ಈಗಿನ ಕಾಲದಲ್ಲಿ ತುಂಬಾ ಹೂಡಿಕೆಯ ಆಯ್ಕೆಗಳಿವೆಯಾಗಿದೆ. ಅಪಾಯವಿಲ್ಲದ ಹೂಡಿಕೆಗಳೂ ಕೂಡಾ ಇವೆ. ಹೈರಿಸ್ಕ್ ಹೈ ರಿಟರ್ನ್ ಇರುವ ಹೂಡಿಕೆಗಳೂ ಇವೆ. ಅಪಾಯವೇ ಇಲ್ಲದ ಹೂಡಿಕೆಗಳಲ್ಲಿ ಚಿನ್ನ, ಭೂಮಿಯನ್ನು ಸೇರಿಸಬಹುದಾಗಿದೆ. ಅತ್ಯಂತ ಕಡಿಮೆ ಅಪಾಯವಿರುವ ಹೂಡಿಕೆಗಳಲ್ಲಿ ಪಿಪಿಎಫ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳು, ಎಫ್ಡಿ, ಆರ್ಡಿ, ಗವರ್ನ್ಮೆಂಟ್ ಬಾಂಡ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿಗಳು ಸೇರುತ್ತವೆಯಾಗಿದೆ. ಇನ್ನು ತುಸು ಹೆಚ್ಚು ಅಪಾಯವಿರುವ ಹೂಡಿಕೆಗಳಲ್ಲಿ ಮ್ಯುಚುವಲ್ ಫಂಡ್ಗಳಿವೆ. ಹೆಚ್ಚು ಅಪಾಯವಿರುವ ಮತ್ತು ಹೆಚ್ಚು ರಿಟರ್ನ್ ಪಡೆಯುವ ಅವಕಾಶ ನೀಡುವ ಹೂಡಿಕೆಯಲ್ಲಿ ಈಕ್ವಿಟಿ ಇದೆ. ಪ್ರತಿ ದಿನಕ್ಕೆ 170 ರೂ ಅಥವಾ ತಿಂಗಳಿಗೆ 5,000 ರೂ ಹಣ ಉಳಿಸಿ ಹೂಡಿಕೆಗೆ ವಿನಿಯೋಗಿಸಬಹುದಾದರೆ ದೀರ್ಘಾವಧಿಯಲ್ಲಿ ಒಂದು ಕೋಟಿ ರೂ ಆದಾಯವನ್ನು ಸುಲಭವಾಗಿ ಪಡೆಯಬಹುದಾಗಿದೆ. ಇವತ್ತು ಎಫ್ಡಿಗಳಿಗೆ, ಪಿಪಿಎಫ್ ಇತ್ಯಾದಿಗಳಿಗೆ ಕನಿಷ್ಠ ಶೇ. 6.5ರಷ್ಟು ಬಡ್ಡಿ ಸಿಗುತ್ತದೆ. ಬಹಳ ಸುರಕ್ಷಿತವಾದ ಈ ಹೂಡಿಕೆಯಲ್ಲಿ ನೀವು ತಿಂಗಳಿಗೆ 5,000 ರೂನಂತೆ ತೊಡಗಿಸಿದರೆ, 10 ವರ್ಷದಲ್ಲಿ ನಿಮ್ಮ ಹಣ 8.46 ಲಕ್ಷ ರೂ ಆಗುತ್ತದೆ. ಮತ್ತೂ 10 ವರ್ಷ ಹಾಗೇ ಹೂಡಿಕೆ ಮುಂದುವರಿಸಿದರೆ 24 ಲಕ್ಷ ರೂ ಆಗುತ್ತದೆ. ಇನ್ನೂ 10 ವರ್ಷ ಮುಂದುವರಿದರೆ ಹಣವು 55 ಲಕ್ಷ ರೂ ಆಗುತ್ತದೆ. ಹಾಗೇ ಒಟ್ಟು ಹೂಡಿಕೆ ಅವಧಿ 40 ವರ್ಷ ಆದಲ್ಲಿ 1.14 ಕೋಟಿ ರೂ ರಿಟರ್ನ್ ನಿಮಗೆ ಸಿಗುತ್ತದೆ. ಈ 40 ವರ್ಷದಲ್ಲಿ ನೀವು ಕಟ್ಟಿರುವ ಹಣ 24 ಲಕ್ಷ ರೂ ಆಗಿರುತ್ತದೆ. ಮ್ಯೂಚುವಲ್ ಫಂಡ್ನಲ್ಲಿ ಮಾಡುವ ಹೂಡಿಕೆಯು ಮಾರುಕಟ್ಟೆ ಅಪಾಯದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ 40 ವರ್ಷದಲ್ಲಿ ವಾರ್ಷಿಕ ಶೇ. 12ರಷ್ಟು ದರದಲ್ಲಿ ಬೆಳೆಯಿತು ಎಂದಿಟ್ಟುಕೊಳ್ಳಿ. ನಿಮ್ಮ 5,000 ಮಾಸಿಕ ಹೂಡಿಕೆ 40 ವರ್ಷದಲ್ಲಿ 5.94 ಕೋಟಿ ರೂ ಆಗುತ್ತದೆ. ಅದೃಷ್ಟಕ್ಕೆ ಮ್ಯುಚುವಲ್ ಫಂಡ್ ವಾರ್ಷಿಕ ಶೇ. 15ರ ದರದಲ್ಲಿ ಬೆಳೆದಲ್ಲಿ ನಿಮ್ಮ ಸಂಪತ್ತು 15 ಕೋಟಿ ರೂ ಆಗುತ್ತದೆ. ಅಕಸ್ಮಾತ್ ಫಂಡ್ ಶೇ. 10ರ ದರದಲ್ಲಿ ಬೆಳೆದಲ್ಲಿ 40 ವರ್ಷದ ಬಳಿಕ ನಿಮಗೆ ಸಿಗುವ ರಿಟರ್ನ್ 3.18 ಕೋಟಿ ರೂ ಆಗುತ್ತದೆಯಾಗಿದೆ.