ಹುಟ್ಟು-ಸಾವುಗಳು ಪ್ರಕೃತಿ ನಿಯಮವಾಗಿದೆ. ಹುಟ್ಟಿದವರು ಸಾಯಬೇಕೆಂಬುದೂ ಪ್ರಕೃತಿದತ್ತವಾದುದು. ಆದರೆ ಈ ಸಾವು ಹೇಗೆ ಬರುತ್ತದೆ, ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಆದರೆ ನಿಮಗೆ ಈ ಎಲ್ಲಾ ಸಂಕೇತಗಳು ಏನಾದರೂ ಕಂಡುಬಂದರೆ ಖಂಡಿತವಾಗಿಯೂ ನೀವು ಸಾವಿಗೆ ಸಮೀಪವಾಗಿದ್ದೀರಿ ಎಂದರ್ಥವಾಗಿದೆ. ಹಿಂದೂ ಧರ್ಮದ 18 ಪುರಾಣಗಳ ಪೈಕಿ ಒಂದಾಗಿರುವ ಶಿವ ಪುರಾಣದಲ್ಲಿ ಶಿವನಿಗೆ ಸಂಬಂಧಿಸಿದ ಅನೇಕ ಮಾಹಿತಿ ನಿಮಗೆ ಲಭ್ಯವಾಗುತ್ತದೆ. ಶಿವನ ಅನೇಕ ಅವತಾರಗಳನ್ನು ನೀವು ಕಾಣಬಹುದು. ಈ ಶಿವ ಪುರಾಣದಲ್ಲಿ ಜೀವನ – ಮರಣಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಶಿವ ಪುರಾಣದಲ್ಲಿ ಶಿವನು ಪತ್ನಿ ಪಾರ್ವತಿಗೆ, ಸಾವಿಗಿಂತ ಮೊದಲು ಯಾವ ಸಂಕೇತಗಳು ಸಿಗುತ್ತವೆ ಎಂಬುದನ್ನು ವಿವರಿಸಿದ್ದಾರೆ.
ಸಾವಿಗೆ ಹತ್ತಿರ ಇರುವ ವ್ಯಕ್ತಿಗೆ ತನ್ನ ನೆರಳು ಕಾಣೋದಿಲ್ಲ. ಕಂಡರೂ ಕೂಡ ತಲೆಯ ಭಾಗ ಕಾಣಿಸೋದಿಲ್ಲ. ಇಷ್ಟೇ ಅಲ್ಲದೆ ನೀರು, ಎಣ್ಣೆ, ತುಪ್ಪ ಅಥವಾ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸೋದಿಲ್ಲ. ಪ್ರತಿಬಿಂಬ ಕಾಣಿಸದ ವ್ಯಕ್ತಿಗೆ ಅತ್ಯಂತ ಕಡಿಮೆ ಬದುಕು ಇರುತ್ತದೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ. ದೇಹದ ಬಣ್ಣ ಬದಲಾಗುತ್ತದೆ – ವ್ಯಕ್ತಿಯ ಸಾವು ಸಮೀಪದಲ್ಲಿದ್ದರೆ ಅವರ ದೇಹವು ಇದ್ದಕ್ಕಿದ್ದಂತೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಲ್ಲವೆ ದೇಹದ ಬಣ್ಣದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ದೇಹ ಬಿಳಿ ಅಥವಾ ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ಕೆಂಪು ಕಲೆಗಳು ಕಂಡು ಬರುತ್ತವೆ. ಇಂತಹ ವ್ಯಕ್ತಿಗೆ ಆರು ತಿಂಗಳಲ್ಲಿ ಸಾವು ಬರುತ್ತದೆಯೆಂದರ್ಥ. ವ್ಯಕ್ತಿಯ ಸಾವು ಹತ್ತಿರಾದಾಗ ಚಂದ್ರ ಸರಿಯಾಗಿ ಕಾಣೋದಿಲ್ಲ. ಚಂದ್ರ ಕಪ್ಪಾಗಿ ಕಾಣಿಸುತ್ತಾನೆ. ಅಲ್ಲದೆ ಅರುಂಧತಿ ನಕ್ಷತ್ರ, ಸಪ್ತಋಷಿ ನಕ್ಷತ್ರಗಳು ಅಥವಾ ಇತರ ಯಾವುದೇ ನಕ್ಷತ್ರಗಳನ್ನು ನೋಡಲು ಸಿಗುವುದಿಲ್ಲ. ಸಾವು ಹತ್ತಿರದಲ್ಲಿರುವ ವ್ಯಕ್ತಿಗೆ ಅಕ್ಕಪಕ್ಕದ ವಸ್ತುಗಳು ಸರಿಯಾಗಿ ಕಾಣಿಸೋದಿಲ್ಲ. ತನ್ನ ಸುತ್ತಮುತ್ತಲಿನ ಜಗತ್ತು ಸಂಪೂರ್ಣ ಕತ್ತಲಾದಂತೆ ಭಾಸವಾಗುತ್ತದೆ. ಆಪ್ತರನ್ನು ಗುರುತಿಸಲು ಆತ ಅಸಮರ್ಥನಾಗುತ್ತಾನೆ. ಕಾಗೆಯು ಒಬ್ಬ ವ್ಯಕ್ತಿಯ ತಲೆಯ ಮೇಲೆ ಇದ್ದಕ್ಕಿದ್ದಂತೆ ಬಂದು ಕುಳಿತರೆ, ರಣಹದ್ದು ಅಥವಾ ಪಾರಿವಾಳವು ಯಾರೊಬ್ಬರ ತಲೆಯ ಮೇಲೆ ಕುಳಿತರೆ, ಅದು ಸಾವು ಸಮೀಪಿಸುವುದನ್ನು ಸೂಚಿಸುತ್ತದೆ. ವ್ಯಕ್ತಿಯ ದೇಹದ ಅಂಗಗಳಾದ ಬಾಯಿ, ಕಿವಿ, ಕಣ್ಣು, ನಾಲಿಗೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಆ ವ್ಯಕ್ತಿಗೆ ತುಂಬಾ ದಿನ ಬದುಕುವುದು ಅನುಮಾನವಾಗಿರುತ್ತದೆ. ಸಾವು ಇನ್ನೇನು ಒಂದು ತಿಂಗಳಲ್ಲಿ ಬರಲಿದೆ ಎನ್ನುವ ವ್ಯಕ್ತಿಯ ಬಾಯಿ ಒಣಗಲು ಶುರುವಾಗುತ್ತದೆ. ಅಲ್ಲದೆ ಆತನ ಎಡಗೈ ಭಾಗದಲ್ಲಿ ವಿಪರೀತ ಸೆಳೆತ ಕಾಣಿಸಿಕೊಳ್ಳುತ್ತದೆಯಾಗಿದೆ.