ಬೆಂಗಳೂರು : ಕರ್ನಾಟದಲ್ಲಿ ಎಸಿಬಿ ರದ್ದುಗೊಳಿಸಿ ಹೊರಡಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿದೆ.
ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಕನಕರಾಜು ಎನ್ನುವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಡಿ.ವೈ ಚಂದ್ರಚೂಡ ನೇತೃತ್ವದ ಪೀಠ ಎಸಿಬಿ ರದ್ದು ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ಎಸಿಬಿಯಲ್ಲಿದ್ದಅರ್ಜಿಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದೆ, ಆದರೂ ಅರ್ಜಿದಾದರಿಗೆ ಅಸಮಾಧಾನ ಏಕೆ ಎಂದು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ/ ACB) ಸ್ಥಾಪನೆ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪು (High court) ಅನುಷ್ಠಾನಗೊಳಿಸಿರುವ ರಾಜ್ಯ ಸರಕಾರ, ಲೋಕಾಯುಕ್ತ (Lokayukta) ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯ ತನಿಖೆ ನಡೆಸುವ ಅಧಿಕಾರ ನೀಡಿ ಆದೇಶ ಹೊರಡಿಸಿತ್ತು.
2016ರಲ್ಲಿ ಎಸಿಬಿ ಸ್ಥಾಪನೆ, ಪೊಲೀಸ್ ಠಾಣೆಗಳ ಆಧಿಕಾರ, ತನಿಖಾಧಿಕಾರ ತಕ್ಷಣ ಹಿಂಪಡೆಯಲಾಗಿದೆ. ಜತೆಗೆ, ಎಸಿಬಿಯಲ್ಲಿರುವ ತನಿಖಾ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವಂತೆ ಆದೇಶ ಹೊರಡಿಸಲಾಗಿತ್ತು.
BIGG NEWS : ರಾಜ್ಯ ಸರ್ಕಾರಿ ನೌಕರರಿಗೆ ಬಹು ಮುಖ್ಯ ಮಾಹಿತಿ : ‘KGID’ ಆನ್ ಲೈನ್ ಸೇವೆ ಆರಂಭ