ಶಿವಮೊಗ್ಗ: ಶಂಕಿತ ಉಗ್ರ ಮಾಜ್ ತಂದೆ ಮನೀರ್ ಅಹಮದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮನೀರ್ ಅಹಮದ್, ಚಿಕಿತ್ಸೆ ಫಲಿಸದೇ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
BIG NEWS: ಉತ್ತರಾಖಂಡ ಬಾಲಕಿಯ ಕೊಲೆ ಪ್ರಕರಣ; ಬಿಜೆಪಿ ನಾಯಕನ ಮಗ ಅರೆಸ್ಟ್ | BJP leader’s son arrest
ತೀರ್ಥಹಳ್ಳಿ ಮೂಲದವರಾದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು. ಆದರೆ ತಮ್ಮ ಮಗ ಮಾಜ್ ಉಗ್ರರೊಂದಿಗೆ ನಂಟು ಹೊಂದಿದ ವಿಷಯ ಕೇಳಿ ಮುನೀರ್ ಅಹಮದ್ ನೊಂದಿದ್ದರು. ಇದೇ ಕಾರಣದಿಂದಾಗಿ ಹೃದಯಾಘಾತ ಸಂಭವಿಸಿರಬಹುದು ಎನ್ನಲಾಗಿದೆ. ಮುನೀರ್ ಅಹಮದ್ ತೀರ್ಥಹಳ್ಳಿಯ ಪ್ರತಿಷ್ಟಿತ ಕುಟುಂಬದವರಾಗಿದ್ದು, ಮುನೀರ್ ಅಹಮದ್ ತಂದೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು. ಇಂದು ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಶಂಕಿತ ಉಗ್ರ ಮಾಜ್ನನ್ನು ತಂದೆಯ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.