ಬೆಂಗಳೂರು : ಐಸಿಸಿ ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿತು. ಮತ್ತು 2011 ರ ನಂತರ ಭಾರತದ ಮೊದಲ ವಿಶ್ವಕಪ್ ಗೆಲುವಾಗಿದೆ.
ಹೌದು 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸುವ ಮೂಲಕ ಭಾರತ 176 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು.
ಇನ್ನು ಪಂದ್ಯದ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಟೀಂ ಇಂಡಿಯಾಗೆ ಶುಭಕೊರಿದ್ದು, ಸಾಮಾಜಿಕ ಜಾಲತಾಣ X ನಲ್ಲಿ ಈ ಕುರಿತು ಹಂಚಿಕೊಂಡಿದ್ದು, ದೆಹಲಿ ಪ್ರವಾಸದಿಂದ ನಾಡಿಗೆ ವಾಪಾಸಾಗುವ ವೇಳೆ ವಿಮಾನ ಏರುವ ಮೊದಲು ಸಿಕ್ಕ ಅಲ್ಪ ಸಮಯದಲ್ಲೇ ಭಾರತ – ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪೈನಲ್ ಪಂದ್ಯ ವೀಕ್ಷಿಸಿದೆ.ಸಂಘಟಿತ ಹೋರಾಟದ ಮೂಲಕ ಭಾರತ ವಿಶ್ವಕಪ್ ಗೆದ್ದುಬರಲಿ ಎಂದು ಮನದುಂಬಿ ಹಾರೈಸುತ್ತೇನೆ. ಎಂದು ಬರೆದುಕೊಂಡಿದ್ದರು.
ದೆಹಲಿ ಪ್ರವಾಸದಿಂದ ನಾಡಿಗೆ ವಾಪಾಸಾಗುವ ವೇಳೆ ವಿಮಾನ ಏರುವ ಮೊದಲು ಸಿಕ್ಕ ಅಲ್ಪ ಸಮಯದಲ್ಲೇ ಭಾರತ – ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪೈನಲ್ ಪಂದ್ಯ ವೀಕ್ಷಿಸಿದೆ.
ಸಂಘಟಿತ ಹೋರಾಟದ ಮೂಲಕ ಭಾರತ ವಿಶ್ವಕಪ್ ಗೆದ್ದುಬರಲಿ ಎಂದು ಮನದುಂಬಿ ಹಾರೈಸುತ್ತೇನೆ. #WorldCupFinal #worldcup2024 #INDvsSA2024 #INDvsSA pic.twitter.com/jGZScCoRy6— Siddaramaiah (@siddaramaiah) June 29, 2024