ಬೆಂಗಳೂರು : ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ಅನಗತ್ಯ ಆಧಾರ ರಹಿತ ಆರೋಪ ಮಾಡುತ್ತಿರುವ ಮೂಲಕ ಹಳೆಯ ಟೇಪನ್ನೇ ರಿಪೀಟ್ ಮಾಡುತ್ತಿದ್ದಾರೆ. ಭಾರತ ಜೋಡೊ ಪಾದಯಾತ್ರೆ ಫಲ ನೀಡಿಲ್ಲ ಎನ್ನುವುದು ಅವರಿಗೆ ಅರಿವಾದಂತಿದೆ. ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
•ಕಳೆದ ಒಂದು ವರ್ಷದಿಂದ ಮಾಡುತ್ತಿರುವ ಆರೋಪಕ್ಕೆ ಯಾವುದೇ ದಾಖಲೆ ನೀಡದೇ ಈಗ ಹೊಸ ರಾಗದಲ್ಲಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು. ಇದು ಕಾಂಗ್ರೆಸ್ ನ ಟೂಲ್ ಕಿಟ್. ಮಾನ್ಯ ಸುರ್ಜೇವಾಲಾ ಅವರೇ
ಅವರೇ ನಿಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರದ ದೊಡ್ಡ ಪಟ್ಟಿಯೇ ದೇಶದ ಜನರ ಮುಂದಿದೆ. ಹಾಸಿಗೆ ದಿಂಬು, ರಿಡೂ ಹಗರಣ, ಸೋಲಾರ್ ಹಗರಣಕ್ಕೆ ಉತ್ತರ ಕೊಡುವಿರಾ? ಎಂದು ವಾಗ್ಧಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಹಬ್ಬದ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದ್ದು, ಸುರ್ಜೆವಾಲಾ ಅವರು ಈ ಬಗ್ಗೆ ರಾಜ್ಯದಲ್ಲಿರುವ ತಮ್ಮ ಪಕ್ಷದ ನಾಯಕರಿಂದ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆಶಿ ಅವರು ಐಫೋನ್ ಗಿಫ್ಟ್ ನೀಡಿದ್ದು, ಮಾಜಿ ಸಚಿವರು ಲ್ಯಾಪ್ ಟಾಪ್ ಹಂಚಿದ್ದು, ಗೋಲ್ಡ್ ಕಾಯಿನ್ ಹಂಚಿಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲದಿದ್ದರೆ, ಪಕ್ಷದ ರಾಜ್ಯ ಉಸ್ತುವಾರಿಯಾಗಿ, ನಿಮ್ಮ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳಿತು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆಶಿ ಅವರು ಐಫೋನ್ ಗಿಫ್ಟ್ ನೀಡಿದ್ದು, ಮಾಜಿ ಸಚಿವರು ಲ್ಯಾಪ್ ಟಾಪ್ ಹಂಚಿದ್ದು, ಗೋಲ್ಡ್ ಕಾಯಿನ್ ಹಂಚಿಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲದಿದ್ದರೆ, ಪಕ್ಷದ ರಾಜ್ಯ ಉಸ್ತುವಾರಿಯಾಗಿ, ನಿಮ್ಮ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳಿತು.#CongressLies pic.twitter.com/hhZo2N9HAo
— BJP Karnataka (@BJP4Karnataka) October 29, 2022
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕಾಂಗ್ರೆಸ್ ನೆಲಸಮ ಆಗಲಿದೆ : ಸಚಿವ ಶ್ರೀರಾಮುಲು |Sri Ramulu
ನಿಮ್ಮ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳಿತು: ಟ್ವಿಟ್ ನಲ್ಲಿ ಕಾಂಗ್ರೆಸ್ ಕುಟುಕಿದ ಬಿಜೆಪಿ