ಬೆಂಗಳೂರು: ಸ್ಪೀಕರ್ ಪೀಠಕ್ಕೆ ಅಗೌರವ ತೋರಿದಂತ ಬಿಜೆಪಿ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಇಂತಹ ಶಾಸಕರ ಅಮಾನತು ವಿಚಾರ ಈಗ ರಾಜಭವನದ ಅಂಗಳಕ್ಕೆ ತಲುಪಿದೆ. ಸದನ ಮುಂದೂಡಲ್ಪಟ್ಟ ಕೂಡಲೇ ರಾಜ್ಯಪಾಲರನ್ನು ಬಿಜೆಪಿ ಶಾಸಕರು ಭೇಟಿಯಾಗೋದಾಗಿ ತಿಳಿದು ಬಂದಿದೆ.
ಇಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಗದ್ದಲ, ಕೋಲಾಹಲ ಉಂಟು ಮಾಡಿದರು. ಅಲ್ಲದೇ ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ತೋರಲಾಯಿತು. ಈ ಹಿನ್ನಲೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು ಬಿಜೆಪಿಯ 18 ಶಾಸಕರಾದಂತ ದೊಡ್ಡನಗೌಡ ಪಾಟೀಲ್, ಅಶ್ವಥನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಮ್ ಆರ್ ಪಟೇಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯನ್, ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರಿಶ್ ಬಿ ಪಿ, ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ, ಚಂದ್ರು ಲಮಾಣಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದರು.
ಈ ಬೆನ್ನಲ್ಲೇ ಬಿಜೆಪಿ ಶಾಸಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನಕ್ಕೆ ಭೇಟಿ ನೀಡಿ ಈ ವಿಚಾರದ ಕುರಿತಂತೆ ದೂರು ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇಲ್ಲಿದೆ ರಾಜ್ಯ ವಿಧಾನಸಭೆಯಿಂದ ಅಮಾನತುಗೊಂಡ ’18 ಬಿಜೆಪಿ ಶಾಸಕ’ರ ಪಟ್ಟಿ | Karnataka Assembly
BREAKING: ಧರ್ಮಸ್ಥಳದ ಬಗೆಗಿನ ವಿವಾದಾತ್ಮಕ ವಿಡಿಯೋ ತೆಗೆದು ಹಾಕುವಂತೆ ‘ಮೊಹಮ್ಮದ್ ಸಮೀರ್’ಗೆ ಕೋರ್ಟ್ ಆದೇಶ.!