ಬೆಂಗಳೂರು : ದೇಶದ ಬುಲಿಯನ್ ಮಾರುಕಟ್ಟೆ ವಹಿವಾಟಿನಲ್ಲಿ ಚಿನ್ನ , ಬೆಳ್ಳಿ ದರ ಏರಿಳಿತಗಳ ಟ್ರೆಂಡ್ ಇಂದೂ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನದ ಬೆಲೆ ತುಸು ಇಳಿಕೆಯಾಗಿದ್ದರೆ, ಬೆಳ್ಳಿ ದರ ಹೆಚ್ಚಳವಾಗಿತ್ತು. ಆದರೆ ಇಂದು ಉಭಯ ಲೋಹಗಳ ದರ ಹೆಚ್ಚಳವಾಗಿದೆ.
BREAKING NEWS: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ತಮಿಳುನಾಡಿನ 45 ಸ್ಥಳಗಳಲ್ಲಿ ಎನ್ಐಎ ದಾಳಿ | NIA raids
ಷೇರುಪೇಟೆಯ ಓಟಕ್ಕೆ ಬುಧವಾರ ತಡೆಬಿದ್ದಿರುವುದು, ರೂಪಾಯಿ ಮೌಲ್ಯ ವೃದ್ಧಿಯಾಗಿರುವುದು ಬುಲಿಯನ್ ಮಾರುಕಟ್ಟೆ ಮೇಲೂ ತುಸು ಪರಿಣಾಮ ಬೀರಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 560 ರೂ. ಹೆಚ್ಚಳವಾಗಿ 47,360 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 620 ರೂ. ಏರಿಕೆಯಾಗಿ 51,670 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 850 ರೂ. ಹೆಚ್ಚಳವಾಗಿ 61,700 ರೂಪಾಯಿ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,150 ರೂ. ಮುಂಬೈ- 47,360 ರೂ, ದೆಹಲಿ- 47,460 ರೂ, ಕೊಲ್ಕತ್ತಾ- 47,360 ರೂ, ಬೆಂಗಳೂರು- 47,410 ರೂ, ಹೈದರಾಬಾದ್- 47,360 ರೂ, ಕೇರಳ- 47,360 ರೂ, ಪುಣೆ- 47,390 ರೂ, ಮಂಗಳೂರು- 47,410 ರೂ, ಮೈಸೂರು- 47,410 ರೂ. ಆಗಿದೆ.
BREAKING NEWS: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ತಮಿಳುನಾಡಿನ 45 ಸ್ಥಳಗಳಲ್ಲಿ ಎನ್ಐಎ ದಾಳಿ | NIA raids
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,530 ರೂ, ಮುಂಬೈ- 51,670 ರೂ, ದೆಹಲಿ- 51,770 ರೂ, ಕೊಲ್ಕತ್ತಾ- 51,670 ರೂ, ಬೆಂಗಳೂರು- 51,720 ರೂ, ಹೈದರಾಬಾದ್- 51,670 ರೂ, ಕೇರಳ- 51,670 ರೂ, ಪುಣೆ- 51,690 ರೂ, ಮಂಗಳೂರು- 51,720 ರೂ, ಮೈಸೂರು- 51,720 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,400 ರೂ, ಮೈಸೂರು- 67,400 ರೂ., ಮಂಗಳೂರು- 67,400 ರೂ., ಮುಂಬೈ- 61,700 ರೂ, ಚೆನ್ನೈ- 67,400 ರೂ, ದೆಹಲಿ- 61,700 ರೂ, ಹೈದರಾಬಾದ್- 67,400 ರೂ, ಕೊಲ್ಕತ್ತಾ- 61,700 ರೂ. ಆಗಿದೆ.
BREAKING NEWS: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ತಮಿಳುನಾಡಿನ 45 ಸ್ಥಳಗಳಲ್ಲಿ ಎನ್ಐಎ ದಾಳಿ | NIA raids