Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶುಗರ್ ಇರುವವರು ರಾತ್ರಿ ‘ಜೋಳದ ರೊಟ್ಟಿ’ ತಿಂದ್ರೆ ಏನಾಗುತ್ತೆ ಗೊತ್ತಾ.?

10/02/2026 9:10 PM

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

10/02/2026 8:51 PM

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’
KARNATAKA

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

By kannadanewsnow0910/02/2026 8:51 PM

ಬೆಂಗಳೂರು: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಸುಜಾ ಕೆ.ಜೆ. ಜಾರ್ಜ್ ಅವರು ಪ್ರಮಾಣಪತ್ರ ವಿತರಿಸಿದರು.

ಕೆ.ಜಿ. ಹಳ್ಳಿಯಲ್ಲಿ ಸ್ಥಾಪಿಸಿರುವ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿದ ಸುಜಾ ಕೆ.ಜೆ.ಜಾರ್ಜ್ ಅವರು, “ಇಂಧನ ಸಚಿವರೂ ಆಗಿರುವ ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಅವರ ಬೆಂಬಲದೊಂದಿಗೆ ಈ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಮಹಿಳೆಯರು ಸಬಲೀಕರಣ ಸಾಧ್ಯವಾಗಿದೆ,” ಎಂದರು.

“ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಕಲೆ ಮತ್ತು ಕರಕುಶಲತೆ, ಕಸೂತಿ ಮತ್ತು ಟೈಲರಿಂಗ್ ಮತ್ತು ಕಂಪ್ಯೂಟರ್ ಕೌಶಲ್ಯಗಳಲ್ಲಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ವಿತರಿಸಿದ ಪ್ರಮಾಣ ಪತ್ರವು ಕೇವಲ ಅರ್ಹತೆಯನ್ನು ಪ್ರತಿನಿಧಿಸುವುದಿಲ್ಲ, ಅವರಲ್ಲಿ ಆತ್ಮ ವಿಶ್ವಾಸ, ಸ್ವಾವಲಂಬನೆ ಮತ್ತು ಹೊಸ ಆರಂಭದತ್ತ ದಿಟ್ಟ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ,” ಎಂದು ಹೇಳಿದರು.

“ಕೇಳಚಂದ್ರ ಫೌಂಡೇಶನ್‌ನ ಈ ಉಪಕ್ರಮವು ಮಹಿಳೆಯರಲ್ಲಿ ಕೌಶಲ್ಯಗಳನ್ನು ಪೋಷಿಸುವುದರ ಜತೆಗೆ ಅವರ ಜೀವನೋಪಾಯಕ್ಕೆ ಅವಕಾಶ ಮಾಡಿಕೊಡುವುದಾಗಿದೆ. ಅಲ್ಲದೆ, ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಾಧಿಸಲು ಅನುವು ಮಾಡಿಕೊಡುವ ಬದ್ಧತೆಯ ಕಾರ್ಯಕ್ರಮವಾಗಿದೆ. ತರಬೇತಿ ಪಡೆದ ಮಹಿಳೆಯರು ಸಬಲರಾಗಿ ತಮಗಾಗಿ, ತಮ್ಮ ಕುಟುಂಬಗಳು ಹಾಗೂ ಸಮುದಾಯಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಸಿದ್ಧರಾಗಿದ್ದಾರೆ,” ಎಂದು ತಿಳಿಸಿದರು.

“ತರಬೇತಿ ಪಡೆದಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಸ್ವಾಲಂಬಿಗಳಾಗುವತ್ತ ನಿಮ್ಮ ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮವು ನಿಜವಾಗಿಯೂ ಸ್ಪೂರ್ತಿದಾಯಕ. ಈ ಮೈಲಿಗಲ್ಲು ನಿಮಗೆ ಸಾಕಷ್ಟು ಆರ್ಥಿಕ ಅವಕಾಶಗಳನ್ನು ಕಲ್ಪಿಸುವುದರ ಜತೆಗೆ ಯಶಸ್ಸಿನ ಬಾಗಿಲು ತೆರೆಯಲಿ,” ಎಂದು ಸುಜಾ ಜಾರ್ಜ್ ಹಾರೈಸಿದರು.

ಕೇಳಚಂದ್ರ ಫೌಂಡೇಶನ್‌ನ ನಿರ್ದೇಶಕಿ ಡಾ.ತಿವೇಣಿ ಅವರು ಮಾತನಾಡಿ, ಸರ್ವಜ್ಞನಗರ ಕ್ಷೇತದ ಮಹಿಳೆಯರಿಗೆ ಶಕ್ತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಸಚಿವ ಕೆ.ಜೆ.ಜಾರ್ಜ್ ಅವರು ಇಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ ಕೌಶಲ್ಯ ತರಬೇತಿ ಕಂದ್ರ ಆರಂಭವಾಗುವಂತೆ ನೋಡಿಕೊಂಡರು. ಪಸ್ತುತ ಇಲ್ಲಿ ಸಾವಿರಾರು ಮಂದಿ ಡಯಾಲಿಸಿಸ್ ಸೌಲಭ್ಯ ಪಡೆಯುುದರೊಂದಿಗೆ ಕೌಶಲ್ಯ ತರಬೇತಿಯನ್ನೂ ತೆಗೆದುಕೊಳ್ಳುತ್ತಿದ್ದಾರೆ,” ಎಂದರು.

15 ವರ್ಷದಲ್ಲಿ ನಂ. ಒನ್ ಕ್ಷೇತ್ರ:

ವಾರ್ಡ್ ಅಧ್ಯಕ್ಷ ಎರನ್ ಸುರೇಶ್ ಮಾತನಾಡಿ, “ಕೌಶಲ್ಯ ಅಭಿವೃದ್ಧಿ, ಶಿಕ್ಷಣ ಕ್ಷೇತ್ರಕ್ಕೆ ಚಿವ ಕೆ.ಜೆ.ಜಾರ್ಜ್ ಅವರು ಗಣನೀಯ ಕೊಡುಗೆ ನೀಡಿದ್ದು, ಅವರ ಜನಪರ ಕಾಳಜಿಯಿಂದಾಗಿ ಸರ್ವಜ್ಞನಗರ ವಿಧಾಸಭಾ ಕ್ಷೇತ್ರವು ರಾಜ್ಯದ ಅನೇಕ ಕ್ಷೇತ್ರಗಳಿಂದ ಹತ್ತು ವರ್ಷದಷ್ಟು ಮುದುವರಿದಿದೆ. ಕ್ಷೇತ್ರದಲ್ಲಿ ಶಾಲೆಗೆ ಶಿಕ್ಷಕರು, ಮಕ್ಕಳ ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾರೆ. ಕೆ.ಜೆ.ಜಾರ್ಜ್ ಅವರ ನೇತೃತ್ದಲ್ಲಿ ಇನ್ನು 15 ವರ್ಷದಲ್ಲಿ ಸರ್ವಜ್ಞನಗರ ಕ್ಷೇತ್ರವು ರಾಜ್ಯದಲ್ಲೇ ನಂಬರ್ ವನ್ ವಿಧಾಸಭಾ ಕ್ಷೇತ್ರವಾಗಿ ಹೊರಹೊಮ್ಮಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ವಜ್ಞನಗರ ಕ್ಷೇತ್ರದ ನಾಗರಿಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವರಿಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಕೇಳಚಂದ್ರ ಫೌಂಡೇಷನ್ ವತಿಯಿಂದ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದು ಪ್ರಮಾಣಪತ್ರ ಪಡೆದ ಎಲ್ಲರಿಗೂ ಅಭಿನದನೆಗಳು. ಭವಿಷ್ಯದಲ್ಲಿ ನಿಮ್ಮ ಯಶಸ್ಸುಇತರರಿಗೂ ಸ್ಪೂರ್ತಿಯಾಗಿ ಅವರೂ ಕೌಶಲ್ಯವಂತರಾಗಲಿ ಎಂದು ಹಾರೈಸುತ್ತೇನೆ. -ಕೆ.ಜೆ.ಜಾರ್ಜ್, ಇಂಧನ ಸಚಿವರು

Share. Facebook Twitter LinkedIn WhatsApp Email

Related Posts

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM1 Min Read

ಫೆ.14ರಂದ ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ: ಸಚಿವ ಈಶ್ವರ ಖಂಡ್ರೆ

10/02/2026 8:39 PM1 Min Read

ಬಿಜೆಪಿಗರ ಹೋರಾಟ ಪ್ರಚಾರಕ್ಕೆ, ಜನರ ಹಿತಕ್ಕಾಗಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

10/02/2026 8:36 PM1 Min Read
Recent News

ಶುಗರ್ ಇರುವವರು ರಾತ್ರಿ ‘ಜೋಳದ ರೊಟ್ಟಿ’ ತಿಂದ್ರೆ ಏನಾಗುತ್ತೆ ಗೊತ್ತಾ.?

10/02/2026 9:10 PM

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

10/02/2026 8:51 PM

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM

ಫೆ.14ರಂದ ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ: ಸಚಿವ ಈಶ್ವರ ಖಂಡ್ರೆ

10/02/2026 8:39 PM
State News
KARNATAKA

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

By kannadanewsnow0910/02/2026 8:51 PM KARNATAKA 2 Mins Read

ಬೆಂಗಳೂರು: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ…

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM

ಫೆ.14ರಂದ ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ: ಸಚಿವ ಈಶ್ವರ ಖಂಡ್ರೆ

10/02/2026 8:39 PM

ಬಿಜೆಪಿಗರ ಹೋರಾಟ ಪ್ರಚಾರಕ್ಕೆ, ಜನರ ಹಿತಕ್ಕಾಗಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

10/02/2026 8:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.