು ಬಾಳೆಹಣ್ಣು ಗಳು ಕೇವಲ ತಿನ್ನುವುದಕ್ಕೆ ಆರೋಗ್ಯಕರ ಮಾತ್ರವಲ್ಲ, ಇದನ್ನು ಮುಖಕ್ಕೆ ಲೇಪಿಸಿದಾಗ ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಸುಲಭವಾದ ಮತ್ತು ಪರಿಣಾಮಕಾರಿಯಾದ ಫೇಸ್ ಮಾಸ್ಕ್ ತಯಾರಿಸಲು ಇರುವ ಒಂದು ವಿಧಾನವೆಂದರೆ, ಪವರ್ಡ್ ಓಟ್ಸ್, ಜಜ್ಜಿದ ಕೆಂಪು ಬಾಳೆಹಣ್ಣು ಮತ್ತು ಕೆಲವು ಹನಿ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ ಮತ್ತು ನಂತರ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚಾಗಲಿದೆ.
ನಿಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ
ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಗಳು ಸಮೃದ್ಧವಾಗಿದ್ದು, ಇದು ರಕ್ತದ ಗುಣಮಟ್ಟ ವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಹಿಮೋಗ್ಲೋಬಿನ್ ಗಣನೆಯನ್ನು ಹೆಚ್ಚಿಸುತ್ತದೆ. ಕೆಂಪು ಬಾಳೆಹಣ್ಣು ನಿಮಗೆ ಶಕ್ತಿ ನೀಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ ಬಿ-6 ವಿಟಮಿನ್ ಇದ್ದು, ಇದು ಪ್ರೋಟೀನ್ ಗಳ ವಿಭಜನೆ ಮತ್ತು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ.
ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ತಿರುಚಿದ ಪ್ರಕರಣದ ಸಂಬಂಧ ಬಂಧಿತರಾಗಿದ್ದ ಬಾರ್ಕ್ ಸಂಸ್ಥೆಯ ಮಾಜಿ ಮುಖ್ಯಸ್ಥ ಪಾರ್ಥೊ ದಾಸ್ಗುಪ್ತಾಗೆ ಬಾಂಬೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬಾರ್ಕ್ ಸಂಸ್ಥೆಯ ಮಾಜಿ ಸಿಇಒ ಪಾರ್ಥೊ ದಾಸ್ಗುಪ್ತಾಗೆ ಬಾಂಬೇ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, 2ಲಕ್ಷ ರೂ ಭದ್ರತಾ ಠೇವಣಿ ಯ ಬಾಂಡ್ ಮತ್ತು ಇಷ್ಟೇ ಹಣಕ್ಕೆ ಇಬ್ಬರ ಶೂರಿಟಿ ಕೇಳಿದೆ.
ಪಾರ್ಥೊ ದಾಸ್ಗುಪ್ತಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ನ ನ್ಯಾಯಧೀಶ ಪಿ.ಡಿ.ನಾಯಕ್ ಅವರು, ‘ಎರಡು ಲಕ್ಷ ರೂ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಎರಡು ಭದ್ರತಾ ಠೇವಣಿಗಳನ್ನು ಇಡುವಂತೆ ಸೂಚಿಸಿ, ಆರೋಪಿ ದಾಸ್ಗುಪ್ತಾ (55 ವರ್ಷ) ಅವರಿಗೆ ಜಾಮೀನು ಮಂಜೂರು ಮಾಡಿದರು.
ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ 24 ಅವರನ್ನು ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು.
ಧಾರವಾಡ: ನಮ್ಮ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಎಂಬ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ನಲವಗುಂದ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾತನಾಡಿದ ಸಚಿವರು, ‘ನಮ್ಮ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಅನ್ನೋ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ. ಇದರಲ್ಲಿ ರೈತನ ಫೋಟೋ, ಆಧಾರ ಸಂಖ್ಯೆ, ಊರು, ವಿಳಾಸ ದಾಖಲಾಗಿರುತ್ತದೆ. ಕ್ಯೂ ಆರ್ ಕೋಡ್ ಇರುತ್ತೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 1.5 ಲಕ್ಷ ರೈತರಿಗೆ ಈ ಕಾರ್ಡ್ವಿತರಿಸಲಾಗುತ್ತಿದ್ದು ಮುಂದೆ ರಾಜ್ಯದ 68 ಲಕ್ಷ ರೈತರಿಗೆ ವಿಸ್ತರಿಸಲಾಗುವುದು’ ಎಂದರು.
ನ್ಯೂಸ್ ಡೆಸ್ಕ್ : ಕೊನೆಯ ಬಾರಿ ಹುಲಿ ಯೊಂದು ಹಾಡುವುದನ್ನು ನೀವು ಯಾವಾಗ ಕೇಳಿದ್ದೀರಿ? ಎಂದೂ ಇಲ್ಲ. ಆದರೆ ನೀವು ಸೈಬೀರಿಯನ್ ನಗರವಾದ ಬಾರ್ನೌಲ್ ಗೆ ಭೇಟಿ ನೀಡಿದರೆ, ನೀವು 8 ತಿಂಗಳ ಹುಲಿ ಮರಿ ಹಾಡುವುದನ್ನು ನೋಡಿ ಖಂಡಿತವಾಗಿಯೂ ಅಚ್ಚರಿ ಪಡುತ್ತೀರಿ.
ಬಾರ್ನೌಲಿಸ್ ನ ಮೃಗಾಲಯವೊಂದರಲ್ಲಿ ವಿಟಾಸ್ ಹೆಸರಿನ ಹುಲಿಯೊಂದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ತನ್ನ ‘ಸಂಗೀತದ’ ಮೂಲಕ ಇದೀಗ ನೆಟ್ಟಿಗರ ಮನಗೆಲ್ಲುವಲ್ಲಿಯೂ ಯಶಸ್ವಿಯೂ ಆಗಿದೆ.
ಬಾರ್ನೌಲ್ ನ ಲೆಸ್ನಾಯಾ ಸ್ಕಾಜ್ಕಾ ಮೃಗಾಲಯವು ಇತ್ತೀಚೆಗೆ ಒಂದು ಸಣ್ಣ ವೀಡಿಯೋವನ್ನು ಹಂಚಿಕೊಂಡಿತು, ಇಲ್ಲಿನ ಹುಲಿಯು ಬಹಳ ಅಪರೂಪದ ಆದರೆ ಮಧುರವಾದ ರಾಗದಲ್ಲಿ ಕೂಗುತ್ತಿದೆ.
“ಮರಿಯು ನಿಜವಾಗಿಯೂ ಚೆನ್ನಾಗಿಯೇ ಇದೆ, ಅದರ ಗಂಟಲಿಗೆ ನೋವಾಗಿಲ್ಲ. ಹುಟ್ಟಿದ ನಂತರ ಅವರು ತಮ್ಮ ತಾಯಿಯನ್ನು ಇತರ ಎಲ್ಲ ಮರಿಗಳಿಂದ ದೂರವಿಡಲೆಂದು ಮತ್ತು ಆಕೆಯ ಗಮನವನ್ನು ಸೆಳೆಯಲು ಈ ಕರೆಯನ್ನು ಹುಲಿ ಬಹಳ ಹಿಂದೆಯೇ ಬಳಸಿತ್ತು” ಎಂದು ಸಿಬ್ಬಂದಿ ಒಬ್ಬರು ತಿಳಿಸಿರುವುದಾಗಿ ಸೈಬೀರಿಯನ್ ಟೈಮ್ಸ್ ವರದಿ ಮಾಡಿದ್ದಾರೆ.
ಧ್ವನಿಮುದ್ರಣವು ನೈಜವಾಗಿದೆ ಮತ್ತು ಅಸಾಮಾನ್ಯ ಶಬ್ದವು ಹುಲಿಗಳ ಧ್ವನಿತಂತುಗಳು “ಅಂತಹ ಹೆಚ್ಚಿನ ಸ್ವರಗಳಿಗಾಗಿ ವಿನ್ಯಾಸಗೊಳಿಸಲಾಗಿಲ್ಲ” ಎಂದು ಮೃಗಾಲಯವು ಹೇಳಿದೆ.
ಅಮೂರ್ ಹುಲಿ ಮರಿ ಯು ಜೂನ್ 2020ರಲ್ಲಿ ನಾಲ್ಕು ಮರಿಗಳಲ್ಲಿ ಒಂದು ಭಾಗವಾಗಿ ಜನಿಸಿತು. ಅದರ ತಂದೆ-ತಾಯಿ ಶೇರ್ಖಾನ್ ಮತ್ತು ಬಘೇರಾ. ಜಗತ್ತಿನ ಅತಿ ದೊಡ್ಡ ಬೆಕ್ಕು ಗಳಲ್ಲಿ ಒಂದಾದ ಅಮುರ್ ಟೈಗರ್ ನಿಧಾನವಾಗಿ ಅಳಿವಿನ ಭೀತಿಯಿಂದ ಚೇತರಿಸಿಕೊಳ್ಳುತ್ತಿದೆ.
ಶಿವಮೊಗ್ಗ : ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದ್ದು, ಈ ಕುರಿತು ಶಿವಮೊಗ್ಗದಲ್ಲಿಯೇ ದೃಢ ನಿರ್ಧಾರ ಕೈಗೊಳ್ಳುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ದಿನದಿಂದಲೇ ಬದಲಾವಣೆಯಾಗಲಿದೆ. ಶಿವಮೊಗ್ಗದಲ್ಲಿಯೇ ಆ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಜಿಲ್ಲಾ ಪಂಚಾಯಿತಿ ಚುನಾವಣೆ ಒಳಕೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆ ಬಂದಾಗ ಪಕ್ಷ ಬದಲಾವಣೆ ಮಾಡುವುದು ತಪ್ಪ, ಅದಕ್ಕೂ ಮುಂಚೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಸುಳಿವು ನೀಡಿದ್ದಾರೆ.
ಆಂಧ್ರ : ಸದ್ಯ ಆಂಧ್ರ ಪ್ರದೇಶದಲ್ಲಿ ಕತ್ತೆ ಮಾಂಸಕ್ಕೆ ಅತ್ಯಂತ ಬೇಡಿಕೆ ಇದೆಯಂತೆ… ಏಕೆಂದರೆ ಇದು ಬೆನ್ನು ನೋವು ಮತ್ತು ಅಸ್ತಮಾವನ್ನು ಗುಣಮಾಡುತ್ತದೆ ಮತ್ತು ಸೆಕ್ಸ್ ಡ್ರೈವ್ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂಬ ಕಾರಣದಿಂದ ಕತ್ತೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ.
ರಾಜ್ಯದಲ್ಲಿ ಕತ್ತೆ ಗಳ ಹತ್ಯೆ ಯನ್ನು ತಡೆಯಲು ಆಂಧ್ರ ಪ್ರದೇಶದ ಅಧಿಕಾರಿಗಳು ಹೋರಾಟ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ರಾಜ್ಯದ ಪ್ರಕಾಶಂ, ಕೃಷ್ಣ, ಪಶ್ಚಿಮ ಗೋದಾವರಿ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಕತ್ತೆ ಮಾಂಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ ಮತ್ತು ಸೇವಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪರಿಣಾಮ ರಾಜ್ಯದಲ್ಲಿ ಕತ್ತೆಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ದೆ. 2001ರ ಕಸಾಯಿಖಾನೆ ನಿಯಮಗಳ ಪ್ರಕಾರ ಕತ್ತೆಗಳ ವಧೆಯನ್ನು ನಿಷೇಧಿಸಲಾಗಿದೆ.
ಅಕ್ರಮ ಕತ್ತೆಗಳ ಕಸಾಯಿ ದಂಧೆ ಇಡೀ ಆಂಧ್ರ ಪ್ರದೇಶದಲ್ಲಿ ನಡೆಯುತ್ತಿದೆ ಎಂದು ಪ್ರಾಣಿ ಹಕ್ಕು ಹೋರಾಟಗಾರರು ತಿಳಿಸಿದ್ದು, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ಕೆಜಿ ಕತ್ತೆ ಮಾಂಸಕ್ಕೆ ಸುಮಾರು 15-20 ಸಾವಿರ ರೂಪಾಯಿ ಬೆಲೆ ಇದೆ ಎಂದು ವರದಿಯಾಗಿದೆ.
ಉಸಿರಾಟದ ತೊಂದರೆಗಳನ್ನು ಗುಣಪಡಿಸಬಲ್ಲ ಮತ್ತು ತಿನ್ನುವವರ ಲೈಂಗಿಕಾಸಕ್ತಿಯನ್ನು ಹೆಚ್ಚಿಸಬಹುದು ಎಂದು ಸ್ಥಳೀಯರು ನಂಬಿರುವ ಕಾರಣ ಕತ್ತೆಮಾಂಸವು ಜನಪ್ರಿಯವಾಗಿದೆ.
ಪ್ರಾಣಿಗಳ ಹಕ್ಕು ಕಾರ್ಯಕರ್ತರ ಪ್ರಕಾರ, ಒಂದು ಕಾಲದಲ್ಲಿ ಕಳ್ಳರ ಕೇಂದ್ರವಾದ ಪ್ರಕಾಶಂ ಜಿಲ್ಲೆಯ ಸ್ಟುವರ್ಟ್ ಪುರಂನಿಂದ ಕತ್ತೆಮಾಂಸ ತಿನ್ನುವ ಪದ್ಧತಿ ಹುಟ್ಟಿಕೊಂಡಿತ್ತು ಎಂದು ನಂಬಲಾಗಿದೆ. ಕತ್ತೆಯ ರಕ್ತವನ್ನು ಕುಡಿಯುವುದರಿಂದ ಒಬ್ಬ ವ್ಯಕ್ತಿ ವೇಗವಾಗಿ ಓಡಲು ಅವಕಾಶ ನೀಡುತ್ತದೆ ಎಂಬ ಒಂದು ಮಿಥ್ಯೆಇತ್ತು- ಇದು ಕಳ್ಳರಿಗೆ ಬಹಳಷ್ಟು ಇಷ್ಟವಾಗುತ್ತದೆ.
ಇತ್ತೀಚೆಗೆ ಬಿಡುಗಡೆಯಾದ ಟಾಲಿವುಡ್ ಹಿಟ್ ಚಿತ್ರ ಕ್ರಾಕ್ ಚಿತ್ರದಲ್ಲಿ ನಟ ರವಿತೇಜ ಮತ್ತು ಶ್ರುತಿ ಹಾಸನ್ ಅಭಿನಯದ ಚಿತ್ರಗಳಲ್ಲಿ ಕತ್ತೆ ರಕ್ತ ಕುಡಿಯುವ ದೃಶ್ಯ ತೋರಿಸಲಾಗಿದೆ.
ಪ್ರಕಾಶಂ ಜಿಲ್ಲೆಯ ವೆಟಪಲೆಮ್ ಗ್ರಾಮದ ಕರಾವಳಿ ತೀರದಲ್ಲಿರುವ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮುನ್ನ ಕೆಲವು ಮೀನುಗಾರರು ಕತ್ತೆಯ ರಕ್ತ ವನ್ನು ಕುಡಿಯುತ್ತಾರೆ ಎಂದು ನಂಬಲಾಗಿದೆ.
ರಾಯಚೂರು : ರಾಜ್ಯದ ರೈತ ಸಮುದಾಯಕ್ಕೆ ಬಿಗ್ ಶಾಕ್ ವೊಂದು ಎದುರಾಗಿದ್ದು, ಪೆಟ್ರೋಲ್, ಡೀಸೆಲ್ ಏರಿಕೆ ಪರಿಣಾಮ ರಸಗೊಬ್ಬರಗಳ ಬೆಲೆ ಕೂಡ ಏರಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎನ್ನಲಾಗಿದೆ.
ರಾಜ್ಯದ ಪ್ರಮುಖ ರಸಗೊಬ್ಬರ ಉತ್ಪಾದನಾ ಕಂಪನಿಗಳು ಅಂತಾರಾಷ್ಟ್ರೀಯ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೆಪವಾಗಿಟ್ಟುಕೊಂಡು ರಸಗೊಬ್ಬರಗಳ ಬೆಲೆ ಏರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಎನ್ನಲಾಗಿದ್ದು, ಈ ಮೂಲಕ ರೈತರಿಗೆ ಬಿಗ್ ಶಾಕ್ ಎದುರಾಗಿದೆ.
ರಸಗೊಬ್ಬರ ಕಂಪನಿಗಳು ಡಿಎಪಿ 1,300 ರಿಂದ 1500 ರೂ. ಎನ್ ಪಿಕೆ 1,180 ರಿಂದ 1, 400 ರೂ, ಎನ್ ಪಿಎಸ್ 960 ರೂ. ನಿಂದ 1,150 ರೂ. ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ 50 ಕೆಜಿ ಡಿಎಪಿ ಮತ್ತು ಪೊಟ್ಯಾಷ್ ರಸಗೊಬ್ಬರಕ್ಎಕ 200 ರಿಂದ 300 ರೂ. ಹೆಚ್ಚಳಕ್ಕೆ ಮುಂದಾಗಿವೆ ಎಂದು ಹೇಳಲಾಗುತ್ತಿದೆ.
ಹತ್ರಾಸ್: ಉತ್ತರ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ಹತ್ರಾಸ್ ನಲ್ಲಿ ಲೈಂಗಿಕ ಕಿರುಕುಳ ಸಂಬಂಧ ದೂರು ನೀಡಿದ್ದ ಸಂತ್ರಸ್ಥೆಯ ತಂದೆಯನ್ನೇ ಆರೋಪಿ ಕೊಂದು ಹಾಕಿರುವ ಘಟನೆ ನಡೆದಿದೆ.
ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ 2018ರ ಜುಲೈನಲ್ಲಿ ದೂರು ನೀಡಿದ್ದ ಸಂತ್ರಸ್ಥ ಯುವತಿಯ ತಂದೆಯನ್ನು ಆರೋಪಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಅಮರೀಶ್ ಶರ್ಮಾ ಎನ್ನುವವರನ್ನು ಸೋಮವಾರ ಆರೋಪಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ . ಈ ಸಂಬಂಧ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಮಾತನಾಡಿರುವ ಹತ್ರಾಸ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ಪಿ) ವಿನೀತ್ ಜೈಸ್ವಾಲ್ ಅವರು, ʼಗೌರವ್ ಶರ್ಮಾ ಹಾಗೂ ಆತನ ಸ್ನೇಹಿತರು ಅಮರೀಶ್ ಶರ್ಮಾರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ಇನ್ನಿಬ್ಬರ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜೆಡಿಎಸ್ ನ್ನು ಯಾವುದೇ ಕಾರಣಕ್ಕೂ ನಂಬುವಂತಿಲ್ಲ. ಬಿಜೆಪಿ ಪ್ರಬಲವಾಗಿ ಕಟ್ಟೋದು ನನ್ನ ಉದ್ದೇಶ, ಈ ವಿಚಾರವನ್ನು ನಾನು ವರಿಷ್ಠರ ವೇದಿಕೆಯಲ್ಲಿ ಅದನ್ನು ಮಾತನಾಡುತ್ತೇನೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ನನ್ನ ಉದ್ದೇಶ ಎಂದು ಹೇಳಿದರು.
ಕುಮಾರಸ್ವಾಮಿ ಅವರು ನನ್ನ ಬಗ್ಗೆ ವೈಯಕ್ತಿಕವಾಗಿ ಕೀಳಾಗಿ ಮಾತನಾಡುತ್ತಿದ್ದರು. ಈ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಕಳುಹಿಸಿದೆ. ಆದರೂ ಅವರು ಅದನ್ನು ಮುಂದುವರೆಸಿದರು. ನನಗೆ ತುಂಬಾ ಘಾಸಿ ಆಯ್ತು, ಅದೇ ಕಾರಣಕ್ಕೆ ನಾನು ಸಹ ಮಾತನಾಡಿದೆ ಎಂದರು.
ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೋವಿಡ್-19 ಸೋಂಕು ತಡೆಗಟ್ಟುವ ಪ್ರಯತ್ನಗಳಲ್ಲಿ ಉರಿಯೂತ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸಬಾರದು ಎಂದು ತಿಳಿಸಿದೆ.
ಈ ಔಷಧ ಸೇವನೆಯಿಂದ ಸಾವುಗಳು ಅಥವಾ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಪರಿಣಾಮದ ಬಗ್ಗೆ ಹೇಳಲು ಸಾಧ್ಯವಿಲ್ಲ. ಇದು ಪ್ರತಿಕೂಲ ಪರಿಣಾಮಗಳ ಅಪಾಯವನ್ನು ಹೆಚ್ಚಿಸಬಹುದು ಎಂದು WHO ತಜ್ಞರ ಸಮಿತಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು Covid-19 ಚಿಕಿತ್ಸೆಗೆ ಉತ್ತಮ ಎಂದು ಪರಿಗಣಿಸಿದ್ದರು, ಆದರೆ ನಂತರದಲ್ಲಿ ಪರಿಣಾಮಕಾರಿಯಲ್ಲ ಎಂದು ಪರಿಗಣಿಸಲಾಗಿತ್ತು. ಸಂಶೋಧನೆಯು ಔಷಧವು ವೈರಸ್ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ತೋರಿಸಿದ ಕೆಲವೇ ತಿಂಗಳ ನಂತರ ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತವು ತನ್ನ ಅಧಿಕೃತತೆಯನ್ನು ರದ್ದುಗೊಳಿಸಿತು.
ಆದ್ದರಿಂದ ಹೈಡ್ರಾಕ್ಸಿಕ್ಲೋರೋಕ್ವೈನ್ ಅನ್ನು ಸಂಶೋಧನಾ ಆದ್ಯತೆ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಇತರ ಭರವಸೆಯ ಪ್ರತಿಬಂಧಕ ಔಷಧಗಳನ್ನು ಮೌಲ್ಯಮಾಪನ ಮಾಡಲು ಸಂಪನ್ಮೂಲಗಳನ್ನು ಬಳಸಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ.
ನವದೆಹಲಿ : ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ ಕಂಡು, 22 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ 4,494 ರೂಪಾಯಿಗಳಿಗೆ ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 44,930 ರೂಪಾಯಿಗಳಿಂದ ಕಂಡು 44,940 ರೂ.ಗೆ ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ ಕೂಡ 10 ಗ್ರಾಂಗಳ ಬೆಲೆ 45,940 ರೂಪಾಯಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 45,200 ರೂ ಇದೆ. ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ 10 ಗ್ರಾಂಗೆ 43,550 ರೂ., 24 ಕ್ಯಾರೆಟ್ ಚಿನ್ನ 47,510 ರೂ.ಗೆ ಮಾರಾಟವಾಗಿದೆ.
ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಮಂಗಳವಾರ ಬೆಳ್ಳಿ ಬೆಲೆ 0.10 ರಷ್ಟು ಏರಿಕೆ ಕಂಡು 10 ಗ್ರಾಂಗೆ 675.10 ರೂಪಾಯಿಗಳಿಗೆ ಏರಿಕೆಯಾಗಿದೆ.
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪದ ಮೇಲೆ ಬಿಬಿಎಂಪಿ ಸಹಾಯಕ ಅಭಿಯಂತರ ಎಸ್. ಎನ್ ದೇವೇಂದ್ರಪ್ಪ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಮೃತನಗರದ ದೇವೇಂದ್ರಪ್ಪ ಮನೆ ಹಾಗೂ ಹಲಸೂರು ಗುಪ್ತ ಲೇಔಟ್ ನಲ್ಲಿ ದೇವೇಂದ್ರಪ್ಪ ಆಪ್ತ ಶ್ರೀನಿವಾಸ್ ಎಂಬುವರ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. ನಿವಾಸದಲ್ಲಿರುವ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಸಿರುವ ನಿಖರ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಬಿಬಿಎಂಪಿ ಸಹಾಯಕ ಅಭಿಯಂತ ದೇವೇಂದ್ರಪ್ಪ ಹಾಗೂ ಆಪ್ತ ಶ್ರೀನಿವಾಸ್ ಎಂಬುವರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಅವರ ಪತ್ನಿ ನುತನ್ ಗೋಯಲ್ ಅವರು ಮಂಗಳವಾರ ಬೆಳಗ್ಗೆ ದೆಹಲಿ ಹಾರ್ಟ್ ಅಂಡ್ ಲಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕೊರೊನಾವೈರಸ್ ಡಿಸೀಸ್ (ಕೋವಿಡ್-19) ಲಸಿಕೆಯನ್ನು ತೆಗೆದುಕೊಂಡರು.
60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ರಿಂದ 59 ವರ್ಷ ವಯಸ್ಸಿನ ಅನಾರೋಗ್ಯ ಪೀಡಿತರಿಗೆ ಕೋವಿಡ್-19 ಲಸಿಕೆಯ ಎರಡನೇ ಹಂತದ ಲಸಿಕೆಯನ್ನು ಭಾರತವು ಆರಂಭಿಸಿದೆ.
ಈಗಾಗಲೇ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನವೀನ್ ಪಟ್ನಾಯಕ್, ನಿತೀಶ್ ಕುಮಾರ್ ಸೇರಿ ಹಲವು ಹಿರಿಯ ರಾಜಕೀಯ ನಾಯಕರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ನವದೆಹಲಿ : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ದೆಹಲಿ ಚಲೋ ಚಳವಳಿಗೆ ಸಂಬಂಧಿಸಿದಂತೆ ಟೂಲ್ ಕಿಟ್ ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ವಕೀಲೆ ನಿಖಿತಾ ಜಾಕೋಬ್ ಸಲ್ಲಿಸಿರುವ ನಿರೀಕ್ಷಾ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಪಟಿಯಾಲಾ ಕೋರ್ಟ್ ಮಾರ್ಚ್ 9 ಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಹೋರಾಟಗಾರ್ತಿ ವಕೀಲೆ ಜಾಕೋಬ್ ಮತ್ತು ಪುಣೆ ಮೂಲದ ಶಂತನು ಮುಲುಕ್ ಗೂ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಈ ನಡುವೆ ನಿಖಿತಾ ಜಾಕೋಬ್ ಮತ್ತು ಶಂತನು ಮುಲುಕ್ ನಿರೀಕ್ಷಣಾ ಜಾಮೀನು ನೀಡುವಂತೆ ದೆಹಲಿ ಪಟಿಯಾಲಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿತ್ತು. ಆದರೆ ವಿಚಾರಣೆಯನ್ನು ಮಾರ್ಚ್ 9 ಕ್ಕೆ ಮುಂದೂಡಿದೆ.
ಅಹಮದಾಬಾದ್: ಗುಜರಾತ್ನ 81 ಪುರಸಭೆ, 31 ಜಿಲ್ಲಾ ಪಂಚಾಯತ್ಗಳು ಮತ್ತು 231 ತಾಲೂಕು ಪಂಚಾಯತ್ಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.
ಇತ್ತೀಚಿನ ಅಂಕಿ-ಸಂಖ್ಯೆಗಳ ಪ್ರಕಾರ, ಮತದಾನ ನಡೆದ ಒಟ್ಟು 8,235 ಕ್ಷೇತ್ರಗಳ ಪೈಕಿ 318 ಮತಗಳು ಎಣಿಕೆಯಾಗಿವೆ. ಬಿಜೆಪಿ 308, ಕಾಂಗ್ರೆಸ್ 9 ಮತ್ತು ಎಎಪಿ 1 ಸ್ಥಾನ ಗಳಿಸಿವೆ. 31 ಜಿಲ್ಲಾ ಪಂಚಾಯಿತಿಗಳ ಪೈಕಿ 20ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್ ನ ಹಿರಿಯ ಶಾಸಕ ಅಶ್ವಿನ್ ಕೊತ್ವಾಲ್ ಅವರ ಪುತ್ರ ಯಶ್ ಕೊತ್ವಾಲ್ ಅವರು ಸಬರಕಾಂತ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ಫೆ.28 ರಂದು ಪುರಸಭೆಗಳ 680 ವಾರ್ಡ್, ಜಿಲ್ಲಾ ಪಂಚಾಯತ್ಗಳ 980 ಹಾಗೂ ತಾಲೂಕು ಪಂಚಾಯತ್ಗಳ 8,474 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 8,235 ಸ್ಥಾನಗಳಿಗೆ ಬಿಜೆಪಿ 8,161 ಅಭ್ಯರ್ಥಿಗಳನ್ನು, ಕಾಂಗ್ರೆಸ್ 7,778 ಹಾಗೂ ಆಮ್ ಆದ್ಮಿ 2,090 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.