ಮಂಡ್ಯ : ನಮ್ಮ ಬಾಲಗಂಗಾಧರ ನಾಥ ಸ್ವಾಮೀಗಳು ಒಂದು ಹೆಜ್ಜೆಯನ್ನ ಹಾಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು,ಎಲ್ಲರನ್ನು ಭಾವೈಕ್ಯತೆ ಕಂಡು, ಬಡವ ಶ್ರೀಮಂತ ಎನ್ನದೆ ಎಲ್ಲರನ್ನು ಒಂದೇ ತರ ನೋಡ್ತಾ ಹೆಜ್ಜೆ ಹಾಕ್ತಿದ್ರು.ಆದ್ರೆ ಇತ್ತೀಚಿನ ದಿನದಲ್ಲಿ ಅದು ಅಳಿಸಿ ಹೋಗ್ತಿದ ಎಂದು ಶ್ರೀಮಠ ಹಾಗು ಶ್ರೀಮಠದ ಸ್ವಾಮೀಜಿ ವಿರುದ್ದ ಕಿಡಿ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಶ್ರೀರಂಗಪಟ್ಟಣದಲ್ಲಿ ನಡೆದ BGS ಮಠದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.
ಈ ಬಹಿರಂಗ ಹೇಳಿಕೆಗೆ ವೇದಿಕೆಯಲ್ಲೇ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಟಕ್ಕರ್ ಕೊಟ್ಟಿದ್ದು, ಶ್ರೀ ಮಠದ ಬಗ್ಗೆ ಮಾತನಾಡುವಷ್ಟು ದೊಡ್ಡವನಾಬಿಟ್ಟಿದ್ಯ ಬೇಸರ ಎಂದು ಆಕ್ರೋಶ ಹೊರಹಾಕಿದ್ದಾರೆ. ನಾನು ಕೂಡ ಒಮ್ಮೆ ಮಾತನಾಡಿ ಬಳಿಕ ಸ್ವಾಮೀಜಿಗಳ ಎದುರೇ ಕ್ಷಮೆ ಕೇಳಿದ್ದೀನಿ. ಈ ರೀತಿ ಶ್ರೀಮಠ ಮತ್ತು ಶ್ರೀಗಳ ವಿರುದ್ದ ಮಾತನಾಡಬಾರದು ಎಂದು ಟಕ್ಕರ್ ಕೊಟ್ಟಿದ್ದರೆ.
ಶ್ರೀಮಠದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವಂತೆ ಬಿಜೆಪಿ ಮುಖಂಡ ಸಚ್ಚಿದಾನಂದ ಸಲಹೆ. ನೀಡಿದರು. ಈಗಲಾದರು ಅವರಿಗೆ ಕಾಲಭೈರವೇಶ್ವರ ಬುದ್ದಿ ಕೊಡಲಿ ಎಂದು ವ್ಯಂಗ್ಯವಾಡಿದರು. ಬಹಿರಂಗ ವೇದಿಕೆಯಲ್ಲಿ ಶ್ರೀಮಠ ಹಾಗು ಚುಂಚಶ್ರೀ ಸ್ವಾಮೀಜಿಗಳ ಬಗ್ಗೆ ಮಾತನಾಡಿದ್ದ ಒಕ್ಕಲಿಗ ಸಮುದಾಯ ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್ ಶಾಸಕ








