ಬೆಂಗಳೂರು : ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರಕ್ಕೆ ಸಂಸದ ಸುಮಲತಾ ಅಂಬರೀಶ್ ಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬೆಂಬಲಿಗರ ಕಾರ್ಯಕರ್ತರು ಹಾಗೂ ಹಿತೈಷಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಏಪ್ರಿಲ್ 3 ರಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಮೊದಲು ಬೆಳಗಾವಿಯಲ್ಲಿನ ಅವರ ಮನೆ ವಿಳಾಸ ಕೇಳಿ : ಜಗದೀಶ್ ಶೆಟ್ಟರ್ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸಕ್ಕೆ ಇಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ಭೇಟಿ ಆರೋಗ್ಯಕರವಾಗಿದೆ ಎಂದು ಕುಮಾರಸ್ವಾಮಿ ಭೇಟಿ ನಂತರ ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಸಂಸದೆ ಸುಮಲತಾ ಅವರು ಈ ವೇಳೆ ತಿಳಿಸಿದರು.
ಬೆಂಗಳೂರಲ್ಲಿ ‘ವಿಂಟೇಜ್ ಕಾರ್, ಬೈಕ್’ಗಳ ರ‍್ಯಾಲಿ ಮೂಲಕ ‘ಮತದಾನ ಜಾಗೃತಿ’
ಚರ್ಚೆಯ ವೇಳೆ ಹಳೆಯದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸಹಕಾರ ನೀಡುವಂತೆ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಏಪ್ರಿಲ್ 3 ರಂದು ರಂದು ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿರುವ ಬಗ್ಗೆ ಅವರಿಗೆ ತಿಳಿಸಿದ್ದೇನೆ ಎಂದರು.
ಮೊಹಮ್ಮದ್ ಶಮಿ ದಾಖಲೆ ಮುರಿದ ‘ರಶೀದ್ ಖಾನ್’: ಅತಿ ಹೆಚ್ಚು ‘ವಿಕೆಟ್’ ಪಡೆದ ಬೌಲರ್ ಹೆಗ್ಗಳಿಕೆ
ಏಪ್ರಿಲ್ 3 ರಂದು ಮಂಡ್ಯದಲ್ಲಿ ನಡೆಯುವ ಸಭೆಯಲ್ಲಿ ದರ್ಶನ್ ಹಾಗೂ ಅಭಿಷೇಕ್ ಇರುತ್ತಾರೆ. ಬೆಂಬಲಿಗರು ಕಾರ್ಯಕರ್ತರು ಹಿತೈಷಿಗಳ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ. ಬೆಂಬಲಿಗರು ಕಾರ್ಯಕರ್ತರು ಹಿತೈಷಿಗಳ ಸೂಚನೆಯಂತೆ ಮುನ್ನಡೆಯುತ್ತೇನೆ. ಏಪ್ರಿಲ್ ಮೂರರಂದು ಮಂಡ್ಯದಲ್ಲಿ ನನ್ನ ನಿರ್ಧಾರ ಪ್ರಕಟಿಸುವೆ ಎಂದು ತಿಳಿಸಿದರು.