ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ನ ನೂತನ ಪ್ರಧಾನಿಯಾಗಿ ನೇಮಕವಾಗಿದ್ದಾರೆ. ಆದ್ರೆ, ಈ ವಿಷಯದ ಸಂತಸ ಬ್ರಿಟನ್ನಿಗಿಂತಲೂ ಹೆಚ್ಚು ಭಾರತೀಯರಲ್ಲಿ ಕಾಣುತ್ತಿದೆ. ” ಬ್ರಿಟಿಷರು 200 ವರ್ಷಗಳ ಕಾಲ ಭಾರತವನ್ನ ಆಳಿದ್ರು, ಈಗ ಭಾರತೀಯ ಮೂಲದವರು ಆ ದೇಶದ ಪ್ರಧಾನಿಯಾಗಿದ್ದಾರೆ. ಹೀಗಿರುವಾಗ ಟ್ವಿಟ್ಟರ್’ನಲ್ಲಿ ಫನ್ನಿ ಮೀಮ್ಸ್ ಮೂಲಕ ಜನ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ನಡುವೆ ತುಂಬಾ ತಮಾಷೆಯ ಘಟನೆಯೂ ನಡೆದಿದ್ದು, ಸುನಕ್ ಬ್ರಿಟನ್ ಪ್ರಧಾನಿಯಾದ್ರೆ, ಟೀಂ ಇಂಡಿಯಾದ ಮಾಜಿ ಬೌಲರ್ ಆಶಿಶ್ ನೆಹ್ರಾ ಅವರನ್ನ ನೆಟ್ಟಿಗರು ಅಭಿನಂದಿಸುತ್ತಿದ್ದಾರೆ.
ವಾಸ್ತವವಾಗಿ, ಇಬ್ಬರಿಗೆ ಬಹುತೇಕ ಹೋಲಿಕೆ ಇದ್ದು, ಎತ್ತರವು ಒಂದೇ ಆಗಿದೆ. ಹೀಗಾಗಿಜನರು ಮೋಜು ಕಂಡುಕೊಂಡಿದ್ದು, ಟ್ವಿಟರ್ನಲ್ಲಿ ನೆಹ್ರಾ ಮತ್ತು ಸುನಕ್ ಅವರ ಮೇಮ್ಗಳ ಪ್ರವಾಹವನ್ನ ಹರಿಸಿದ್ದಾರೆ. ಇಬ್ಬರೂ ಸಹೋದರರು ಮತ್ತು ಒಮ್ಮೆ ಕುಂಭಮೇಳದಲ್ಲಿ ಬೇರೆಯಾಗಿದ್ದಾರೆ ಎಂದು ಜನ ಹೇಳುತ್ತಿದ್ದಾರೆ.
ರಿಷಿ ಸುನಕ್ ಅವರನ್ನ ಅಪಹರಿಸಿ, ನೆಹ್ರಾ ಅವರನ್ನ ಬ್ರಿಟನ್ನ ಹೊಸ ಪ್ರಧಾನಿಯನ್ನಾಗಿ ಮಾಡಬೇಕು. ಆಗ ಅವ್ರು ಕೊಹಿನೂರ್ ವಜ್ರವನ್ನ ಹಿಂದಿರುಗಿಸಬಹುದು ಎಂದು ಟ್ವಿಟ್ಟರ್ನಲ್ಲಿ ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು, ಕುಂಭಮೇಳದಲ್ಲಿ ಸುನಕ್ ಮತ್ತು ನೆಹ್ರಾ ಇಬ್ಬರೂ ಕಳೆದುಹೋದಂತೆ ತೋರುತ್ತದೆ. ಒಬ್ಬ ಸಹೋದರ ಭಾರತದಲ್ಲಿ ಉಳಿದುಕೊಂಡಿದ್ದಾನೆ, ಇನ್ನೊಬ್ಬ ಬ್ರಿಟನ್ನಲ್ಲಿದ್ದಾನೆ” ಎಂದಿದ್ದಾರೆ. ಅಂತೆಯೇ, ಜನರು ತಮಾಷೆಯ ಮೀಮ್ಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನೆಹ್ರಾ ಮತ್ತು ರಿಷಿ ಸುನಕ್ ಅವರನ್ನು ಹೋಲಿಸುವ ಮೀಮ್ಗಳನ್ನ ನೋಡೋಣ.
Congratulations India.
Ashish Nehra is the new PM of UK.Here is picture, he is telling PM modi how to swing the ball. 🤣🤣 pic.twitter.com/ZSaegwlbnn
— Author Sagar ALLONE🗨 (@allone_sagar) October 24, 2022
Rishi Sunak and Ashish Nehra seem to be brothers who were estranged in Kumbh Ka Mela.#Rumor
😜😆 pic.twitter.com/rMSrFOZb3r— SOCRATES (@DJSingh85016049) October 24, 2022
Congratulations Ashish Nehra ji ❤️#ipl2022 bhi Jeet Gaye aab UK pr Raaj sahi hai 🤌😂#RishiSunak pic.twitter.com/ReDU9XKPWS
— Rahul Barman (@RahulB__007) October 24, 2022
#RishiSunak with #ViratKohli ❣️ pic.twitter.com/6IICYVwuxK
— Professor ngl राजा बाबू 🥳🌈 (@GaurangBhardwa1) October 24, 2022
ಅಂದ್ಹಾಗೆ, ನೆಹ್ರಾ ಜೊತೆಗೆ ಕೊಹಿನೂರ್ ಕೂಡ ಟ್ರೆಂಡಿಂಗ್ ಆಗಿದೆ. ಕೊಹಿನೂರ್ನ ವಾಪಸಾತಿಯ ಕನಸುಗಳನ್ನ ಜನ ಕಾಣುತ್ತಿದ್ದಾರೆ.
BIGG NEWS: ಶಾಸಕ ಬಸನಗೌಡ ಯತ್ನಾಳ್ ಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ; ಅಸಾದುದ್ದೀನ್ ಓವೈಸಿ ವಾಗ್ದಾಳಿ