ಮಂಗಳೂರು : ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿಯಲ್ಲ ಹಳ್ಳಿಯ ಸಂಸದ. ಎಚ್ ಡಿ ದೇವೇಗೌಡ ಕುಮಾರಸ್ವಾಮಿ ನಮ್ಮಲ್ಲಿ ಎಂಪಿ ಆಗಿದ್ದರು. ಹಳೆ ಎಂಪಿಗಳು ಹಾಗೂ ಈ ಎಂಪಿ ವ್ಯತ್ಯಾಸ ಜನ ನೋಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಯಾರೇ ನಿಂತರೂ ಕೂಡ ಸ್ವಾಗತಿಸುತ್ತೇವೆ. ಎಂದು ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಮಂಗಳೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಆವರು,ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿದರು ಬೇಸರವಿಲ್ಲ.ಅಷ್ಟೆ ಅಲ್ಲ ಯಾರೇ ಸ್ಪರ್ಧೆ ಮಾಡಿದರು ಸ್ವಾಗತಿಸುತ್ತೇನೆ. ಎಚ್ ಡಿ ದೇವೇಗೌಡ ಕುಮಾರಸ್ವಾಮಿ ವಿರುದ್ಧ ನಿಂತಿದ್ದವನು ನಾನು. ನನ್ನ ಸಹೋದರನ ವಿರುದ್ಧ ಅನಿತಾ ಸ್ಪರ್ಧೆ ಮಾಡಿದಾಗಲೂ ಗೆದ್ದಿದ್ದೇನೆ. ಬಿಜೆಪಿ-ಜೆಡಿಎಸ್ ನನ್ನ ಸಹೋದರನ ವಿರುದ್ಧ ಸ್ಪರ್ಧಿಸಿದಾಗಲೂ ಗೆದ್ದಿದ್ದೇನೆ ಎಂದು ಅವರು ತಿಳಿಸಿದರು.
ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ ಅಸಾಧ್ಯವೂ ಅಲ್ಲ. ರಾಜಕಾರಣ ಸಾಧ್ಯಗಳ ಕಲೆ ಇಲ್ಲಿ ಬದಲಾವಣೆಯ ವಿಶ್ವಾಸವಿದೆ. ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡುತ್ತಿದ್ದೇವೆ. ಈ ಭಾಗದಲ್ಲಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಇಲ್ಲಿನ ಜನ ಉದ್ಯೋಗಕ್ಕಾಗಿ ಬೇರೆ ಕಡೆ ತೆರಳುತ್ತಿದ್ದಾರೆ. ಸೌದಿ ಬೆಂಗಳೂರು ಮುಂಬೈ ಕಡೆ ಇಲ್ಲಿನ ಜನ ಹೋಗುತ್ತಿದ್ದಾರೆ.
ಇಲ್ಲಿ ಧರ್ಮ ರಾಜಕೀಯ ಇದೆ ಬಿಜೆಪಿ ಅಭಿವೃದ್ಧಿ ಮಾಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಬಗ್ಗೆ ನಾವು ಹೊಸ ಆಲೋಚನೆ ಮಾಡುತ್ತೇವೆ. ವ್ಯಾಪಾರ ವಹಿವಾಟ ನಡೆದು ಜನರಿಗೆ ಉದ್ಯೋಗ ಸಿಗಬೇಕು. ನಮ್ಮ ರಾಜ್ಯಕ್ಕೆ ಅನ್ಯಾಯ ಆದಾಗ ಬಿಜೆಪಿಯವರು ಮಾತನಾಡಿಲ್ಲ. ಬಜೆಟ್ ನಲ್ಲಿ ಜಿಲ್ಲೆಗೂ ಕೊಟ್ಟಿದ್ದೇವೆ ಮುಸ್ಲಿಮರಿಗೆ ಕೊಡಬಾರದ? ಎಂದು ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
BIG BREAKING : ಕರ್ನಾಟಕದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ನಕ್ಸಲ್ ಸುರೇಶನ ಬಂಧನ
BREAKING:ಮುಂಬೈನಲ್ಲಿ ಭಾರೀ ಅಗ್ನಿ ಅವಘಡ: 15 ವಾಣಿಜ್ಯ ಘಟಕಗಳು, ಮನೆಗಳು ಬೆಂಕಿಗೆ ಆಹುತಿ | Fire Accident
BREAKING : ಪತ್ನಿಯ ಜೊತೆ ಅನೈತಿಕ ಸಂಬಂಧ ಶಂಕೆ : ಹಾವೇರಿಯಲ್ಲಿ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಅಣ್ಣ