ಮಂಡ್ಯ : ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಹಾಲಿ ಸಂಸದರಾಗಿರುವಂತಹ ಸುಮಲತಾ ಅಂಬರೀಶ್ ಅವರು ಬಿಜೆಪಿ ತನಗೆ ಟಿಕೆಟ್ ಕೊಡುತ್ತದೆ ಎಂದು ಬಹಳ ವಿಶ್ವಾಸ ಇಟ್ಟುಕೊಂಡಿದ್ದರು.ಆದರೆ ಇದೀಗ ಕೋಲಾರ್ ಹಾಸನ ಹಾಗೂ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಮೈತ್ರಿ ಪಕ್ಷವಾದ ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ.ಹೀಗಾಗಿ ಸುಮಲತಾ ಅಂಬರೀಶ್ ಅವರು ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಬಿಜೆಪಿ ಟಿಕೆಟ್ ಮಿಸ್ ಆಗಿರುವ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಅವರು ನಾಳೆ ಬೆಂಗಳೂರಿನಲ್ಲಿ ತಮ್ಮ ಆಪ್ತರು ಹಾಗೂ ಬೆಂಬಲಿಗರು ಒಂದಿಗೆ ಸುದೀರ್ಘವಾಗಿ ಒಂದು ಮಹತ್ವವಾದಂತಹ ಸಭೆ ನಡೆಸಲಿದ್ದಾರೆ.ಈ ಒಂದು ಸಭೆಯಲ್ಲಿ ಆಪ್ತರ ಹಾಗೂ ಬೆಂಬಲಿಗರ ಸಲಹೆಯನ್ನು ಪಡೆದು ತಮ್ಮ ಮುಂದಿನ ನಿರ್ಧಾರವನ್ನು ತಿಳಿಸಲಿದ್ದಾರೆ.ಹೀಗಾಗಿ ನಾಳೆ ನಡೆಯುವಂತಹ ಮಾತೃ ಸಭೆಯಲ್ಲಿ ಸುಮಲತಾ ಅಂಬರೀಶ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿ ಸಭೆಗೆ ಸುಮಲತಾ ಗೈರು
ಇಂದು ಮಂಡ್ಯದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು ಈ ಸಭೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದಂತ ನಾಯಕರಗಳ ಜೊತೆಗೆ ಈ ಒಂದು ಸಭೆಗೆ ಸಂಸದ ಸುಮಲತಾ ಅವರನ್ನು ಕೂಡ ಆಹ್ವಾನಿಸಿದ್ದರು ಆದರೆ ಈ ಒಂದು ಸಭೆಗೆ ಸುಮಲತಾ ಅವರು ಗೈರಾಗಿದ್ದದ್ದು ಕಂಡುಬಂದಿತು.
ಸಭೆಯ ನಂತರ ಮಾತನಾಡಿದ ವಿಜಯೇಂದ್ರ ಅವರು,ಮಂಡ್ಯ ಲೋಕಸಭಾ ಕ್ಷೇತ್ರ ನಮ್ಮ ಕೇಂದ್ರದ ವರಿಷ್ಠರು ತೀರ್ಮಾನ ಮಾಡಿದ್ದಾರೆ.ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಂತಹ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಜೆಡಿಎಸ್ ನಮ್ಮ ಜೆಡಿಎಸ್ ಮೈತ್ರಿ ಏನಿದೆ ಎಲ್ಲರೂ ಕೂಡ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದ ನಮ್ಮ ಎಲ್ಲಾ ಮುಖಂಡರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮುಖಂಡರ ಸಭೇ ಕರೆದಿದ್ದೇನೆ.ನಮ್ಮೆಲ್ಲರ ಗುರಿ ಒಂದೇನೆ ಮಂಡ್ಯ ಲೋಕಸಭಾ ಕ್ಷೇತ್ರ ಕೂಡ ಎನ್.ಡಿ.ಎ ಕೂಟಕ್ಕೆ ಸೇರಬೇಕು ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಶ್ರಮ ಹಾಕಬೇಕು ಆ ನಿಟ್ಟಿನಲ್ಲಿ ಸಭೆ ಕರೆದಿದ್ದೇನೆ ಅವರನ್ನು ಕೂಡ ನಾನು ಭೇಟಿ ಮಾಡುತ್ತೇನೆ ಎಂದರು.