ದೆಹಲಿ: ಪತ್ರಿಕೆ, ಟಿವಿ ಮಾಧ್ಯಮಗಳ ರೀತಿಯಲ್ಲೇ ಡಿಜಿಟಲ್ ಮಾಧ್ಯಮಗಳ ನೋಂದಣಿ ಕ್ರಮ ಜಾರಿಗೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಡಿಜಿಟಲ್ ಮಾಧ್ಯಮಗಳು ಹೇಗಿರಬೇಕು? ಅವುಗಳ ನೋಂದಣಿಗೆ ಯಾವ ಕ್ರಮ ಅನುಸರಿಸಬೇಕು? ಡಿಜಿಟಲ್ ಮಾಧ್ಯಮಗಳ ಸ್ವರೂಪ ಹಾಗೂ ಕಾರ್ಯನಿರ್ವಹಣೆ ಹೇಗಿರಬೇಕು? ಎಂಬ ಬಗ್ಗೆ ಚರ್ಚೆಗಳು ಸಾಗಿವೆ. ಅದರ ಜೊತೆಯಲ್ಲೇ ಡಿಜಿಟಲ್ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Viral News : ಒಂದೇ ಬೈಕ್ನಲ್ಲಿ ಪತ್ನಿ, 5 ಮಕ್ಕಳು, 2 ನಾಯಿ, 2 ಕೋಳಿಯೊಂದಿಗೆ ಪ್ರಯಾಣಿಸ್ತಿರೋ Videoʼ | Watch
ಈ ಕುರಿತಂತೆ ಜೈಪುರದಲ್ಲಿ ಮಾಧ್ಯಮ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್, ಡಿಜಿಟಲ್ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂಬ ಸುಳಿವನ್ನು ನೀಡಿದ್ದಾರೆ. ಈ ಸಂಬಂಧ ಅವರು ಹಂಚಿಕೊಂಡಿರು ಕೆಲವು ಮಾಹಿತಿ ಗಮನಸೆಳೆದಿದೆ.
Viral News : ಒಂದೇ ಬೈಕ್ನಲ್ಲಿ ಪತ್ನಿ, 5 ಮಕ್ಕಳು, 2 ನಾಯಿ, 2 ಕೋಳಿಯೊಂದಿಗೆ ಪ್ರಯಾಣಿಸ್ತಿರೋ Videoʼ | Watch
ಡಿಜಿಟಲ್ ಮಾಧ್ಯಮಗಳ ಕ್ರಾಂತಿಗೂ ಮುನ್ನ ಸುದ್ದಿಗಾಗಿ ಜನರು ಪತ್ರಿಕೆ ಹಾಗೂ ಚಾನೆಲ್ಗಳನ್ನು ಅವಲಂಬಿತರಾಗಿದ್ದರು. ಇದೀಗ ಡಿಜಿಟಲ್ ಮಾಧ್ಯಮಗಳೇ ಮುಂಚೂಣಿಯಲ್ಲಿವೆ. ಆದರೆ ಅವುಗಳ ನೋಂದಣಿ ಮತ್ತು ನಿಯಂತ್ರಣಕ್ಕೆ ಅದರದ್ದೇ ಆದ ಕಾನೂನು ಇಲ್ಲ. ಈ ಸಂಬಂಧ ಸೂಕ್ತ ನಿಯಮಾವಳಿ ರೂಪಿಸುವ ಬಗ್ಗೆ ಪ್ರಕ್ರಿಯೆ ಸಾಗಿವೆ ಎಂದವರು ತಿಳಿಸಿದ್ದಾರೆ. ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ, ಸುದ್ದಿ ಸಂವಹನವು ಬಹು ಆಯಾಮವಾಗಿದೆ. ಹಾಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
Viral News : ಒಂದೇ ಬೈಕ್ನಲ್ಲಿ ಪತ್ನಿ, 5 ಮಕ್ಕಳು, 2 ನಾಯಿ, 2 ಕೋಳಿಯೊಂದಿಗೆ ಪ್ರಯಾಣಿಸ್ತಿರೋ Videoʼ | Watch
ಮಾಧ್ಯಮ ನಿಯಂತ್ರಣ ವ್ಯವಸ್ಥೆ ಸಾಧ್ಯವೇ?
ಡಿಜಿಟಲ್ ಮಾಧ್ಯಮಗಳೇ ಈಗ ಮಾಧ್ಯಮ ಸಂಸ್ಥೆಗಳಿಗೆ ಆಧಾರ. ಪತ್ರಿಕೆ, ಚಾನೆಲ್ಗಳಿಗಿಂತ ಡಿಜಿಟಲ್ ಮಾಧ್ಯಮಗಳೇ ಜನಪ್ರಿಯ ಆಗುತ್ತಿರುವುದರಿಂದ ಬಹುತೇಕ ಮಾಧ್ಯಮ ಸಂಸ್ಥೆಗಳು ಡಿಜಿಟಲ್ ಕ್ಷೇತ್ರಕ್ಕೂ ಒತ್ತು ನೀಡಿವೆ. ಹಾಗಾಗಿ ನಿಯಂತ್ರಣಾ ವ್ಯವಸ್ಥೆ ಹಾಗೂ ಮಾನ್ಯತೆಯ ಸೌಲಭ್ಯ ಸಿಗಬೇಕೆಂಬುದು ಮಾಧ್ಯಮ ಕ್ಷೇತ್ರದ ಬಹುದಿನಗಳ ಆಗ್ರಹವಾಗಿದೆ. ಇದೀಗ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
Viral News : ಒಂದೇ ಬೈಕ್ನಲ್ಲಿ ಪತ್ನಿ, 5 ಮಕ್ಕಳು, 2 ನಾಯಿ, 2 ಕೋಳಿಯೊಂದಿಗೆ ಪ್ರಯಾಣಿಸ್ತಿರೋ Videoʼ | Watch
ಮುಂದೇನಾಗಬೇಕಿದೆ..? ಮಾಧ್ಯಮಗಳ ನಿರೀಕ್ಷೆ..!
-
‘ಸದ್ಯ ದೇಶದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಉತ್ತಮ ಭವಿಷ್ಯವಿದೆ ಹಾಗೂ ಸವಾಲುಗಳು ಕೂಡ ಇವೆ.
-
ಇವೆರಡನ್ನು ಸರಿದೂಗಿಸಲು ಹೊಸ ಕಾನೂನಿನ ಅವಶ್ಯಕತೆ ಇದೆ’ ಎಂಬುದು ಹಲವರ ಪ್ರತಿಪಾದನೆ
-
ನಾವು ಮಸೂದೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ.
-
ಪ್ರಸ್ತುತ ಇರುವ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಕಾಯ್ದೆ 1867ರ ಬದಲಿಗೆ ಹೊಸ ಕಾನೂನನ್ನು ಜಾರಿಗೆ ತರುವತ್ತ ಕೇಂದ್ರ ಸರ್ಕಾರ ಒಲವು ತೋರಿದೆ.
https://kannadanewsnow.com/kannada/video-of-a-man-riding-a-bike-with-his-wife-5-children-2-dogs-and-2-chickens-watch/
-
ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪತ್ರಕರ್ತರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಸಿಗಲಿದೆ.
-
ಈ ರೀತಿ ನಿಯಮಾವಳಿಗಳು ಸರಳೀಕರಣವಾದಲ್ಲಿ ಪತ್ರಕರ್ತರಿಗೆ ಸೂಕ್ತ ಸವಲತ್ತುಗಳು ಸಿಗಲಿವೆ.
-
ಪತ್ರಿಕೆಗಳನ್ನು ಹಾಗೂ ಡಿಜಿಟಲ್ ಮಾಧ್ಯಮಗಳನ್ನು ಒಂದೇ ವೇದಿಕೆಯಲ್ಲಿ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
-
ಪತ್ರಿಕೆಗಳ ನೋಂದಣಿ ರೀತಿಯಲ್ಲೇ ಡಿಜಿಟಲ್ ಮಾಧ್ಯಮಗಳ ನೋಂದಣಿ ಪ್ರಕ್ರಿಯೆಯನ್ನು ನೆರವೇರಿಸಬಹುದು.
-
ಪ್ರಸಕ್ತ ಪತ್ರಿಕೆಗಳ ನೋಂದಣಿಗೆ ಸುಮಾರು 4 ವಾರಗಳು ತಗಲುತ್ತವೆ. ಹೊಸ ಕಾನೂನು ಜಾರಿಗೆ ಬಂದಲ್ಲಿ ಪತ್ರಿಕೆ, ಡಿಜಿಟಲ್ ಮಾಧ್ಯಮಗಳ ನೋಂದಣಿ ಒಂದು ವಾರದಲ್ಲಿ ನಡೆಯಬಹುದಾಗಿದೆ.
-
ಇದೇ ವೇಳೆ, ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಒಂದೇ ಸೂರಿನಡಿ ತರುವ ಚಿಂತನೆಯೂ ನಡೆದಿದೆ
https://kannadanewsnow.com/kannada/video-of-a-man-riding-a-bike-with-his-wife-5-children-2-dogs-and-2-chickens-watch/