ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಸೆಮಿಫೈನಲ್ ತಲುಪಿದೆ. ನವೆಂಬರ್ 9 ರಂದು(ಇಂದು) ನಡೆಯಲಿರುವ ಈ ಪಂದ್ಯದಲ್ಲಿ ಪಾಕಿಸ್ತಾನವು ಸಿಡ್ನಿಯಲ್ಲಿ ಮಧ್ಯಾಹ್ನ 1.30 ಕ್ಕೆ (ಭಾರತೀಯ ಕಾಲಮಾನ) ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಆದರೆ, ಇದಕ್ಕೂ ಮುನ್ನ ಪಾಕಿಸ್ತಾನದ ಸ್ಟಾರ್ ಬೌಲರ್ ಶಾಹೀನ್ ಶಾ ಆಫ್ರಿದಿ ಸಿಡ್ನಿಯಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದಾಗ ವಿಭಿನ್ನ ದೃಶ್ಯ ಕಂಡುಬಂದಿದೆ. ಅಷ್ಟೇ ಅಲ್ದೇ, ಇದೇ ವೇಳೆ ಶಹೀನ್ ಶಾ ಅಫ್ರಿದಿ ತ್ರಿವರ್ಣ ಧ್ವಜದ ಮೇಲೆ ಅಭಿಮಾನಿಗೆ ಆಟೋಗ್ರಾಫ್ ನೀಡಿದ್ದಾರೆ
ಭಾರತೀಯ ಅಭಿಮಾನಿಯೊಬ್ಬರು ಭಾರತದ ಧ್ವಜದ ಮೇಲೆ ಶಾಹೀನ್ ಶಾ ಆಫ್ರಿದಿಯಿಂದ ಆಟೋಗ್ರಾಫ್ ಪಡೆದರು. ಶಾಹಿದ್ ತನ್ನ ಭಾವಿ ಮಾವ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ಈ ಘಟನೆಯು ಸಾಬೀತುಪಡಿಸುತ್ತದೆ ಎಂದು ಅನೇಕ ಅಭಿಮಾನಿಗಳು ಹೇಳಿದ್ದಾರೆ. ಏಕೆಂದರೆ, ಇಂತದ್ದೇ ಒಂದು ಸಂದರ್ಭದಲ್ಲಿ ಶಾಹಿದ್ ಅಫ್ರಿದಿ ಅವರು ತಮ್ಮ ನಡವಳಿಕೆಯಿಂದ ಅಭಿಮಾನಿಗಳ ಮನ ಗೆದ್ದಿದ್ದರು.
ಶಾಹಿದ್ ಅಫ್ರಿದಿ ಅವರ ಮಗಳನ್ನು ಶಾಹೀನ್ ಶಾ ಮದುವೆಯಾಗಲಿದ್ದಾರೆ ಮತ್ತು ಈಗಾಗಲೇ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ, ಶಾಹೀನ್ ಕೂಡ ತನ್ನ ಮಾವ ಮಾಡಿದಂತೆಯೇ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Shaheen Afridi signed the India flag for an Indian fan. Respect ❤️
Like father-in-law, like son-in-law! #T20WorldCup pic.twitter.com/bq9zj15r8q
— Farid Khan (@_FaridKhan) November 8, 2022
ಶಾಹಿದ್ ಅಫ್ರಿದಿ ಅವರು 2018 ರ ಆರಂಭದಲ್ಲಿ ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಪಂದ್ಯಾವಳಿಯ ಸಮಯದಲ್ಲಿ ಭಾರತೀಯ ಅಭಿಮಾನಿಗಳು ಹಿಡಿದಿದ್ದ ತ್ರಿವರ್ಣ ಧ್ವಜದೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದರು. ಇದಕ್ಕೂ ಮುನ್ನ ತ್ರಿವರ್ಣ ಧ್ವಜವು ಸಂಪೂರ್ಣವಾಗಿ ತೆರೆದಿಲ್ಲದ್ದನ್ನು ಕಂಡ ಶಾಹಿದ್ ಅಫ್ರಿದಿ ‘ಧ್ವಜವನ್ನು ನೇರಗೊಳಿಸಿ’ ಎಂದು ಹೇಳಿ ನಂತರವೇ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ವೇಳೆ, ಭಾರತದ ಧ್ವಜಕ್ಕೆ ಗೌರವ ತೋರಿಸಿದ್ದಕ್ಕಾಗಿ ಶಾಹಿದ್ ಅಫ್ರಿದಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಶಂಸೆಯನ್ನು ಪಡೆದರು.
OMG: ಸಲಿಂಗಕಾಮಿಗಳೆಂದು, ಇಬ್ಬರು ಹುಡುಗಿಯರ ಖಾಸಗಿ ಭಾಗಕ್ಕೆ ರಾಡ್ ಇಟ್ಟು ಚಿತ್ರ ಹಿಂಸೆ : ಒಬ್ಬರ ಬಂಧನ