ರಾಯಚೂರು : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ-3ಎ ವಿವಿಧ ಅರ್ಹ ಸಮುದಾಯದ ಜನರ ಆರ್ಥಿಕ ಅಭಿವೃದ್ದಿಗಾಗಿ 2022-23ನೇ ಸಾಲಿನಲ್ಲಿ ವಿವಿಧ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗಮ ಹಳ್ಳಿಕಾರ್, ಒಕ್ಕಲಿಗ, ನಾಮದಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, (Gouda), ಗೌಡ, (Gowda) ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡರ್, ನಾಮದಾರಿಗೌಡ, ಉಪ್ಪಿನ ಕೊಳಗ ಅಥವಾ ಉತ್ತಮ ಕೊಳಗ, ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿಬೇಕು.
ಸ್ವಯಂ ಉದ್ಯೋಗ ಸಾಲ ಯೋಜನೆ: ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಘಟಕ ವೆಚ್ಚ 50,000/- ರೂ.ಗಳವರೆಗೆ ಶೇ.20ರಷ್ಟು ಸಹಾಯಧನ (ಗರಿಷ್ಠ 10,000/- ರೂ.) ಶೇಕಡ 80ರಷ್ಟು ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ 50,001/-ರಿಂದ 1,00,000/-ರೂ.ಗಳವರೆಗೆ ಶೇ.20ರಷ್ಟು ಸಹಾಯಧನ (ಗರಿಷ್ಠ.20,000/-ರೂ) ಶೇಕಡ 80ರಷ್ಟು ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು.
ಘಟಕ ವೆಚ್ಚ 1,00,001/-ರಿಂದ 2,00,000/- ರೂ.ಗಳವರೆಗೆ ಶೇ.15ರಷ್ಟು ಸಹಾಯಧನ (ಗರಿಷ್ಠ 30,000/-ರೂ.) ಶೇಕಡ 80ರಷ್ಟು ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು.
ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ/ ಸರಕು ಸಾಗಣಿಕೆ ವಾಹನ ಕೊಳ್ಳಲು ಸಹಾಯಧನ ಯೋಜನೆ: ಟೂರಿಸ್ಟ್ ಟ್ಯಾಕ್ಸಿ ಕೊಳ್ಳಲು ಬ್ಯಾಂಕುಗಳು ಮಂಜೂರು ಮಾಡುವ ಸಾಲದ ಮೊತ್ತದಲ್ಲಿ ಶೇ 50ರಷ್ಟು ಗರಿಷ್ಠ 3,00,000/-ರೂ.ಲಕ್ಷದಂತೆ ನಿಗಮದಿಂದ ಸಹಾಯಧನ ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲದ ಮೊತ್ತವಾಗಿರುತ್ತದೆ. ಸಾಲದ ಅಸಲು ಮತ್ತು ಬಡ್ಡಿಯನ್ನು ಬ್ಯಾಂಕ್ ನಿಗದಿಪಡಿಸಿದ ಕಂತುಗಳ ಅನ್ವಯ ಬ್ಯಾಂಕಿಗೆ ಮರುಪಾವತಿಸಬೇಕು.
ಗಂಗಾ ಯೋಜನೆ, ವೈಯಕ್ತಿಕ ಕೊಳವೆ ಬಾವಿ ಯೋಜನೆ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚ ರೂ.4.00ಲಕ್ಷ ನಿಗದಿಪಡಿಸಿದ್ದು, ಇದರಲ್ಲಿ ರೂ.3.50 ಲಕ್ಷ ಸಹಾಯಧನ ಹಾಗೂ ರೂ.50,000/-ರೂ.ಗಳ ಶೇ.4ರ ಬಡ್ಡಿ ದರದ ಸಾಲ ಒಳಗೊಂಡಿರುತ್ತದೆ. ಉಳಿಕೆ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ2.00ಲಕ್ಷ ನಿಗದಿಪಡಿಸಿದ್ದು, ಇದರಲ್ಲಿ 1.50 ಲಕ್ಷ ರೂ.ಗಳ ಸಹಾಯಧನ ಉಳಿಕೆ ಮೊತ್ತ ರೂ.50,000/-ರೂ.ಗಳ ಶೇ.4ರ ಬಡ್ಡಿ ದರದಲ್ಲಿ ಸಾಲ. ಪ್ರತಿ ಕೊಳವೆ ಬಾವಿಗೆ ವಿದ್ಯೂದ್ದೀಕರಣಕ್ಕೆ ರೂ.50,000/- ಗಳಂತೆ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಭರಿಸಲಾಗುವುದು. ಅಲ್ಲದೆ ಈ ಯೋಜನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡುಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 01 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊAಡAತೆ ಇರುವ ಕನಿಷ್ಠ 02ಎಕರೆ ಜಮೀನು ಇರಬೇಕು.
ಸಾಮೂಹಿಕ ನೀರಾವರಿ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಕನಿಷ್ಠ 03 ಜನ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ 8-15 ಎಕರೆ ಜಮೀನಿಗೆ 4 ರೂ.ಲಕ್ಷ ವೆಚ್ಚದಲ್ಲಿ 02ಕೊಳವೆ ಬಾವಿ ಮತ್ತು 15ಎಕರೆಗಿಂತ ಹೆಚ್ಚಿನ ಜಮೀನಿಗೆ 6ರೂ.ಗಳ ವೆಚ್ಚದಲ್ಲಿ 03ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಪ್ರತಿ ಕೊಳವೆ ಬಾವಿಗೆ ವಿದ್ಯೂದ್ದೀಕರಣಕ್ಕೆ 50,000/- ರೂ.ಗಳಂತೆ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಭರಿಸಲಾಗುವುದು.
ಸ್ವಾತಂತ್ರö್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ: ಒಕ್ಕಲಿಗ ಸಮುದಾಯದ ಯುವಜನತೆಯನ್ನು ಕೌಶಲ್ಯ ಅಭಿವೃದ್ದಿಪಡಿಸಿ ಉದ್ಯೋಗಮುಖಿಯನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ IಖಿIs,ಉಖಿಖಿಅ, ಏಉಖಿಖಿI ಇತ್ಯಾದಿಗಳಲ್ಲಿ ಅಲ್ಪಾವಧಿ ಕೋರ್ಸಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಕೌಶಲ್ಯ ಕರ್ನಾಟಕ ತಂತ್ರಾಶದ https://www.kaushalkar.com ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಪೂರಕ ಮಾಹಿತಿ ಹಾಗೂ ಉಚಿತ ಅರ್ಜಿ ಸಲ್ಲಿಕೆಗೆ ನಿಗಮದ ಅಧಿಕೃತ ಜಾಲತಾಣದಲ್ಲೂ ಲಭ್ಯವಿದೆ. ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಒಕ್ಕಲಿಗ ಸಮುದಾಯದ ಫಲಾಪೇಕ್ಷಿಗಳು ಯೋಜನೆಗಳ ಷರತ್ತು ಮತ್ತು ನಿಬಂಧನೆಗಳನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ನಿಗಮದ ವೆಬ್ಸೈಟ್ https://kvcdc.karnataka.gov.in ನಲ್ಲಿ ವೀಕ್ಷಿಸಬಹುದಾಗಿದ್ದು, ಅರ್ಜಿಯನ್ನು ನಿಗಮದ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ 2022ರ ಆ.18ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ https://kvcdc.karnataka.gov.in ನಲ್ಲಿ ಅಥವಾ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ: 080-29904268 ಅಥವಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ: 08532-250440ಗೆ ಸಂಪರ್ಕಿಸುವAತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.