ಚಿತ್ರದುರ್ಗ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವಂತ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ( Murugha Matt Swamiji ) ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೋ ( POSCO Case ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೇ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಈ ನಡುವೆಯೂ ಅವರ ಬೆಂಬಲಕ್ಕೆ ಸ್ವಾಮೀಜಿಗಳ ದಂಡು ನಿಂತಿದೆ. ಆರೋಪ ಮುಕ್ತರಾಗಿ ಬರಲಿದ್ದಾರೆ ಎಂಬುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

BREAKING NEWS : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಇಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ಹಲವು ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದಂತ ರಾಮನಗರ ಜಿಲ್ಲೆಯ ಮರಳಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿಯವರು, ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವಂತ ಪ್ರಕರಣ ಷಡ್ಯಂತ್ರದ್ದಾಗಿದೆ. ಅವರು ಆರೋಪ ಮುಕ್ತರಾಗಿ ಬರಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು.

BIG NEWS: ʻಪತಿಯ ಕಚೇರಿಗೆ ಪತ್ನಿ ಹೋಗಿ ನಿಂದಿಸುವುದು ಕ್ರೌರ್ಯಕ್ಕೆ ಸಮಾನʼ: ಛತ್ತೀಸ್‌ಗಢ ಹೈಕೋರ್ಟ್

ಇನ್ನೂ ವೈಚಾರಿಕ ಬೆಳವಣಿಗೆ ಸಹಿಸದೇ ಸ್ವಾಮೀಜಿಗಳ ವಿರುದ್ಧ ಈ ಷಡ್ಯಂತ್ರ ನಡೆಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಶ್ರೀಮಠಕ್ಕೆ ಕಪ್ಪು ಮಸಿ ಬಳಿಯುವಂತ ಯತ್ನ ನಡೆದಿದೆ. ವೈಚಾರಿಕ ಕ್ರಾಂತಿಯಿಂದ ನಾಡಿನಾಧ್ಯಂತ ಪ್ರಸಿದ್ಧಿಯನ್ನು ಮುರುಘಾ ಶರಣರು ಗಳಿಸಿದ್ದರು. ಇದನ್ನು ಸಹಿಸದೇ ಕೆಲವು ಶಕ್ತಿಗಳಿಂದ ಷಡ್ಯಂತ್ರ ನಡೆಸಲಾಗಿದೆ ಎಂಬುದಾಗಿ ಕಿಡಿಕಾರಿದರು.

BIGG NEWS : ಮುರುಘಾ ಶ್ರೀಗಳ ಭೇಟಿ ಬಳಿಕ ಶಾಸಕ ತಿಪ್ಪಾರೆಡ್ಡಿ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ

Share.
Exit mobile version