ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ನ್ಯಾಯಾಲಯದಲ್ಲೇ ವ್ಯಕ್ತಿಯೊಬ್ಬ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ.
ಕೋರ್ಟ್ ಕೇಸ್ ಸಂಬಂಧ ಬೆಂಗಳೂರಿನ ಹೈಕೋರ್ಟ್ ನ್ಯಾಯಾಲಯಕ್ಕೆ ಮೈಸೂರು ಮೂಲಕ ಶ್ರೀನಿವಾಸ್ ಎಂಬುವರು ಆಗಮಿಸಿದ್ದರು. ಹೈಕೋರ್ಟ್ ಕೋರ್ಟ್ ಹಾಲ್.1ರಲ್ಲಿ ಪ್ರಕರಣವೊಂದರ ಸಂಬಂಧ ವಿಚಾರಣೆ ಅಂತ್ಯಕ್ಕೆ ತಲುಪಿದ್ದಂತ ಶ್ರೀನಿವಾಸ್, ನ್ಯಾಯಮೂರ್ತಿಗಳ ಎದುರು ಬಂದು, ಅರ್ಜಿಯೊಂದನ್ನು ನ್ಯಾಯಾಲಯಕ ಸಿಬ್ಬಂದಿಗಳಿಗೆ ನೀಡಿದರು.
ಹಳೆಯದ್ದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಳ್ಳದೆ ಮೈತ್ರಿಗೆ ಸಹಕರಿಸಿ ಎಂದಿದ್ದಾರೆ : HDK ಭೇಟಿ ಕುರಿತು ಸುಮಲತಾ ಸ್ಪಷ್ಟನೆ
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಅರ್ಜಿಯೊಂದನ್ನು ನೀಡಿದ ಬಳಿಕ ಥಿಯೇಟರ್ ನಲ್ಲಿ ಬಳಸುವ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದಂತ ಪೊಲೀಸರು, ತಕ್ಷಣ ಶ್ರೀನಿವಾಸ್ ಅನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಹೈಕೋರ್ಟ್ ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.
ಹೈದ್ರಾಬಾದ್ ಮೂಲದ ಕಂಪನಿಯಲ್ಲಿ ಲಕ್ಷಾಂತರ ವಂಚನೆ
ಘಟನೆ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಶ್ರೀನಿವಾಸ್ ಎನ್ನುವವರನ್ನು ಮೈಸೂರು ನಿವಾಸಿ ಎಂದು ಹೇಳಲಾಗುತ್ತಿದ್ದು, ಹೈದರಾಬಾದ್ ಮೂಲದ ಕಂಪನಿಯಲ್ಲಿ ಶ್ರೀನಿವಾಸನವರು ಹೂಡಿಕೆ ಮಾಡಿದ್ದರು, ಲಕ್ಷಾಂತರ ಹಣವನ್ನು ಶ್ರೀನಿವಾಸ ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ. ಶ್ರೀನಿವಾಸ್ ಅವರು 93 ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ ತಮಗೆ ವಂಚನೆ ಆಗಿದೆ ಎಂದು ದೂರು ನೀಡಿದ್ದರು.
BREAKING : ‘ಬಾಕ್ಸರ್ ವಿಜೇಂದರ್ ಸಿಂಗ್’ ಕಾಂಗ್ರೆಸ್ ತೊರೆದು ‘ಬಿಜೆಪಿ’ಗೆ ಸೇರ್ಪಡೆ
93 ಲಕ್ಷ ಹಣ ವಂಚಿಸಿದ್ದಾರೆಂದು ದೂರು ನೀಡಿದ್ದರು ಮೈಸೂರಿನ ವಿಜಯನಗರ ಠಾಣೆಯಲ್ಲಿ ಈ ಸಂಬಂಧ ಕುರಿತು FIR ದಾಖಲಾಗಿತ್ತು.ಈ ಕುರಿತಂತೆ ಹೈಕೋರ್ಟ್ ಏಕ ಸದಸ್ಯಪೀಠದಲ್ಲಿ ಈ ಸಂಬಂಧಪಟ್ಟಂತೆ ಎಫ್ಐಆರ್ ರದ್ದಾಗಿತ್ತು. ಆನಂತರದಲ್ಲಿ ಶ್ರೀನಿವಾಸ್ ಮನನೊಂದಿದ್ದರೂ ಎಂದು ತಿಳಿದುಬಂದಿದೆ.ಈಗ ಶ್ರೀನಿವಾಸ್ ಸಹಜವಾಗಿ ಕಂಗಾಲಾಗಿದ್ದು ಕೋರ್ಟಿಗೆ ಬಂದು ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.