ಬಳ್ಳಾರಿ: ಮಾಜಿ ಶಾಸಕ ಬಸವರಾಜ ದಡೇಸೂಗೂರು ನನ್ನ ಗಂಡ ಎಂಬುದಾಗಿ ಹೇಳಿದ್ದಂತ ವಿಜಯನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯ ಮೇಲೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ವಿಜಯನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಮಹಿಳಾ ಅಧಿಕಾರಿ ಶ್ವೇತಾ ಅವರ ಮೊಬೈಲ್ ಪೋನ್ ಚೆಕ್ ಮಾಡಲಾಗಿತ್ತು. ಈ ವೇಳೆ ಹಣ ವಹಿವಾಟಿನ ವಿಚಾರ ಬೆಳಕಿಗೆ ಬಂದಿತ್ತು.
ಹಣದ ವಹಿವಾಟಿನ ಬಗ್ಗೆ ವಿಚಾರಿಸಿದಾಗ ನನ್ನ ಗಂಡ ಕಳಿಸಿದ್ದಾರೆ. ನನ್ನ ಗಂಡ ರಾಜಕಾರಣಿ. ನನ್ನ ಪತಿ ಮಾಜಿ ಶಾಸಕ ಬಸವರಾಜ ದಡೇಸೂಗೂರು ಎಂಬುದಾಗಿ ತಿಳಿಸಿದ್ದರು. ಮಹಿಳಾ ಅಧಿಕಾರಿ ಶ್ವೇತಾ ಈ ಉತ್ತರದಿಂದ ಉಪ ಲೋಕಾಯುಕ್ತರಿಗೆ ಸಮಾಧಾನವಾಗಿರಲಿಲ್ಲ. ಜೊತೆಗೆ ಭ್ರಷ್ಟಾಚಾರದ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿ, ತನಿಖೆಗೆ ಸೂಚಿಸಿದ್ದಾರೆ.
ಮಂಡ್ಯದಲ್ಲಿ ವಿಷಾಹಾರದಿಂದ ವಸತಿ ಶಾಲೆ ವಿದ್ಯಾರ್ಥಿ ಸಾವು: ಪರಿಹಾರ ನೀಡುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ
SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಕಲ್ಬುರ್ಗಿಯಲ್ಲಿ ‘ಮಂಗಳಮುಖಿಯನ್ನು’ ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ!