ಬೆಂಗಳೂರು : ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ( Karnataka Government ) ಗುಡ್ ನ್ಯೂಸ್ ನೀಡಿದ್ದು, ಶಿಕ್ಷಕರ ನೇಮಕಾತಿ ( Teacher Recruitment ) ಹೊಸ ನಿಯಮಾವಳಿಗಳಿಗೆ ಅನುಮೋದನೆ ನೀಡಿದೆ. ಈ ಮೂಲಕ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಮೀರಿ, ಶಿಕ್ಷಕರ ಹುದ್ದೆಯಿಂದ ( Teacher Jobs ) ವಂಚಿತರಾಗುತ್ತಿದ್ದಂತ ಲಕ್ಷಾಂತರ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧದ ಹೊಸ ನಿಯಮಾವಳಿಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಶಾಲಾ ಶಿಕ್ಷಕರ ನೇಮಕಾತಿ ನಿಯಮದಲ್ಲಿ ನಿಯಮಾವಳಿಗೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದ ಕಾರಣ, ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿ ಮಾಡಲಾಗುತ್ತಿದೆ. ಅದ್ರಂತೆ, ಎಲ್ಲ ವರ್ಗಗಳಿಗೂ ವಯೋಮಿತಿಯಲ್ಲಿ 2 ವರ್ಷ ಏರಿಕೆಗೆ ನಿರ್ಧಾರ ಮಾಡಲಾಗಿದ್ದು, ಹೊಸ ನಿಯಮದನ್ವಯ ಎಸ್ಸಿ, ಎಸ್ಟಿ, ಪ್ರವರ್ಗ 1, ವಿಕಲಚೇತನರಿಗೆ 47 ವರ್ಷಗಳವರೆಗೆ ವಯೋಮಿತಿ ಸಿಗಲಿದೆ.
ಇನ್ನು ಪ್ರವರ್ಗ 2, 2ಬಿ, 3ಎ ಮತ್ತು 3ಬಿಗೆ 45 ವರ್ಷ ಮೀರಿರಬಾರದು. ಅದ್ರಂತೆ, ಸಾಮಾನ್ಯ ವರ್ಗಗಳಿಗೆ 42 ವರ್ಷ ಮೀರಿರಬಾರದು.
ಇದಲ್ಲದೇ ಶಿಕ್ಷಕರ ಹುದ್ದೆಯ ಆಯ್ಕೆಗಾಗಿ ನಡೆಸಲಾಗುತ್ತಿದ್ದಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಕನಿಷ್ಠ ಅಂಕಗಳ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಕನಿಷ್ಠ ನಿಯಮ ಅಂಕವನ್ನು ಇಳಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಅದರಂತೆ ಕಟಾಫ್ ಅಂಕಗಳು 60 ರಿಂದ 50ಕ್ಕೆ ಸರ್ಕಾರ ಇಳಿಸಿದೆ.